Advertisement

ಘಾಟ್‌ಕೋಪರ್‌ ಶ್ರೀ ಮೂಕಾಂಬಿಕಾ, ಕಾಲಭೈರವ ಮಂದಿರ: ವಾರ್ಷಿಕ ಮಹಾಪೂಜೆ

09:04 PM Feb 08, 2021 | Team Udayavani |

ಮುಂಬಯಿ: ಘಾಟ್‌ಕೋಪರ್‌ ಪಂತ್‌ ನಗರದ ಶ್ರೀ ಮೂಕಾಂಬಿಕಾ ಹಾಗೂ ಕಾಲಭೈರವ ಮಂದಿರದ 50ನೇ ವಾರ್ಷಿಕ ಮಹಾಪೂಜೆಯು ಜ. 14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಕಲಶ ಪ್ರತಿಷ್ಠಾಪನೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಪ್ರಸಾದ ವಿತರಣೆ, ರಾತ್ರಿ ಖಾರ್‌ಪೂರ್ವದ ಶನಿಮಹಾತ್ಮ ಸೇವಾ ಸಮಿತಿಯ ಕಾರ್ಯಕರ್ತರು ಹಾಗೂ ಮೀರಾರೋಡ್‌ ಮಹಿಳಾ ಭಕ್ತರಿಂದ ಭಜನೆ, ರಾತ್ರಿ ಕಾಲಭೈರವ ಮಂದಿರದಲ್ಲಿ ಮಹಾ ಮಂಗಳಾರತಿ ನಡೆಯಿತು.

ಇದನ್ನೂ ಓದಿ:ಮಾರ್ಚ್‌ನಲ್ಲಿ ಭಾರತಕ್ಕೆ ಬರಲಿವೆ 17 ರಫೇಲ್‌ ವಿಮಾನಗಳು : ರಕ್ಷಣಾ ಸಚಿವ

ಈ ಸಂದರ್ಭ ಕಳೆದ 50 ವರ್ಷಗಳಿಂದ ಮಂದಿರದಲ್ಲಿ ಸೇವೆ ಸಲ್ಲಿಸುತ್ತಿರುವ ಮಂದಿರದ ಕಾರ್ಯಕರ್ತರನ್ನು, ಗಣ್ಯರು ಹಾಗೂ ವಿವಿಧ ಸಂಘ – ಸಂಸ್ಥೆಗಳಾದ ಶನಿಮಹಾತ್ಮಾ ಸೇವಾ ಸಮಿತಿ ಟ್ರಸ್ಟ್‌ ಖಾರ್‌ಪೂರ್ವ, ಶ್ರೀ ದುರ್ಗಾಪರಮೇಶ್ವರೀ ಮಂದಿರ ಘಾಟ್‌ಕೋಪರ್‌, ಶನಿಮಂದಿರ ಡೊಂಬಿವಲಿ, ಶ್ರೀ ಜೈಭವಾನಿ ಶನೀಶ್ವರ ಸೇವಾ ಸಮಿತಿ ಘಾಟ್‌ಕೋಪರ್‌, ವೆಸ್ಟರ್ನ್ ಇಂಡಿಯಾ ಶನಿಮಹಾತ್ಮ ಪೂಜಾ ಸಮಿತಿ, ಫೋರ್ಟ್‌ ಮುಂಬಯಿ, ಅಯ್ಯಪ್ಪ ಸ್ವಾಮಿ ಮಂದಿರ ಘಾಟ್‌ಕೋಪರ್‌ ಸಂಸ್ಥೆಗಳ ಪದಾಧಿಕಾರಿಗಳನ್ನು ಹಾಗೂ ಐವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮಂದಿರದ ಸ್ಥಾಪಕರಾದ ದಿ| ಸುಂದರ ಸಾಲ್ಯಾನ್‌ ಅವರ ಪತ್ನಿ ಮೀನಾಕ್ಷಿ ಸುಂದರ್‌ ಸಾಲ್ಯಾನ್‌, ತಾರಾನಾಥ್‌ ಸುಂದರ್‌ ಸಾಲ್ಯಾನ್‌, ಕಾರ್ಯಕರ್ತರನ್ನು ಸ್ಮರಣಿಕೆ, ಮಹಾಪ್ರಸಾದವನ್ನಿತ್ತು ಗೌರವಿಸಲಾಯಿತು. ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next