ಮುಂಬಯಿ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಇದರ ಮಹಿಳಾ ವಿಭಾಗದ ವತಿಯಿಂದ ಆಟಿದ ಅಟಿಲ್ ಅರಗಣೆ ಪಂತ ಜು. 29 ರಂದು ಘಾಟ್‌ಕೋಪರ್ ಪೂರ್ವದ ಪಂತ್ ನಗರದಲ್ಲಿರುವ ಸಂಸ್ಥೆಯ ಶ್ರೀ ಮಹೇಶ್ ಶೆಟ್ಟಿ ಬಾಬಾಸ್ ಗ್ರೂಪ್ ಆಫ್ ಕಂಪೆನಿ ಸಭಾಗೃಹದಲ್ಲಿ ನಡೆಯಿತು.
ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ತುಳುನಾಡಿನ ಆಟಿ ತಿಂಗಳ ವಿಭಿನ್ನ ರೀತಿಯ ಖಾದ್ಯ, ತಿಂಡಿ-ತಿನಸುಗಳನ್ನು ತಯಾರಿಸಿ ಸ್ಪರ್ಧೆಯಲ್ಲಿ ಪ್ರದರ್ಶಿಸಿದರು. ಮಾಂಸಾಹಾರಿ ವಿಭಾಗದಲ್ಲಿ ಮಲ್ಲಿಕಾ ಶೆಟ್ಟಿ ಪ್ರಥಮ, ಪ್ರಮೀಳಾ ಆರ್. ಶೆಟ್ಟಿ ಇನ್ನ ದ್ವಿತೀಯ, ಉಷಾ ಎಚ್. ಶೆಟ್ಟಿ ತೃತೀಯ ಬಹುಮಾನ ಪಡೆದರು. ಸಸ್ಯಾಹಾರಿ ವಿಭಾಗದಲ್ಲಿ ಉಷಾ ಎಚ್. ಶೆಟ್ಟಿ ಇನ್ನ ಪ್ರಥಮ, ಇಂದಿರಾ ವಿ. ಪೂಜಾರಿ ದ್ವಿತೀಯ ಹಾಗೂ ಮಲ್ಲಿಕಾ ಆರ್. ಶೆಟ್ಟಿ ತೃತೀಯ ಬಹುಮಾನಕ್ಕೆ ಭಾಜನರಾದರು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಬಹುಮಾನ ವಿತರಿಸಲಾಯಿತು.
ತೀರ್ಪುಗಾರರಾಗಿ ಕ್ಯಾಟರಿಂಗ್ ಉದ್ಯಮಿಗಳಾದ ಸತೀಶ್ ಶೆಟ್ಟಿ ಮತ್ತು ಶರ್ಮಿಳಾ ದಿನೇಶ್ ಶೆಟ್ಟಿ ಅವರು ಸಹಕರಿಸಿದರು. ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ವೀಣಾ ಎಂ. ಶೆಟ್ಟಿ ಪ್ರಾರ್ಥನೆಗೈದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್. ಶೆಟ್ಟಿ ಅವರು ಸ್ವಾಗತಿಸಿದರು. ಅತಿಥಿಗಳಾಗಿ ಸ್ಥಳೀಯ ನಗರ ಸೇವಕಿ ರಾಖೀ ಜಾಧವ್, ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಶ್ಯಾಮ್ ಶೆಟ್ಟಿ, ಸಾಹಿತಿ, ನಿವೃತ್ತ ಶಿಕ್ಷಕಿ ಡಾ| ವಾಣಿ ಉಚ್ಚಿಲ್ಕರ್, ಸಾಫಲ್ಯ ತ್ತೈಮಾಸಿಕ ಪತ್ರಿಕೆಯ ಸಂಪಾದಕಿ ಡಾ| ಜಿ. ಪಿ. ಕುಸುಮಾ ಅವರು ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಜಯಂತಿ ಆರ್. ಮೊಲಿ, ಕೋಶಾಧಿಕಾರಿ ಪ್ರಮೀಳಾ ಆರ್. ಶೆಟ್ಟಿ, ಜತೆ ಕೋಶಾಧಿಕಾರಿ ಮಲ್ಲಿಕಾ ಆರ್. ಶೆಟ್ಟಿ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ, ರಂಗಕರ್ಮಿ ನಾರಾಯಣ ಶೆಟ್ಟಿ ನಂದಳಿಕೆ ಮತ್ತು ಸದಸ್ಯೆ ಪಲ್ಲವಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ವೆಲ್ಫೆàರ್ ಸೊಸೈಟಿಯ ಕಾರ್ಯದರ್ಶಿ ಸುಧಾಕರ ಎಲ್ಲೂರು, ಉಪಾಧ್ಯಕ್ಷ ಜಯರಾಜ್ ಜೈನ್, ಕೋಶಾಧಿಕಾರಿ ಹರೀಶ್ ಶೆಟ್ಟಿ, ಜತೆ ಕೋಶಾಧಿಕಾರಿ ಪೀಟರ್ ರೊಡ್ರಿಗಸ್, ಜತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಸದಸ್ಯರಾದ ರಾಧಾಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ, ತಿಮ್ಮ ದೇವಾಡಿಗ, ಹಿರಿಯಣ್ಣ ಶೆಟ್ಟಿ, ಮಹಿಳಾ ವಿಭಾಗದ ಸದಸ್ಯೆಯರಾದ ವೈಶಾಲಿ ಶೆಟ್ಟಿ, ಶಕುಂತಳಾ, ಚಂದ್ರಾವತಿ, ಉಷಾ ಶೆಟ್ಟಿ, ಮಮತಾ ಶೆಟ್ಟಿ, ಇಂದಿರಾ ಪೂಜಾರಿ, ರಮಾ ಶೆಟ್ಟಿ, ವಿಮಲಾ, ಆಶಾ, ವಿದ್ಯಾ ಶೇಟ್ ಮೊದಲಾದವರು ಸಹಕರಿಸಿದರು. ಬಂಟರ ವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ಮತ್ತು ಸಂಘದ ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಹಾಗೂ ಅನೇಕ ಗಣ್ಯರು, ಸಂಸ್ಥೆಯ ಸದಸ್ಯರು, ಸದಸ್ಯೆಯರು ಉಪಸ್ಥಿತರಿದ್ದರು.