Advertisement
ಜು. 29 ರಂದು ಘಾಟ್‌ಕೋಪರ್ ಪೂರ್ವದ ಪಂತ್ ನಗರದಲ್ಲಿರುವ ಕನ್ನಡ ವೆಲ್ಫೆàರ್ ಸೊಸೈಟಿಯ ಶ್ರೀ ಮಹೇಶ್ ಶೆಟ್ಟಿ ಬಾಬಾಸ್ ಗ್ರೂಪ್ ಆಫ್ ಕಂಪೆನಿ ಸಭಾಗೃಹದಲ್ಲಿ ನಡೆದ ಸಂಸ್ಥೆಯ ಮಹಿಳಾ ವಿಭಾಗದವರ ಆಟಿಡೊಂಜಿ ದಿನ ಮತ್ತು ಅಟಿಲ್ ಅರಗಣೆ ಪಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇಂತಹ ಸಂಸ್ಕಾರ, ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಯುವಪೀಳಿಗೆಗೆ ನಮ್ಮ ಮೂಲ ಸಂಸ್ಕೃತಿಯ ಅರಿವು ಮೂಡಿಸುತ್ತಿದ್ದೇವೆ. ಮುಂದಿನ ಡಿಸೆಂಬರ್‌ನಲ್ಲಿ ನಮ್ಮ ಸಂಸ್ಥೆಯ ಸುವರ್ಣ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದ್ದು, ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದು ಮಹಿಳಾ ಸದಸ್ಯೆಯರನ್ನು ಅಭಿನಂದಿಸಿದರು.
Related Articles
ಇದೇ ಸಂದರ್ಭದಲ್ಲಿ ಆಟಿಡೊಂಜಿ ದಿನ ಹಾಗೂ ಅಟಿಲ್ ಅರಗಣೆ ಪಂತ ಎಂಬ ವಿಶಿಷ್ಟ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಜಯಂತಿ ಆರ್. ಮೊಲಿ, ಕೋಶಾಧಿಕಾರಿ ಪ್ರಮೀಳಾ ಆರ್. ಶೆಟ್ಟಿ, ಜತೆ ಕೋಶಾಧಿಕಾರಿ ಮಲ್ಲಿಕಾ ಆರ್. ಶೆಟ್ಟಿ ಉಪಸ್ಥಿತರಿದ್ದರು.
Advertisement
ಮಾಜಿ ಅಧ್ಯಕ್ಷ, ರಂಗಕರ್ಮಿ ನಾರಾಯಣ ಶೆಟ್ಟಿ ನಂದಳಿಕೆ ಮತ್ತು ಸದಸ್ಯೆ ಪಲ್ಲವಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ವೆಲ್ಫೆàರ್ ಸೊಸೈಟಿಯ ಕಾರ್ಯದರ್ಶಿ ಸುಧಾಕರ ಎಲ್ಲೂರು, ಉಪಾಧ್ಯಕ್ಷ ಜಯರಾಜ್ ಜೈನ್, ಕೋಶಾಧಿಕಾರಿ ಹರೀಶ್ ಶೆಟ್ಟಿ, ಜತೆ ಕೋಶಾಧಿಕಾರಿ ಪೀಟರ್ ರೊಡ್ರಿಗಸ್, ಜತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಸದಸ್ಯರಾದ ರಾಧಾಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ, ತಿಮ್ಮ ದೇವಾಡಿಗ, ಹಿರಿಯಣ್ಣ ಶೆಟ್ಟಿ, ಮಹಿಳಾ ವಿಭಾಗದ ಸದಸ್ಯೆಯರಾದ ವೈಶಾಲಿ ಶೆಟ್ಟಿ, ಶಕುಂತಳಾ, ಚಂದ್ರಾವತಿ, ಉಷಾ ಶೆಟ್ಟಿ, ಮಮತಾ ಶೆಟ್ಟಿ, ಇಂದಿರಾ ಪೂಜಾರಿ, ರಮಾ ಶೆಟ್ಟಿ, ವಿಮಲಾ, ಆಶಾ, ವಿದ್ಯಾ ಶೇಟ್ ಮೊದಲಾದವರು ಸಹಕರಿಸಿದರು. ಮಕ್ಕಳಿಂದ ನೃತ್ಯ ವೈವಿಧ್ಯ, ಆಡಿ ಕಡೆಂಜ ಪ್ರಾತ್ಯಕ್ಷಿಕೆ ನಡೆಯಿತು. ಬಂಟರ ವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ಮತ್ತು ಸಂಘದ ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಹಾಗೂ ಅನೇಕ ಗಣ್ಯರು, ಸಂಸ್ಥೆಯ ಸದಸ್ಯರು, ಸದಸ್ಯೆಯರು ಉಪಸ್ಥಿತರಿದ್ದರು. ಹಿಂದಿನ ಕಾಲದಲ್ಲಿ ಆಟಿ ತಿಂಗಳು ತುಂಬಾ ಕಷ್ಟದ ದಿನವಾಗಿತ್ತು. ಆದರೆ ನಮ್ಮ ಹಿರಿಯರು ತುಂಬಾ ಬುದ್ಧಿವಂತರಾಗಿದ್ದರು. ಆಟಿ ತಿಂಗಳಲ್ಲಿ ಹೆಚ್ಚಾಗಿ ಔಷಧಿಯ ಗುಣವುಳ್ಳ ವಿಭಿನ್ನ ಸೊಪ್ಪುಗಳನ್ನು ತಿಂದು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಅಂದಿನ ಜೀವನ ಪದ್ಧತಿ, ಆಚಾರ, ವಿಚಾರಗಳನ್ನು ಇಂದಿನ ಯುವ ಜನಾಂಗಕ್ಕೆ ಅದರ ಅರಿವು ಮೂಡಿಸುತ್ತಿರುವ ಸೊಸೈಟಿಯ ಕಾರ್ಯ ಅಭಿನಂದನೀಯವಾಗಿದೆ.
-ಶಾರದಾ ಶ್ಯಾಮ್ ಶೆಟ್ಟಿ, ಕಾರ್ಯಾಧ್ಯಕ್ಷೆ, ಬೋಂಬೆ ಬಂಟ್ಸ್ ಅಸೋ. ಮಹಿಳಾ ವಿಭಾಗ
ಚಿತ್ರ : ಸುಭಾಷ್ ಶಿರಿಯಾ