Advertisement
210 ರೈಲು ಮೊದಲ ಹಂತದಲ್ಲಿ
ಎನ್‌ಸಿಆರ್‌ಟಿಸಿ ಪ್ರಕಾರ, ಗುಜರಾತ್‌ನ ಸಾಲ್ವಿ ಕಾರ್ಖಾನೆಯಲ್ಲಿ ಆರ್‌ಆರ್‌ಟಿಎಸ್‌ನ ಮೊದಲ ಹಂತದಲ್ಲಿ 210 ರೈಲುಗಳು ಉತ್ಪಾದನೆಯಾಗಲಿವೆ. ದಿಲ್ಲಿ-ಮೇರಠ್ ಕಾರಿಡಾರ್ ಮಾತ್ರವಲ್ಲ, ಮೇರಠ್ ನ ಸ್ಥಳೀಯ ರೈಲ್ವೆ ವ್ಯವಸ್ಥೆಗೂ ಇಲ್ಲಿ ರೈಲುಗಳನ್ನು ತಯಾರಿಸಲಾಗುತ್ತದೆ.
“ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಗುಜರಾತ್‌ನಲ್ಲಿರುವ ಆಲ್‌ಸ್ಟೋಮ್ ಕಂಪೆನಿಯ ಕಾರ್ಖಾನೆಯಲ್ಲಿ ರೈಲಿನ ಬಿಡಿಭಾಗಗಳನ್ನು ತಯಾರಿಸಲಾಗಿದೆ. ಅಲ್ಲಿಂದ ದುಹಾಯಿ ಡಿಪೋಕ್ಕೆ ಈ ಬಿಡಿಭಾಗಗಳನ್ನು ತರಲಾಗುತ್ತದೆ. ಅಲ್ಲಿ ಬಿಡಿಭಾಗಗಳನ್ನು ಜೋಡಿಸಿ ರೈಲು ಸಿದ್ಧಪಡಿಸಲಾಗುತ್ತದೆ. ಮೇ 16ರಂದು ರೈಲಿನೊಳಗೆ ಪ್ರಯಾಣಿಕರ ಅನುಕೂಲಕ್ಕೆ ಬೇಕಾದ ಎಲ್ಲ ಫೀಚರ್‌ಗಳನ್ನು ಅಳವಡಿಸಲಾಗುತ್ತದೆ. ದಿಲ್ಲಿ- ಗಾಜಿಯಾಬಾದ್- ಮೇರಠ್ ನಲ್ಲಿರುವ ಆರ್‌ಆರ್‌ಟಿಎಸ್ ಕಾರಿಡಾರ್ ಯೋಜನಾ ಸ್ಥಳಕ್ಕೆ ಸಾಗಿಸಲಾಗುತ್ತದೆ. ರೈಲಿನ ವೇಗ
ಎನ್‌ಸಿಆರ್‌ಟಿಸಿ ಪ್ರಕಾರ, ರೈಲಿನ ಗರಿಷ್ಠ ವೇಗ ಪ್ರತೀ ಗಂಟೆಗೆ 180 ಕಿ.ಮೀ., ಆಪರೇಶನಲ್ ವೇಗ 160
ಕಿ.ಮೀ. (ಪ್ರತೀ ಗಂಟೆಗೆ); ಸರಾಸರಿ ವೇಗ 100 ಕಿ.ಮೀ. (ಪ್ರತೀ ಗಂಟೆಗೆ).
Related Articles
-2 ಗಿ 2 ಟ್ರಾನ್ಸ್‌ವರ್ಸ್ ಕುಶನಿಂಗ್ ಸೀಟುಗಳು
-ಸಿಸಿಟಿವಿ ಕೆಮರಾಗಳು
-ವೈಡ್ ಸ್ಟಾಂಡಿಂಗ್ ಆವರಣ.
-ಡೈನಮಿಕ್ ರೂಟ್ ಮ್ಯಾಪ್
-ಲ್ಯಾಪ್‌ಟಾಪ್ ಅಥವಾ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು.
-ಹೀಟಿಂಗ್ ವೆಂಟಿಲೇ ಶನ್ ಹಾಗೂ ಏರ್ ಕಂಡೀಶನಿಂಗ್ ವ್ಯವಸ್ಥೆ.
-ಸ್ವಯಂಚಾಲಿತ ಆ್ಯಂಬಿಯಂಟ್ ಲೈಟಿಂಗ್ ಸಿಸ್ಟಂ ಹಾಗೂ ಇನ್ನಿತರ ಸೌಕರ್ಯ.
Advertisement