Advertisement

ಘಾಟ್‌ಕೋಪರ್‌ ಕನ್ನಡ ವೆಲ್ಫೇರ್‌ ಸೊಸೈಟಿಯ ವಾರ್ಷಿಕ ವಿಹಾರಕೂಟ

10:06 AM Feb 16, 2018 | |

ಮುಂಬಯಿ: ಘಾಟ್‌ಕೋಪರ್‌ ಕನ್ನಡ ವೆಲ್ಫೇರ್‌ ಸೊಸೈಟಿಯ ವಾರ್ಷಿಕ ವಿಹಾರಕೂಟವು ಜ. 28 ರಂದು ರಸಾಯಿನಿಯ ಶಿವಗಂಗಾ ಜಲವಿಹಾರ ಕೇಂದ್ರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಸಂಸ್ಥೆಯ ಸದಸ್ಯರು ಹಾಗೂ ಅವರ ಮಕ್ಕಳು ವಿಹಾರಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಕಾರ್ಯದರ್ಶಿ ಸುಧಾಕರ ಎಲ್ಲೂರು, ಕೋಶಾಧಿಕಾರಿ ಹರೀಶ್‌ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು, ಸದಸ್ಯರುಗಳಾದ ರಾಧಾಕೃಷ್ಣ ಶೆಟ್ಟಿ, ರಮಾನಂದ ಶೆಟ್ಟಿ, ಸುರೇಶ್‌ ಶೆಟ್ಟಿ ಮೊದಲಾದವರ ನೇತೃತ್ವದಲ್ಲಿ ವಿವಿಧ ಸಾಂಸ್ಕೃತಿಕ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ವಯೋಮಿತಿಗೆ ಅನುಗುಣವಾಗಿ ಚೆಂಡು ಎಸೆತ, ಲೆಮನ್‌ಸ್ಪೂನ್‌, ಸ್ಯಾಕ್‌ರೇಸ್‌ ಇನ್ನಿತರ ಸ್ಪರ್ಧೆಗಳಲ್ಲಿ ಸದಸ್ಯರು, ಮಕ್ಕಳು ಪಾಲ್ಗೊಂಡರು. ಆನಂತರ ಹಗ್ಗಜಗ್ಗಾಟ ಸ್ಪರ್ಧೆ ನೆರವೇರಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸದಸ್ಯರುಳಾಗದ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ದಿವಾಕರ ಶೆಟ್ಟಿ ಕುರ್ಲಾ, ಜಯ ಶೆಟ್ಟಿ, ಶಿವಣ್ಣ ಶೆಟ್ಟಿ, ಕಾರ್ಯದರ್ಶಿ ಸುಧಾಕರ ಎಲ್ಲೂರು, ಕೋಶಾಧಿಕಾರಿ ಹರೀಶ್‌ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಅವರು ಮಾತನಾಡಿ, ನಾನು ಕನ್ನಡ ವೆಲ್ಫೆàರ್‌ ಸೊಸೈಟಿಯ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ತುಂಬಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರೆಲ್ಲರು ಅಭಿನಂದನಾರ್ಹರು. ಸಂಸ್ಥೆಯ ಸುವರ್ಣ ಮಹೋತ್ಸವವು ಯಶಸ್ವಿಯಾಗಿ ನೆರವೇರಲಿ ಎಂದು ನುಡಿದು ಶುಭಹಾರೈಸಿದರು.

ಜಯ ಶೆಟ್ಟಿ ಅವರು ಮಾತನಾಡಿ, ಇಂತಹ ಒಳ್ಳೆಯ ಕಾರ್ಯಕ್ರಮಕ್ಕೆ ನನ್ನನ್ನು ಆಮಂತ್ರಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಕನ್ನಡ ವೆಲ್ಫೆàರ್‌ ಸೊಸೈಟಿಯ ಕಾರ್ಯಾಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸುವರ್ಣ ಮಹೋತ್ಸವದ ಎಲ್ಲಾ ಯೋಜನೆಗಳು ಯಶಸ್ಸನ್ನು ಕಾಣಲಿ ಎಂದರು.

Advertisement

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್‌. ಶೆಟ್ಟಿ ಅವರು ಮಾತನಾಡಿ, ಸೇರಿದ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಅಭಿನಂದಿಸಿದರು. ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳಿಗೆ ನಿಮ್ಮ ಸಹಕಾರ ಸದಾಯಿರಲಿ ಎಂದರು. ಗಣ್ಯರು ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು.

ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ ಅವರು ಮಾತನಾಡಿ, ಕನ್ನಡ ವೆಲ್ಫೆàರ್‌ ಸೊಸೈಟಿಯ ಎಲ್ಲಾ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಕನ್ನಡ ಮನಸುಗಳಿಗೆ ಚಿರಋಣಿಯಾಗಿದ್ದೇವೆ. ಇನ್ನು ಮುಂದೆಯೂ ನಮ್ಮ ಸುವರ್ಣ ಮಹೋತ್ಸವವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, 

ಅದಕ್ಕೆ ತಮ್ಮೆಲ್ಲರ ಸಹಕಾರ ಸದಾಯಿರಲಿ. ನಾವೆಲ್ಲರು ಒಗ್ಗಟ್ಟಿನಿಂದ ಸಂಸ್ಥೆಯ ಏಳ್ಗೆಯಲ್ಲಿ ಶ್ರಮಿಸೋಣ ಎಂದು ನುಡಿದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ರಾಧಾಕೃಷ್ಣ ಶೆಟ್ಟಿ, ರಮಾನಂದ ಶೆಟ್ಟಿ, ನಾರಾಯಣ ಶೆಟ್ಟಿ ನಂದಳಿಕೆ, ಸುರೇಶ್‌ ಶೆಟ್ಟಿ, ಸಿಎ ಭರತ್‌ ಶೆಟ್ಟಿ, ವಿಜಯ ಶೆಟ್ಟಿ, ಹಿರಿಯಣ್ಣ ಶೆಟ್ಟಿ, ತಿಮ್ಮ ದೇವಾಡಿಗ, ಶಂಕರ್‌ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಪ್ರಮೀಳಾ ಶೆಟ್ಟಿ, ಸುಧಾಕರ ಎಲ್ಲೂರು ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next