Advertisement

ಘಾಟ್‌ಕೋಪರ್‌ ಕನ್ನಡ ವೆಲ್ಫೇರ್‌ ಸೊಸೈಟಿ :ಸಾಹಿತ್ಯ ಸಂಭ್ರಮ

05:09 PM Aug 21, 2018 | |

ಮುಂಬಯಿ: ಐವತ್ತರ ಚಾರಿತ್ರಿಕ ನೆಲೆಯ ವೇದಿಕೆಯಲ್ಲಿ ನಾರಾಯಣ ಗುರುಗಳ ಕಾರ್ಯಕ್ರಮ ನೆರವೇರಿಸುವುದೇ ನನಗೊಂದು ಅಭಿಮಾನ. ತುಳುನಾಡ ಇಡೀ ಪರಿವರ್ತನೆಗೆ ಮುಂಬಯಿಗರ ಶ್ರಮ ಅನುಪಮವಾದುದು. ತುಳು ಸಂಸ್ಕೃತಿಯನ್ನು ಮೆಲುಕು ಹಾಕುವುದೆಂದರೆ ಅದೇ ಒಂದು ದೊಡ್ಡ ಹಿರಿಮೆಯಾಗಿದೆ. ತುಳು ಎನ್ನುವುದೇ ಒಂದು ಕುಟುಂಬ. ಕುಲ-ಕಸುಬುಗಳಿಂದ ಕೊಡುಕೊಳ್ಳುವಿಕೆಯ ಬದುಕಿಗೆ ತುಳುವರು ಅಗ್ರರು. ಬೆಸೆದು ಬೆಳೆದ ಏಕತೆಯ ಸಂಸ್ಕೃತಿ ತುಳುವರಲ್ಲಿದ್ದು ಆ ಮೂಲಕ ಬಳಗವಾಗಿ ಬಾಳುವುದಕ್ಕೆ ತುಳುವರು ಮಾದರಿ. ಇದಕ್ಕೆಲ್ಲಾ ನಾರಾಯಣ ಗುರುಗಳ ಸಮಾಜ ಸುಧಾರಣಾ ಕ್ರಾಂತಿಯೂ ಪೂರಕವಾಗಿದೆ. ಅಜ್ಞಾನವನ್ನು ಜ್ಞಾನೋದಯಗೊಳಿಸಿದ ಸಂತರೇ ನಾರಾಯಣ ಗುರುಗಳು.  ಇಂತಹ ನಾರಾಯಣ ಗುರುಗಳ ಮಾನವೀಯ ಧರ್ಮದ ಕಲ್ಪನೆ ಆಧುನಿಕ ಯುಗಕ್ಕೆ ಮಾದರಿಯಾಗಿದೆ. ಅವರ ಚಿಂತನೆ ಸರ್ವ ಶ್ರೇಷ್ಠವಾದುದು ಎಂದು ಆಳ್ವಾಸ್‌ ಕಾಲೇಜು ಮೂಡಬಿದಿರೆಯ ಪ್ರಾಧ್ಯಾಪಕ ಡಾ| ಯೋಗೀಶ್‌ ಕೈರೋಡಿ ಅವರು ನುಡಿದರು.

Advertisement

ಆ. 19 ರಂದು ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್ಕೊàಪರ್‌ ಇದರ ಸುವರ್ಣ ಮಹೋತ್ಸವ ವರ್ಷಾಚರಣಾ ನಿಮಿತ್ತ ಮಂಗಳೂರು ವಿಶ್ವವಿದ್ಯಾಲಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಸಹಯೋಗದಲ್ಲಿ ಘಾಟ್‌ಕೋಪರ್‌ ಪಂತ್‌ನಗರದಲ್ಲಿನ ಸೊಸೈಟಿಯ ಬಾಬಾಸ್‌ ಮಹೇಶ್‌ ಎಸ್‌. ಶೆಟ್ಟಿ ಸಭಾಗೃಹದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂಭ್ರಮದಲ್ಲಿ ತುಳು ಸಂಸ್ಕೃತಿಗೆ ಗುರುನಾರಾಯಣರ ಪ್ರಭಾವ ವಿಚಾರವಾಗಿ ಉಪನ್ಯಾಸ ನೀಡಿದ ಅವರು, ಸುವರ್ಣ ಮಹೋತ್ಸವದಲ್ಲಿರುವ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ವೆಲ್ಫೆàರ್‌ ಸೊಸೈಟಿಯ  ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಾಬಾಳಿಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಗಳೂರು ವಿವಿ ಪೀಠಗಳ ಸಂಯೋಜಕ ಮತ್ತು ಉಪ ಕುಲಸಚಿವ ಪ್ರಭಾಕರ ನೀರುಮಾರ್ಗ,  ವಿದ್ವಾಂಸ, ಸಂಶೋಧಕ ಬಾಬು ಶಿವ ಪೂಜಾರಿ, ಕನ್ನಡ ವೆಲ್ಫೆàರ್‌ ಸೊಸೈಟಿಯ ಕಾರ್ಯದರ್ಶಿ ಸುಧಾಕರ ಎಲ್ಲೂರು, ಕೋಶಾಧಿಕಾರಿ ಹರೀಶ್‌ ಎಂ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕನ್ನಡ ಕಟ್ಟುವ ಕೆಲಸವಾಗಲಿ
ಮುಂಬಯಿ  ಕನ್ನಡಿಗರ ಕೆಲಸಗಳೆಲ್ಲವು ಶುದ್ಧ ಮನಸ್ಸಿನಿಂದ ಕೂಡಿದ್ದು. ನಿಮ್ಮಿಂದ ಕನ್ನಡ ಕಟ್ಟುವ ಕೆಲಸ ಇನ್ನೂ ಹೆಚ್ಚಾಗಲಿ. ಕನ್ನಡಿಗರನ್ನು ಒಗ್ಗೂಡಿಸಿ ಕರುನಾಡನ್ನಾಗಿಸುವಂತಾಗಲಿ ಎಂದ‌ು ಪ್ರಭಾಕರ ನೀರುಮಾರ್ಗ ತಿಳಿಸಿದರು.
ಇದೇ ಸಂದರ್ಭದಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ವಹಿಸಿದ್ದರು. ಕಾರ್ಯಕ್ರವನ್ನು ಹಿರಿಯ  ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಉದ್ಘಾಟಿಸಿಸಿದರು.

ಡಾ| ಗಿರಿಜಾ ಶಾಸ್ತ್ರಿ, ಗೋಪಾಲ್‌ ತ್ರಾಸಿ, ಗಣೇಶ್‌ ಕುಮಾರ್‌, ಡಾ| ಕರುಣಾಕರ್‌ ಶೆಟ್ಟಿ ಪಣಿಯೂರು, ಸಾ. ದಯಾ, ಡಾ| ಜಿ. ಪಿ. ಕುಸುಮಾ, ಅಶೋಕ್‌ ವಳದೂರು, ಅಶೋಕ್‌ ಪಕ್ಕಳ, ಶಾರದಾ ಎ. ಅಂಚನ್‌,  ರೋನ್ಸ್‌ ಬಂಟ್ವಾಳ್‌,  ಶಾಂತಾ ಶಾಸ್ತ್ರಿ, ಅಕ್ಷತಾ ದೇಶಪಾಂಡೆ, ಅರುಷಾ ಎನ್‌. ಶೆಟ್ಟಿ ವಿವಿಧ ಭಾಷೆಗಳಲ್ಲಿ ತಮ್ಮ ಸ್ವರಚಿತ ಕವಿತೆಗಳನ್ನು ಪ್ರಸ್ತುತಪಡಿಸಿದರು. ನಾರಾಯಣ ಶೆಟ್ಟಿ ನಂದಳಿಕೆ ತಮ್ಮ ಕವಿತೆ ವಾಚಿಸಿ ಕವಿಗೋಷ್ಠಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Advertisement

ಬಾಬು ಪೂಜಾರಿ ಮಾತನಾಡಿ, ಇದೊಂದು ತುಳು ಕನ್ನಡ ಸಂಸ್ಕೃತಿಯ ಸಂಗಮವಾಗಿದೆ. ಮುಂಬಯಿಯಲ್ಲಿ ಕನ್ನಡದ ತೇರ‌ನ್ನು ಎಳೆದವರು ಬಹುಮುಖ್ಯರು ತುಳುವರೇ ಆಗಿದ್ದು ತುಳು ಕನ್ನಡಕ್ಕಿಂತ ಪುರಾತನ ಭಾಷೆಯಾಗಿದೆ. ಸತ್ತ ಮೇಲೂ ಶಾಂತಿ ಕರುಣಿಸುವ ಶಕ್ತಿ ತುಳು ಸಂಸ್ಕೃತಿಯಲ್ಲಿದೆ ಎಂದು ನುಡಿದರು.

ಶ್ರದ್ಧಾಂಜಲಿ 
ಇತ್ತೀಚೆಗೆ ನಿಧನ ಹೊಂದಿದ   ಮಾಜಿ ಪ್ರಧಾನಿ  ಅಟಲ್‌ ಬಿಹಾರಿ ವಾಜಪೇಯಿ ಮತ್ತು ದೇಶದೆ‌ಲ್ಲೆಡೆ ಅತಿವೃಷ್ಟಿಯಿಂದ  ನಿಧನ ಹೊಂದಿದ ಎಲ್ಲರಿಗೂ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕನ್ನಡ ವೆಲ್ಫೆàರ್‌ಸೊಸೈಟಿಯ ಉಪಾಧ್ಯಕ್ಷ ಜಯರಾಜ್‌ ಜೈನ್‌,  ಕೋಶಾಧಿಕಾರಿ ಹರೀಶ್‌ ಎಂ. ಶೆಟ್ಟಿ, ಜತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಜತೆ ಕೋಶಾಧಿಕಾರಿ ಪೀಟರ್‌ ರೋಡ್ರಿಗಸ್‌, ಮಹಿಳಾ ವಿಭಾಗಧ್ಯಕ್ಷೆ ಶಾಂತಾ  ಎನ್‌. ಶೆಟ್ಟಿ, ಮತ್ತಿತರ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಕಾರ್ಯದರ್ಶಿ ಸುಧಾಕರ ಎಲ್ಲೂರು ಸ್ವಾಗತಿಸಿದರು. ವೀಣಾ ಎಂ. ಶೆಟ್ಟಿ ಪ್ರಾರ್ಥನೆಗೈದರು. 
ಬಂಟರವಾಣಿ ಸಂಪಾದಕ ಅಶೋಕ್‌ ಪಕ್ಕಳ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನಾರಾಯಣ ಗುರುಗಳ ಬಗ್ಗೆ ಮುಂಬಯಿಗರು ಹೆಚ್ಚು ತಿಳಿದವರು. 19 ನೇ ಶತಮಾನದ ಸಂದಿಗ್ಧ ಕಾಲದಲ್ಲಿ ಮತಭೇದ ವಿಶೇಷವಾಗಿತ್ತು. ಆ ಕಾಲಕ್ಕೆ ಗುರುಗಳು ಹುಟ್ಟಿದ್ದರು. ಅಗಾಧ ಲೋಕಾನುಭವವನ್ನು ಹೊಂದಿದ್ದ  ಗುರುಗಳು ಸಮಾಜಕ್ಕೆ ದಾರಿದೀಪವಾದರು. ಅಂತಹ ಪರಮ ಪುರುಷರ ಜೀವನದ ಬಗ್ಗೆ ಪ್ರಸಕ್ತ ಜನತೆ ತಿಳಿಯಬೇಕು ಎನ್ನುವುದೇ ಈ ಕಾರ್ಯಕ್ರಮದ ಉದ್ದೇಶ. ತಮ್ಮೆಲ್ಲರ ಒಗ್ಗೂಡುವಿಕೆ ಮತ್ತು ಆತೊ¾àನ್ನತಿಗೆ ಈ ಕಾರ್ಯಕ್ರಮ ಪೂರಕವಾಗಿದೆೆ.

ಮುದ್ದು  ಮೂಡುಬೆಳ್ಳೆ  , 
ನಿರ್ದೇಶಕರು : ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳೂರು

ಕನ್ನಡದ ಮಾತೃ ಸಂಸ್ಕೃತಿಯ  ಜತೆಗೆ ತಾಯಿನುಡಿ ನಮಗೆ ಪ್ರಿಯವಾಗಬೇಕು. ಜತೆಗೆ ಎಲ್ಲರನ್ನೂ ಒಗ್ಗೂಡಿಸುವಲ್ಲಿ ನಮ್ಮ ಹಿರಿಯರು ಕಟ್ಟಿಬೆಳೆಸಿದ ಸಂಸ್ಥೆಯು ಸದ್ಯ ಸ್ವರ್ಣಮಹೋತ್ಸವದ ತುತ್ತ ತುದಿಯಲ್ಲಿದೆ. ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇವೆ. ಈ  ಸೊಸೈಟಿಯು ಮುಂದೆಯೂ ಕನ್ನಡದ ಮುನ್ನಡೆಗೆ ಸಾಕ್ಷಿಯಾಗಲಿದೆ.
-ನವೀನ್‌ ಶೆಟ್ಟಿ ಇನ್ನಬಾಳಿಕೆ, ಅಧ್ಯಕ್ಷರು : ಕನ್ನಡ ವೆಲ್ಫೆàರ್‌ ಸೊಸೈಟಿ 
ಘಾಟ್‌ಕೋಪರ್‌

 ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next