Advertisement

ಶುರುವಾಯ್ತು ನೆಕ್ಸಾನ್‌ ಕ್ರೇಜ್‌

09:27 PM Sep 10, 2018 | |

ಭಾರತದ ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ಮಿನಿ ಎಸ್‌ಯುವಿಗಳಿಗೆ ಬೇಡಿಕೆ ಸಾಕಷ್ಟಿದೆ.  ಅಷ್ಟೇ ಕಠಿಣ ಸ್ಪರ್ಧೆಯೂ ಇದೆ. ಈಗಾಗಲೇ ಹೊಸ ಹೊಸ ಮಾಡೆಲ್‌ಗ‌ಳನ್ನು, ವೇರಿಯಂಟ್‌ಗಳನ್ನು ಪರಿಚಯಿಸಿರುವ ಬಹುತೇಕ ಕಂಪನಿಗಳು ಬೇಡಿಕೆ ದುಪ್ಪಟ್ಟು ಮಾಡಿಕೊಳ್ಳುವ ಪ್ರಯತ್ನದಲ್ಲಿವೆ. ಅದಕ್ಕಾಗಿಯೇ ಆಗಾಗ ಒಂದೊಂದು ಶಿಷ್ಟವೆನ್ನುವ ಪ್ರಯತ್ನವನ್ನೂ  ಮಾಡುತ್ತಿವೆ. ಸಾಮಾನ್ಯವಾಗಿ, ಮೈಲಿಗಲ್ಲು ತಲುಪಿದ ಸಂಭ್ರಮದ ವೇಳೆ ಇಂಥ ಕೆಲವೊಂದು ಪ್ರಯೋಗಗಳನ್ನು ಮಾಡಲಾಗುತ್ತದೆ.

Advertisement

ಇದರಿಂದ ಟಾಟಾ ಮೋಟಾರ್ ಕೂಡ ಹೊರತಾಗಿಲ್ಲ. ತನ್ನ ಮಹತ್ವಾಕಾಂಕ್ಷೆಯ ಮಿನಿ ಎಸ್‌ಯು ಸೆಗೆ¾ಂಟ್‌ ಮೂಲಕ ಮಾರುಕಟ್ಟೆಯಲ್ಲಿ ಒಂದು ಹಂತದಲ್ಲಿ ಸದ್ದು ಮಾಡಿರುವ ನೆಕ್ಸಾನ್‌ನ ಲಿಮಿಟೆಡ್‌ ವೇರಿಯಂಟ್‌ ಒಂದನ್ನು ಟಾಟಾ ಕಂಪನಿ ಪರಿಚಯಿಸಿದೆ. ಎಲ್ಲಾ ಕಂಪನಿಗಳಂತೆ, ಬಣ್ಣಗಳಲ್ಲಿ ಒಂದಿಷ್ಟು ವಿಶೇಷವಾದ ಪ್ರಯತ್ನದೊಂದಿಗೆ ಲಿಮಿಟೆಡ್‌ ಎಡಿಷನ್‌ ಅನ್ನು ಅನಾವರಣಗೊಳಿಸಿದೆ. ಅದೇ “ನೆಕ್ಸಾನ್‌ ಕ್ರೇಜ್‌’!

ತಕ್ಷಣಕ್ಕೆ ನೆಕ್ಸಾನ್‌ ಎಂದು ಪರಿಚಯಿಸಲಾಗದ ರೀತಿಯಲ್ಲಿ ಈ ವಾಹನದ  ಬಣ್ಣ ಬದಲಾಯಿಸಲಾಗಿದೆ. ನೆಕ್ಸಾನ್‌ ಕ್ರೇಜ್‌, ಪೆಟ್ರೋಲ್‌ ಮತ್ತು ಡೀಸೆಲ್‌  ಎರಡೂ ಮಾದರಿಗಳಲ್ಲಿ ಕ್ರೇಜ್‌ ಮತ್ತು ಕ್ರೇಜ್‌+ ವೇರಿಯಂಟ್‌ಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಮೂಲಕ ಟಾಟಾ ಮೋಟಾರ್ ಗ್ರಾಹಕರ ಕುತೂಹಲ ಹೆಚ್ಚಿಸಿದೆ. ಕ್ರೇಜ್‌ ಪದವನ್ನೇ ಸ್ಪೆಲ್‌ ಮಾಡುವಾಗಲೂ ಕ್ರೇಜಾಗಿಯೇ ಹೇಳುವಂತೆ ಬಳಸಿಕೊಳ್ಳಲಾಗಿದೆ.

ಎಂಜಿನ್‌ ಸಾಮರ್ಥ್ಯ ಎಂದಿನಂತೆ
ಲಿಮಿಟೆಡ್‌ ಎಡಿಷನ್‌ ಆಗಿರುವ ಕಾರಣ, ಕಾರಿನ ಸಾಮರ್ಥ್ಯದಲ್ಲಿ ಅಂಥದ್ದೇನೂ ಬದಲಾವಣೆ ಮಾಡಲಾಗಿಲ್ಲ. ಪೆಟ್ರೋಲ್‌ ಕಾರಿನಲ್ಲಿ 1.2 ಲೀಟರ್‌ ರೆವೊಟ್ರಾನ್‌ ಎಂಜಿನ್‌ ಬಳಕೆ ಮಾಡಿಕೊಳ್ಳಲಾಗಿದೆ. ಡೀಸೆಲ್‌ ಕಾರಿನಲ್ಲಿ 1.5 ಲೀಟರ್‌ ರೆವೋ ಟಾರ್ಕ್‌ ಎಂಜಿನ್‌ ಬಳಸಿಕೊಳ್ಳಲಾಗಿದೆ. ಪೆಟ್ರೋಲ್‌ ಎಂಜಿನ್‌ 108ಬಿಎಚ್‌ಪಿ ಮತ್ತು 170 ಎನ್‌ಎಂ ಟಾರ್ಕ್‌ ಶಕ್ತಿ ಉತ್ಪಾದಿಸುವ ಶಕ್ತಿ ಹೊಂದಿದೆ. ಡೀಸೆಲ್‌ ಎಂಜಿನ್‌ 108 ಬಿಎಚ್‌ಪಿ ಮತ್ತು 260ಎನ್‌ಎಂ ಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡೂ ಎಂಜಿನ್‌ ಕಾರುಗಳು 6 ಸ್ಪೀಡ್‌ ಗೇರ್‌ ಬಾಕ್ಸ್‌ ಹೊಂದಿವೆ. ಅಲಾಯ್‌ ಬೀಲ್‌ ಬಳಸಿಕೊಂಡಿದ್ದರಿಂದ ಔಟ್‌ಲುಕ್‌ ಇನ್ನಷ್ಟು ಸೊಗಸಾಗಿ ಕಾಣಿಸಲಿದೆ. ಎಕ್ಸ್‌ಟಿ ಟ್ರಿಮ್‌ ಮಾದರಿಯ ಮಿನಿ ಎಸ್‌ವಿ ಯು ಇದಾಗಿದ್ದು, ಮುಂಬರುವ ದಿನಗಳಲ್ಲಿ ಬೇಡಿಕೆ ವೃದ್ಧಿಸಲಿದೆ ಎನ್ನುವುದು ಕಂಪನಿಯ ನಿರೀಕ್ಷೆಯಾಗಿದೆ.

ವಿನ್ಯಾಸದಲ್ಲಿ ಕೊಂಚ ಬದಲಾವಣೆ
ಲಿಮಿಟೆಡ್‌ ಎಡಿಷನ್‌ ಆಗಿದ್ದರಿಂದ ಆಧುನಿಕ ಉಪಕರಣಗಳನ್ನೇ ಬಳಸಿಕೊಳ್ಳಲಾಗಿದ್ದು, ತನ್ನ ಹಳೆಯ ವರ್ಷನ್‌ಗಳಿಗಿಂತ ಸ್ವಲ್ಪ ಮಟ್ಟಿಗಿನ ಬದಲಾವಣೆ ಮಾಡಲಾಗಿದೆ. ವಿಶೇಷವಾಗಿ ಒಳಾಂಗಣ ವಿನ್ಯಾಸದಲ್ಲಿ ಹೆಚ್ಚುವರಿಯಾಗಿ ಒಂದಿಷ್ಟು ಚಾಲಕ ಸ್ನೇಹಿ ಆಪ್ಶನ್‌ಗಳನ್ನು ನೀಡಲಾಗಿದೆ. ನಾಲ್ಕು ಸ್ಪೀಕರ್‌ಗಳ ಇನ್ಫೋಟೈನ್ಮೆಂಟ್‌ ಅಳವಡಿಸಲಾಗಿದೆ. ಕಪ್ಪು ಬಣ್ಣದ ಕ್ರೇಜ್‌ನಲ್ಲೂ ಗಿಳಿ ಹಸಿರು ಬಣ್ಣವನ್ನು ಹೊಸ ಟ್ರೆಂಡ್‌ ಹುಟ್ಟು ಹಾಕುವಂತೆ ಭಿನ್ನವಾಗಿ ಬಳಸಿಕೊಳ್ಳಲಾಗಿದೆ.

Advertisement

4 ವೇರಿಯಂಟ್‌ಗಳ ಎಕ್ಸ್‌ ಶೋ ರೂಂ ಬೆಲೆ
– ಕ್ರೇಜ್‌ ಪೆಟ್ರೋಲ್‌ ಎಂಟಿ : 7.15 ಲಕ್ಷ ರೂ.
– ಕ್ರೇಜ್‌+ ಪೆಟ್ರೋಲ್‌ ಎಂಟಿ : 7.77 ಲಕ್ಷ ರೂ.
– ಕ್ರೇಜ್‌ ಡೀಸೆಲ್‌ ಎಂಟಿ : 8.08 ಲಕ್ಷ ರೂ.
– ಕ್ರೇಜ್‌ ಡೀಸೆಲ್‌ ಎಂಟಟಿ : 8.64 ಲಕ್ಷ ರೂ.

 ಗಣಪತಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next