Advertisement

ಅಳ್ನಾವರ ಮಾರ್ಕೆಟ್‌ನಲ್ಲಿ ಘಟಪ್ರಭಾ ಕಾಯಿಪಲ್ಲೆ

05:35 PM Feb 18, 2022 | Team Udayavani |

ಅಳ್ನಾವರ: ಕೋವಿಡ್‌ ಕಾಲಮಾನದಲ್ಲಿ ಬಂದ್‌ ಆಗಿದ್ದ ದೂರದ ಘಟಪ್ರಭಾ ಭಾಗದ ತರಕಾರಿ ಮತ್ತೆ ಪಟ್ಟಣಕ್ಕೆ ಬರುತ್ತಿದೆ. ಇಲ್ಲಿನ ಮಂಗಳವಾರ- ಶುಕ್ರವಾರದ ಸಂತೆ ಮತ್ತು ನಿತ್ಯದ ಬೀದಿಬದಿಗಳಲ್ಲಿ ಘಟಪ್ರಭಾ ತರಕಾರಿಯ ಘಮಲು ಜೋರಾಗಿದೆ.

Advertisement

ಮಿನಿ ಲಾರಿಗಳು ಹಾಗೂ ಖಾಸಗಿ ವಾಹನಗಳ ಮೂಲಕ ಮಂಗಳವಾರ ಇಲ್ಲಿ ನಡೆಯುವ ಹೋಲಸೇಲ್‌ ಮಾರುಕಟ್ಟೆಗೆ ತರಕಾರಿ ಹಾಗೂ ಇತರೆ ದಿನಸಿಗಳು ಬರುತ್ತಿದ್ದು, ಅಲ್ಲಿ ಮಾರಾಟ ಆದ ನಂತರ ವ್ಯಾಪಾರಿಗಳು ತಮ್ಮ ಅಂಗಡಿ ಹಾಗೂ ಬೀದಿ ಬದಿ ಇಟ್ಟು ವ್ಯಾಪಾರ ಮಾಡುವುದು ವಾಡಿಕೆ, ಈ ಮೊದಲು ರೈಲು ಮುಖಾಂತರ ತರಕಾರಿ ಮೂಟೆಗಳು ಬರುತ್ತಿದ್ದವು. ಕೋವಿಡ್‌ ಸಮಯದಲ್ಲಿ ಇದು ಬಂದ್‌ ಆಗಿತ್ತು . ಸದ್ಯ ಹುಬ್ಬಳ್ಳಿ-ಮಿರಜ್‌ ಪ್ಯಾಸೆಂಜರ್‌ ರೈಲು ಬಂದ್‌ ಇರುವ ಕಾರಣ ಈ ತರಕಾರಿ ಖಾಸಗಿ ವಾಹನದಲ್ಲಿ ಪಟ್ಟಣಕ್ಕೆ ಬರುತ್ತಿದೆ.

ಇನ್ನು ಡಾವಣಗೇರಿ ಭಾಗದ ಟೊಮೆಟೊ, ಬದನೆಕಾಯಿ, ಬೆಳಗಾವಿಯಿಂದ ಬದನೆಕಾಯಿ, ತಪ್ಪಲು ಪಲ್ಲೆ, ಕೋತಂಬರಿ, ಬೀನ್ಸ್‌, ಹಿರೇಕಾಯಿ, ಧಾರವಾಡ ಭಾಗದ ತಾಜಾ ತರಕಾರಿ, ಹಣ್ಣು, ಹೂವು, ಬೈಲಹೊಂಗಲ ಭಾಗದ ತರಕಾರಿ, ಸಮೀಪದ ಕತ್ರಿ ದಡ್ಡಿ ಭಾಗದ ಬದನೆ, ಉಳ್ಳಾಗಡ್ಡಿ ಸಿವುಡ್‌, ಕರಿಬೇವು ಸೊಪ್ಪು ಹೇರಳವಾಗಿ ಬರುತ್ತಿದೆ ಎಂದು ವ್ಯಾಪಾರಸ್ಥ ಇರ್ಫಾನ್‌ ಬಾಗವಾನ ಹೇಳುತ್ತಾರೆ.

ಮಂಗಳವಾರ ಸಂತೆಗೆ ಧಾರವಾಡ, ಅಮ್ಮಿನಭಾವಿ, ಮಾಧನಬಾವಿ, ಸೌಂದತ್ತಿ, ಕಿತ್ತೂರ, ಹಳಿಯಾಳ ಭಾಗದ ಮದ್ನಳ್ಳಿ, ಮಂಗಳವಾಡ, ಹುಣಚವಾಡ, ಅರ್ಲವಾಡ, ಖಾನಾಪೂರ ಭಾಗದ ಲಿಂಗನಮಠ, ಕಕ್ಕೇರಿ, ಚುಂಚವಾಡ ಗ್ರಾಮಗಳಿಂದ, ಶುಕ್ರವಾರ ಇಂದಿರಾ ನಗರ ಬಡಾವಣೆಯಲ್ಲಿ ನಡೆಯುವ ಸಂತೆಗೆ ಲೋಕಲ್‌ ವ್ಯಾಪಾರಸ್ಥರು ತರಕಾರಿ ಮಾರಲು ಬರುತ್ತಾರೆ.

ತರಕಾರಿ ದರ
ಈರುಳ್ಳಿ ಪ್ರತಿ ಕೆ.ಜಿ.ಗೆ 25 ರಿಂದ 30ರೂ, ಟೊಮೆಟೊ ಪ್ರತಿ ಕೆಜಿಗೆ 15 ರೂ, ಮೆಂತೆ ಸಿವುಡು 10ರೂ.ಗೆ ಎರಡು ಸೂಡ್‌, ಕೋತಂಬರಿ 5 ರೂಗೆ ಒಂದು ಸಿವುಡು, ಬೆಂಡೆಕಾಯಿ ಕೆಜಿಗೆ 80ರೂ, ಬೀನ್ಸ್‌ ಕೆಜಿಗೆ 40 ರಿಂದ 50 ರೂ, ಗಜರಿ ಕೆಜಿಗೆ ರೂ. 60, ಈರುಳ್ಳಿ ಕೆಜಿಗೆ 20 ರಿಂದ 30 ರೂ.ದಂತೆ ಮಾರಾಟವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next