Advertisement
ನುಗ್ಗೆಸೊಪ್ಪು, ತೇವು ತೇಟ್ಲ, ಉಪ್ಪಡಚ್ಚಿರ್, ತೊಜಂಕ್ ಪೆಲತ್ತರಿ, ಗೆಂಡೆದಡ್ಡೆ, ಚಿಲಿಂಬಿ, ಕಪ್ಪ ರುಟ್ಟಿ ಅರೆಪುಡು ಮತ್ತು ಪತ್ರೊಡ್ಡೆ ಮೊದಲಾದ ಖಾದ್ಯಗಳ ಅಡುಗೆ ಸ್ಪರ್ಧೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ತೀರ್ಪುಗಾರರಾಗಿ ಮುಂಬಯಿ ಕ್ಯಾಟರಿಂಗ್ ಉದ್ಯಮಿಗಳಾದ ಪರಮೇಶ್ವರ ಪೂಜಾರಿ, ಗಣೇಶ್ ಮೂಲ್ಯ, ಜಗದೀಶ್ ಶೆಟ್ಟಿ ಖಾರ್‌ಘರ್, ನೀಲಕಂಠನ್, ವಸಂತ ಶೆಟ್ಟಿ, ಶಿವರಾಮ್ ಶೆಟ್ಟಿ, ಗಣೇಶ್ ಭಟ್, ಸತೀಶ್ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ಜಗದೀಶ್ ಶೆಟ್ಟಿ ಮುಲ್ಕಿ ಮೊದಲಾದವರು ಸಹಕರಿಸಿದರು.
Related Articles
Advertisement
ಬಹುಮಾನ ವಿತರಣಾ ಸಮಾರಂಭದಲ್ಲಿ ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ, ಜಗದೀಶ್ ಶೆಟ್ಟಿ ಮುಲ್ಕಿ, ಸತೀಶ್ ಶೆಟ್ಟಿ, ದೇವಾಲಯದ ಉಪಾಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ, ಉದ್ಯಮಿ ಸತೀಶ್ ಎಸ್. ಪೂಜಾರಿ, ತುಳುಕೂಟ ಐರೋಲಿಯ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ, ತುಳುನಾಡಿನ ದೈವಾರಾಧನೆಯ ಮದಿಪುಗಾರ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಉದ್ಯಮಿ ಪ್ರಮೋದ್ ಕರ್ಕೇರ ಅಡ್ವೆ ಉಪಸ್ಥಿತರಿದ್ದರು.
ಸ್ಪರ್ಧೆಯ ಮೇಲ್ವಿಚಾರಕರಾಗಿ ಸಹಕರಿಸಿದ ವೀರೇಂದ್ರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಹರೀಶ್ ಶೆಟ್ಟಿ ಪಡುಬಿದ್ರೆ ಅವರು ವಿಜೇತರ ಯಾದಿಯನ್ನು ಓದಿದರು. ಸುರೇಶ್ ಎಸ್. ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಅನ್ನದಾನ ನಡೆಯಿತು. ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್ ಶೆಟ್ಟಿ, ನವಿಮುಂಬಯಿ ಸಮಿತಿಯ ಸದಸ್ಯರು, ಮಂಡಳದ ಹಾಗೂ ಧರ್ಮಶಾಸ್ತ ಸೇವಾ ಸಂಸ್ಥೆಯ ಸದಸ್ಯರು, ಉಪಸಮಿತಿಯ ಸದಸ್ಯರು ಹಾಗೂ ಮಹಿಳಾ ವಿಭಾಗದ ಸದಸ್ಯೆಯರು ಸಹಕರಿಸಿದರು.