ಮುಂಬಯಿ: ಘಾಟ್‌ಕೋಪರ್ ಪಶ್ಚಿಮದ ಜಗದೂಶ ನಗರದ ರೈಫಲ್ ರೇಂಜ್, ಶಿಲ್ಪ ಬಿಲ್ಡಿಂಗ್ ಸಮೀಪದ, ಸಾರಂಗ್ ಚಾಲ್ ಇಲ್ಲಿನ ಶ್ರೀ ಜೈ ಭವಾನಿ ಶನೀಶ್ವರ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಭವಾನಿ ಶನೀಶ್ವರ ದೇವಸ್ಥಾನದಲ್ಲಿ 41ನೇ ವಾರ್ಷಿಕ ಮಹಾಪೂಜೆಯು ಡಿ. 16ರಂದು ಸರಳ ರೀತಿಯಲ್ಲಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆಯಿಂದ ಸ್ವಸ್ತಿ ಪುಣ್ಯಾಹ ವಾಚನ, ನಿತ್ಯಪೂಜೆ, ನವಕ ಕಲಶಪೂಜೆ, ಗಣಹೋಮ, ನವಗ್ರಹ ಶಾಂತಿ, ಕಲಶಾಭಿಷೇಕ, ಶ್ರೀ ಸತ್ಯನಾರಾಯಣ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ಆಯೋಜಿಸಲಾಗಿತ್ತು. ಧಾರ್ಮಿಕ ವಿಧಿ-ವಿಧಾನಗಳನ್ನು ಪ್ರಧಾನ ಅರ್ಚಕ ರಮೇಶ್ ಶಾಂತಿ ಅವರು ನೆರವೇರಿಸಿದರು. ಸಹ ಅರ್ಚಕರಾದ ಶೇಖರ್ ಶಾಂತಿ, ಗಂಗಾಧರ ಕಲ್ಲಾಡಿ, ಸುದರ್ಶನ್ ಶಾಂತಿ, ಸಂಜೀವ ಶಾಂತಿ ಮೊದಲಾದವರು ಸಹಕರಿಸಿದರು.
ಸಮಿತಿಯ ಪ್ರಕಾಶ್ ಪೂಜಾರಿ ಮತ್ತು ಹೇಮಲತಾ ಪೂಜಾರಿ ದಂಪತಿ ಹಾಗೂ ಕೇಶವ ಸುವರ್ಣ ಕಿಲ್ಪಾಡಿ ಮತ್ತು ಗುಲಾಬಿ ಸುವರ್ಣ ದಂಪತಿ ಸಂಜೆಯವರೆಗೆ ಶ್ರೀ ಶನಿಗ್ರಂಥ ಪಾರಾಯಣವು ಶ್ರೀ ಜೈ ಭವಾನಿ ಶನೀಶ್ವರ ಸಮಿತಿಯ ಸದಸ್ಯರಿಂದ ಹಾಗೂ ನಗರದ ವಿವಿಧೆಡೆಯ ಗ್ರಂಥ ವಾಚಕರ ಹಾಗೂ ಅರ್ಥದಾರಿಗಳ ಕೂಡುವಿಕೆಯಲ್ಲಿ ಜರಗಿತು.
ಇದನ್ನೂ ಓದಿ:ಬಿಎಸ್‌ವೈ-ಈಶ್ವರಪ್ಪ ರಾಜೀನಾಮೆ ನೀಡಲಿ
ಬಳಿಕ ಭಜನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನೆರವೇರಿತು. ಶ್ರೀ ಜೈ ಭವಾನಿ ಶನೀಶ್ವರ ಸೇವಾ ಸಮಿತಿಯ ಅಧ್ಯಕ್ಷ ಪ್ರವೀಣ್ ಪರ್ದೇಶಿ, ಉಪಾಧ್ಯಕ್ಷ ಸೋಮನಾಥ್ ಪೂಜಾರಿ, ಕಾರ್ಯದರ್ಶಿ ಪ್ರಕಾಶ್ ಪೂಜಾರಿ, ಜತೆ ಕಾರ್ಯದರ್ಶಿ ಪ್ರೇಮಾ ಕುಂದರ್, ಕೋಶಾಧಿಕಾರಿ ಸಂತೋಷ್ ಪಾವಸ್ಕರ್, ಜತೆ ಕೋಶಾಧಿಕಾರಿ ಅಮಯ್ ಮಯೇಕರ್, ಸಲಹೆಗಾರರಾದ ಶೇಖರ್ ಅಮೀನ್, ಬಪ್ಪನಾಡು ಕೂಸಪ್ಪ ಹಾಗೂ ಸಮಿತಿಯ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.
ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣ ವಾಗಿ ಸರಳ ರೀತಿಯಲ್ಲಿ ಕಾರ್ಯಕ್ರಮ ನಡೆ ಯಿತು. ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಉದ್ಯಮಿಗಳು, ದಾನಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಗಣ್ಯರು, ತುಳು -ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಕ್ತಾದಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾದರು.