Advertisement

ಲಸಿಕೆ ಹಾಕಿಸಿ, ಪೊಲೀಯೋ ತೊಲಗಿಸಿ

11:23 AM Feb 01, 2021 | Team Udayavani |

ಚೇಳೂರು: ಪೊಲೀಯೋ ಲಸಿಕೆ ಅಭಿಯಾನವನ್ನು ಚೇಳೂರು ತಾಲೂಕಿನಲ್ಲಿ ಜ.31ರಿಂದ ಫೆ.2 ರವರೆಗೆ ಹಮ್ಮಿ  ಕೊಂಡಿದ್ದು, 05 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದು ಚೇಳೂರು ಕೋಚಿಮುಲ್‌ ಅಧ್ಯಕ್ಷ ಜೆ.ಎನ್‌ . ಜಾಲಾರಿ ಹೇಳಿದರು.

Advertisement

ಗ್ರಾಮದ ಮರ್ರಿಮಾನು ಸರ್ಕಲ್‌ನಲ್ಲಿ ಮಗುವಿಗೆ ಪೊಲೀಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದ ನಂತರ ವರದಿಗಾರರೊಂದಿಗೆ ಮಾತನಾಡಿದರು.

ಇದನ್ನೂ ಓದಿ:ಚಿರತೆ ದಾಳಿಗೆ ಜಿಂಕೆ ಬಲಿ

ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ, ತಾಪಂ ಸೇರಿದಂತೆ ಇತರೆ ಇಲಾಖೆಗಳಿಂದ ಸಹಕಾರದಿಂದ ಅಭಿ ಯಾನ ಯಶಸ್ವಿಯಾಗುವುದಾಗಿ ಹೇಳಿದರು. ಆರೋಗ್ಯ ಇಲಾಖೆಯ ಎನ್‌.ಲಕ್ಷ್ಮಿ  ನರಸಮ್ಮ, ಆಶಾ ಕಾರ್ಯಕರ್ತೆ ಜಿ.ಸುಜಾತಮ್ಮ, ಕರವೇ ಮುಖಂಡರಾದ ಟಿ.ಎನ್‌.ಸೀನಪ್ಪ, ಫೋಟೊ ನಾರಾಯಣ, ಜೆ.ಚಲಪತಿ, ಸಿಂಗಿರಿ ಚಿನ್ನನರಸಿಂಹಪ್ಪ, ಪಿ.ಎಸ್‌.ರಾಮಚಂದ್ರ, ಷೇರ್‌ಖಾನ್‌ ಕೋಟೆ ವೆಂಕಟರೆಡ್ಡಿ ಸ್ಥಳದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next