Advertisement
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನೆರೂಲ್ ಶ್ರೀ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ ಅವರು, ಯಕ್ಷಗಾನವು ನಮ್ಮ ಸಂಸ್ಕೃತಿ, ಭಾಷೆ, ಸಂಸ್ಕಾರದ ಬೆಳವಣಿಗೆಗೆ ಸಹಕಾರಿಯಾಗಿದೆ. ಆದ್ದರಿಂದ ಈ ಕಲೆಯನ್ನು ಪ್ರೋತ್ಸಾಹಿಸುವುದಲ್ಲದೆ ಸಹಕರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಘನ್ಸೋಲಿ ಮೂಕಾಂಬಿಕಾ ಕ್ಷೇತ್ರದಲ್ಲಿ ಸಭಾಗೃಹವೊಂದರ ಆವಶ್ಯಕತೆಯಿದ್ದು, ಇದರ ನಿರ್ಮಾಣದ ಯೋಜನೆಯು ಸಾಕಾರಗೊಳ್ಳಲು ಎಲ್ಲರ ಸಹಕಾರದ ಅಗತ್ಯವಿದೆ. ಇಂತಹ ಕಲೆಯ ಪ್ರದರ್ಶನಗಳಿಗೆ ಸಭಾಗೃಹದ ಅಗತ್ಯ ಬಹಳಷ್ಟಿದೆ. ಕಲೆ-ಕಲಾವಿದರನ್ನು ಪ್ರೋತ್ಸಾಹಿಸಿದಾಗ ಮಾತ್ರ ಕಲೆ ಉಳಿದು ಮುಂದಿನ ಪೀಳಿಗೆಯು ಅರಿಯಲು ಸಾಧ್ಯವಾಗುತ್ತದೆ ಎಂದರು.
ಪೋಷಕರ ಬೆಂಬಲ ಪ್ರೋತ್ಸಾಹ ಸಿಕ್ಕಾಗ ಮಾತ್ರ ಕಲಾವಿದರು ರಂಗದಲ್ಲಿ ಉತ್ತಮ ಕಲಾವಿದರಾಗಿ ಬೆಳೆಯಲು ಸಾಧ್ಯ.
ದೇವಿಯ ಅನುಗ್ರಹದಿಂದ ಈ ಸಮ್ಮಾನ ಲಭಿಸಿದೆ. ನಿಮ್ಮೆಲ್ಲರ
ಪ್ರೀತಿ, ಅಭಿಮಾನ, ಗೌರವಕ್ಕೆ ಋಣಿಯಾಗಿದ್ದೇನೆ ಎಂದರು.
Related Articles
Advertisement
ನೆರೂಲ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ, ಧರ್ಮದರ್ಶಿ ರಮೇಶ್ ಎಂ. ಪೂಜಾರಿ ಮಾತನಾಡಿ, ತುಳುಭಾಷೆಯಲ್ಲಿ ಯಕ್ಷಗಾನ ಪ್ರದರ್ಶನಗೊಂಡಾಗ ಮಕ್ಕಳು
ಹೆಚ್ಚಿನ ಆಸಕ್ತಿ ತೋರಲು ಸಾಧ್ಯವಿದೆ. ಈ ದೇವಿಯ
ಅನುಗ್ರಹದಿಂದ ಇಲ್ಲಿ ಹೆಚ್ಚಿನಯಕ್ಷಗಾನ ಪ್ರದರ್ಶನಗೊಳ್ಳುತ್ತಿ
ರುವುದು ಸಂತೋಷದ ಸಂಗತಿಯಾಗಿದೆ ಎಂದರು. ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ ಅವರು ಮಾತನಾಡಿ, ತುಳು ಪ್ರಸಂಗಕ್ಕೆ ಎಷ್ಟೊಂದು ಬೇಡಿಕೆ ಇದೆ ಎಂಬುದಕ್ಕೆ ಗೆಜ್ಜೆದ ಪೂಜೆ ಪ್ರಸಂಗವೇ ಸಾಕ್ಷಿಯಾಗಿದೆ. ಊರಿನಲ್ಲಿ ನಡೆಯುವ ಪ್ರದರ್ಶನಗಳಲ್ಲೂ ಇಷ್ಟೊಂದು ಸಂಖ್ಯೆಯಲ್ಲಿ ಪ್ರೇಕ್ಷಕರು ಕಾಣ ಸಿಗುವುದಿಲ್ಲ. ನಾವೆಲ್ಲರೂ ಯಕ್ಷಗಾನವನ್ನು ಉಳಿಸಿ-ಬೆಳೆಸುವ ಪಣ ತೊಡಬೇಕು ಎಂದು ನುಡಿದರು.
ಅತಿಥಿಗಳಾಗಿ ಪಾಲ್ಗೊಂಡ ಸಿಬಿಡಿ-ಬೇಲಾಪುರ ಉದ್ಯಮಿ, ಸಮಾಜ ಸೇವಕ ರಮೇಶ್ ಶೆಟ್ಟಿ, ಕಲಾವಿದ ಭೋಜ ಬಂಗೇರ, ನೆರೂಲ್ ಶ್ರೀ ಶನೀಶ್ವರ ಮಂದಿರದ ಉಪಾಧ್ಯಕ್ಷ ಗೋಪಾಲ್ ವೈ. ಶೆಟ್ಟಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಉಪಾಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ ಅವರು ಮಾತನಾಡಿದರು. ವೇದಿಕೆಯಲ್ಲಿ ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಸಮನ್ವಯಕ ತಾಳಿಪಾಡಿಗುತ್ತು ಭಾಸ್ಕರ ಶೆಟ್ಟಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ, ನೆರೂಲ್ ಹೊಟೇಲ್ ಉದ್ಯಮಿ ಸತೀಶ್ ಪೂಜಾರಿ, ಪೆರ್ಮುದೆ ಕೊಕ್ಕರಗುತ್ತು ಅರುಣ್ ಶೆಟ್ಟಿ, ಉದ್ಯಮಿ ವಿಶ್ವನಾಥ ಶೆಟ್ಟಿ, ಯಕ್ಷಗಾನ ಪ್ರಾಯೋಜಕರಾದ ಕೋರೊªಟ್ಟು ಎಳಿಯಾಳ ಕೌಡೂರು ಗುಣಕರ ಶೆಟ್ಟಿ, ಧನಂಜಯ ಕೋಟ್ಯಾನ್, ವಿಶ್ವನಾಥ ಶೆಟ್ಟಿ ಡೊಂಬಿವಲಿ, ಅನ್ನದಾನ ಪ್ರಾಯೋಜಕ ಮನೋಹರ್ ಆರ್. ಕೆ. ಮೊದಲಾದವರು ಉಪಸ್ಥಿತರಿದ್ದರು. ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಂಘಟಕ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್, ಪತ್ರಕರ್ತ ದೇವಿ ಪ್ರಸಾದ್ ರೈ ಸಹಕರಿಸಿದರು. ಪ್ರಾರಂಭದಲ್ಲಿ ಬಾಲಪ್ರತಿಭೆಗಳಾದ ರೀತ್ ಭುಜಂಗ ಶೆಟ್ಟಿ, ದೀಪೇಶ್ ದಿನೇಶ್ ಶೆಟ್ಟಿ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.