Advertisement

ಅಶಕ್ತರಿಗೆ ಮನೆ ಮನೆಗೆ ತೆರಳಿ ಲಸಿಕೆ : ಮಂಗಳೂರು ಮಹಾನಗರ ಪಾಲಿಕೆಯಿಂದ ಚಾಲನೆ

03:48 PM Jul 06, 2021 | Team Udayavani |

ಸುರತ್ಕಲ್ : ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಸಹಕಾರದಲ್ಲಿ ರೆಡ್‌ ಕ್ರಾಸ್ ಸೊಸೈಟಿ ಅವರ ನೆರವಿನೊಂದಿಗೆ ಅಶಕ್ತರಿಗೆ ಮನೆ ಮನೆಗೆ ತೆರಳಿ ಲಸಿಕೆ ನೀಡುವ ಕಾರ್ಯಕ್ರಮ ರಾಜ್ಯದಲ್ಲಿ ಪ್ರಥಮ ಬಾರಿ ,ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ನುಡಿದರು.

Advertisement

ಅವರು ವಾರ್ಡ್ ನಂ ೧ರಲ್ಲಿ ಮನೆ ಮನೆ ಲಸಿಕೆ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ಇದೊಂದು ವಿಶಿಷ್ಠ ಪ್ರಯತ್ನವಾಗಿದೆ. ಮನೆ ಮನೆಗೆ ಲಸಿಕೆ ಅಭಿಯಾನ ಸವಾಲಿನಿಂದ ಕೂಡಿದ್ದು ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷರು, ಪದಾಧಿಕಾರಿಗಳ ತಂಡ ವೈದ್ಯರ , ನರ್ಸ್ಗಳ ಉತ್ತಮ ಸ್ಪಂದನೆಯೊಂದಿಗೆ ಉತ್ತಮ ಹೆಜ್ಜೆಯನ್ನಿರಿಸಿದೆ. ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಸ್ಥಳೀಯ ಪಾಲಿಕೆ ಸದಸ್ಯರ ಮೂಲಕ ನೀಡಲಾಗುವುದು , ಪಾಲಿಕೆ ಎಲ್ಲಾ  ವಾರ್ಡ್ಗಳಲ್ಲಿ ಯಶಸ್ವಿಯಾಗಿ ಮಾಡಲಾಗುವುದು ಎಂದರು.  ಈಗಾಗಲೇ ಸರಕಾರ ಆದ್ಯತೆ ಮೇರೆಗೆ ಜನ ಸಂಪರ್ಕ ಹೊಂದಿರು ಮಂದಿಗೆ ಲಸಿಕೆ ವಿವಿಧೆಡೆ ನಡೆಯುತ್ತಿದೆ ಎಂದರು.

ರೆಡ್‌ಕ್ರಾಸ್ ಸಂಸ್ಥೆಯ ಪ್ರಭಾಕರ್ ಶರ್ಮ ಅವರು ಮಾತನಾಡಿ ಹಿರಿಯರಿಗೆ, ಅಶಕ್ತರಿಗೆ ಲಸಿಕೆ ನೀಡುವ ಕಾರ್ಯ ಆರಂಭಿಸಲಾಗಿದೆ. ಇದಕ್ಕೆ ಜಿಲ್ಲಾಡಳಿತ , ಪಾಲಿಕೆ ಸಹಕಾರ ನೀಡಿದೆ. ಈ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಮಾಡುವ ಯೋಜನೆಯಿದೆ ಎಂದರು.ಈ ಸಂದರ್ಭ ರೆಡ್‌ಕ್ರಾಸ್‌ನ ಯತೀಶ್ ಬೈಕಂಪಾಡಿ, ಸುಖ್‌ಪಾಲ್ ಪೊಳಲಿ, ಸ್ಥಳೀಯ ಪಾಲಿಕೆ ಸದಸ್ಯೆ ಶೋಭಾ ರಾಜೇಶ್, ಬಿಜೆಪಿ ಮುಖಂಡ ರಾಜೇಶ್ ಮುಕ್ಕ, ರಾಘವೇಂದ್ರ ಶೆಣೈ, ರಂಜಿತ್ ಚೆಕ್‌ಪೋಸ್ಟ್,ವೈದ್ಯರಾದ ಡಾ.ದಾಮೋದರ್, ಆಶಾ ಕಾರ್ಯಕರ್ತೆ ಚಂದ್ರಕಲಾ,ಗೀತಾ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next