Advertisement

ಶಿರಸಿಯಲ್ಲಿ ಘರ್‌ ವಾಪಸಿ ಅಭಿಯಾನ

04:09 PM Apr 02, 2020 | Suhan S |

ಶಿರಸಿ: ಪೇಟೆಗೆ ಬಂದು ಅನಗತ್ಯ ಸಂಚಾರ ಮಾಡುತ್ತಿರುವವರಿಗೆ ಪೊಲೀಸರು ಘರ್‌ ವಾಪಸಿ ಅಭಿಯಾನ ನಡೆಸಿ ಮರಳಿ ಮನೆಗೆ ಕಳಿಸಿದರು.

Advertisement

ಬದನಗೋಡ ಗ್ರಾಪಂ ವ್ಯಾಪ್ತಿಯ ದಾಸನಕೊಪ್ಪ ಗ್ರಾಮದಲ್ಲಿ ಜಿಯೋ ನೆಟ್‌ ವರ್ಕ್‌ ಕೆಲಸಕ್ಕಾಗಿ ಆಗಮಿಸಿದ ಪಶ್ಚಿಮ ಬಂಗಾಳದ 32 ಕಾರ್ಮಿಕರು ಊರಿಗೆ ಹೊರಟಿದ್ದು, ಅವರನ್ನು ಉಳಿಸಿಕೊಂಡು ಯೋಗಕ್ಷೇಮ ನೋಡಿಕೊಳ್ಳಲಾಯಿತು. ಬದನಗೋಡ ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲ ಹಳ್ಳಿಗಳಿಗೂ ಅಗತ್ಯ ವಸ್ತು ಪೂರೈಸಲು ವ್ಯವಸ್ಥೆ ಮಾಡಲಾಗಿದೆ ಎಂದು ಉದಯವಾಣಿಗೆ ಪಂಚಾಯತ್‌ ಅಧ್ಯಕ್ಷ ಬಸವರಾಜ ನಂದಿಕೇಶ್ವರ ಮಠ ತಿಳಿಸಿದ್ದಾರೆ.

ಶಿರಸಿ ಪೊಲೀಸರು ಸಾರ್ವಜನಿಕರಿಗೆ ಪ್ರತಿನಿತ್ಯ ಒಂದಿಲ್ಲ ಒಂದು ವಿನೂತನ ಕೋವಿಡ್ 19 ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅನಾವಶ್ಯಕವಾಗಿ ರಸ್ತೆಗೆ ಬರುವ ಜನರ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next