Advertisement

Ghaziabad: ಚಹಾ ಮಾಡುವ ವಿಚಾರಕ್ಕೆ ಜಗಳ; ಪತ್ನಿಯನ್ನು ಇರಿದು ಹತ್ಯೆಗೈದ ಪತಿ

12:29 PM Dec 20, 2023 | Team Udayavani |

ಲಕ್ನೋ: ಚಹಾ ಮಾಡಿಕೊಡುವ ವಿಚಾರದಲ್ಲಿ ಕಲಹ ಉಂಟಾಗಿ ಪತಿಯೊಬ್ಬ ತನ್ನ ಪತ್ನಿಯನ್ನೇ ಇರಿದು ಕೊಂದಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.

Advertisement

ಮಂಗಳವಾರ(ಡಿ.19 ರಂದು) ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಧರ್ಮವೀರ್ ಮತ್ತು ಆತನ ಪತ್ನಿ ಸುಂದರಿ (50) ನಡುವೆ ಚಹಾ ಮಾಡುವ ವಿಚಾರದಲ್ಲಿ ಜಗಳ ನಡೆದಿದೆ.  ಜಗಳ ತಾರಕಕ್ಕೇರಿದ್ದು, ಮನೆಯಲ್ಲಿಟ್ಟಿದ್ದ ಕತ್ತಿಯಂತಹ ಆಯುಧದಿಂದ ಧರ್ಮವೀರ್ ಪತ್ನಿಯ ಕುತ್ತಿಗೆಗೆ ಮೂರ್ನಾಲ್ಕು ಬಾರಿ ಹಲ್ಲೆ ನಡೆಸಿದ್ದಾನೆ. ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆ ಬಗ್ಗೆ‌ ಮಹಿಳೆಯ ಮಗ ಪೊಲೀಸರಿಗೆ ಮಾಹಿತಿ ನೀಡಿದ್ದು, ತನ್ನ‌ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಘಟನೆ ನಡೆದ ‘ಫಜಲಗಢ ಗ್ರಾಮಕ್ಕೆ ತೆರಳಿ, ಆರೋಪಿಯನ್ನು ಬಂಧಿಸಿದ್ದಾರೆ.

ಸದ್ಯ ಮಹಿಳೆಯ ಪುತ್ರನ ದೂರಿನ ಮೇರೆಗೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮಗಳಿಗಾಗಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next