Advertisement

ಕೈಯಲ್ಲಿದ್ದ ಫೋನ್‌ ಜೀವ ಉಳಿಸಿತು! ಕಟ್ಟಡದ ಅವಶೇಷಗಳಡಿ 15 ಗಂಟೆ 

04:21 PM Jul 26, 2017 | Team Udayavani |

ಮುಂಬಯಿ:ಇಲ್ಲಿನ ಘಾಟ್‌ಕೋಪರ್‌ನಲ್ಲಿ ಮಂಗಳವಾರ ಕುಸಿದ 4 ಅಂತಸ್ತಿನ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯನ್ನು 15 ಗಂಟೆಗಳ ಬಳಿಕ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

Advertisement

ಕಟ್ಟಡದಲ್ಲಿದ್ದ ನಿವಾಸದಲ್ಲಿ  ರಾಜೇಶ್‌ ಧೋಶಿ ಎಂಬ 57 ವರ್ಷದ ವ್ಯಕ್ತಿ ಒಬ್ಬರೇ ಇದ್ದರು, ಪತ್ನಿ ಮತ್ತು ಪುತ್ರ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಕಟ್ಟಡ ಕುಸಿದು ಗೊಡೆಯ ತುಂಡಿನಡಿ ಕಾಲು ಸಿಲುಕಿಕೊಂಡು ಏಳಲು ಸಾಧ್ಯವಾಗದೆ ಪರದಾಡಿದ್ದಾರೆ. ಈ ವೇಳೆ ಕೈಯಲ್ಲಿದ್ದ ಮೊಬೈಲ್‌ನಿಂದ ಪುತ್ರನಿಗೆ ಕರೆ ಮಾಡಿ ರಕ್ಷಿಸುವಂತೆ ಕೇಳಿದ್ದಾರೆ.  

ತಕ್ಷಣ ಸ್ಥಳಕ್ಕಾಗಮಿಸಿದ ಪುತ್ರ ಎನ್‌ಡಿಆರ್‌ಎಫ್ ಸಿಬಂದಿಗೆ ಮಾಹಿತಿ ನೀಡಿ ರಕ್ಷಣೆ ಮಾಡುವಂತೆ ಕೋರಿದ್ದಾರೆ. ಅತ್ಯಂತ ಆಪಾಯಕಾರಿ ಸನ್ನಿವೇಶದಲ್ಲಿ ಸತತ 15 ಗಂಟೆಗಳ ಕಾರ್ಯಾಚರಣೆ ನಡೆಸಿ ರಾಜೇಶ್‌ರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ದುರಂತದಲ್ಲಿ 17 ಮಂದಿ ಸಾವನ್ನಪ್ಪಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದುರಂತಕ್ಕೆ ಸಂಬಂಧಿಸಿ ಕಟ್ಟಡದ ಮಾಲಿಕ ಶಿವಸೇನೆ ನಾಯಕನನ್ನು ವಶಕ್ಕೆ ಪಡೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next