Advertisement

D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

12:53 AM May 07, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಪಮಾನದಲ್ಲಿ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಒಂದು ಹಾಸಿಗೆ, ಸಮುದಾಯ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ತಲಾ 2 ಹಾಸಿಗೆ ಮತ್ತು ವೆನ್ಲಾಕ್‌ ಆಸ್ಪತ್ರೆಯಲ್ಲಿ 6 ಬೆಡ್‌ಗಳನ್ನು ಬಿಸಿಲಿಗೆ ಸಂಬಂಧಿಸಿ ಸಮಸ್ಯೆಯಾದವರಿಗೆ ಚಿಕಿತ್ಸೆಗೆಂದು ಸಿದ್ಧವಾಗಿ ಇಟ್ಟುಕೊಳ್ಳಲಾಗಿದೆ. ಆಸ್ಪತ್ರೆಯ ಸಿಬಂದಿಗೂ ವಿವಿಧ ಹಂತದ ತರಬೇತಿ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ತಿಮ್ಮಯ್ಯ ಹೇಳಿದರು.

Advertisement

ಸೋಮವಾರ ಪತ್ರಿಕಾಭವನದಲ್ಲಿ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ದ.ಕ.ದಲ್ಲಿ ಈ ಬಾರಿ ತಾಪಮಾನದಲ್ಲಿ ಅತೀ ಹೆಚ್ಚಿನ ಏರಿಕೆ ಕಂಡು ಬಂದಿದ್ದು, ಕೆಲವು ಕಡೆಗಳಲ್ಲಿ 5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ.

ಇದರಿಂದಾಗಿ ದೇಹದ ತಾಪಮಾನದಲ್ಲಿಯೂ ವ್ಯತ್ಯಯವಾಗಿ ವಿಪರೀತ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಆ ಹಿನ್ನೆಲೆಯಲ್ಲಿ ಮುಂದಿನ ಮಳೆಗಾಲದ ವರೆಗೆ ಸಾರ್ವಜನಿಕರು ಸಾಕಷ್ಟು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ನಿರ್ದಿಷ್ಟ ಉಷ್ಣಾಂಶಕ್ಕೆ ಒಗ್ಗಿ ಹೋಗಿದ್ದ ದೇಹದಲ್ಲಿ ಪ್ರಸ್ತುತ ಅಧಿಕ ತಾಪಮಾನದಿಂದ ಚರ್ಮದಲ್ಲಿ ತುರಿಕೆ, ಸುಸ್ತು, ನಿಶ್ಶಕ್ತಿ, ಕುಸಿದು ಬೀಳುವುದು, ಚರ್ಮದಲ್ಲಿ ಗಿಳ್ಳೆ, ಕಾಲುಗಳಲ್ಲಿ ಬಾವು, ಸೆಳೆತ, ತಲೆಸುತ್ತು ಬರುವುದು, ವಾಂತಿ, ಅತಿಯಾದ ದಣಿವು ಮೊದಲಾದವುಗಳು ಉಂಟಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂದರು.

ಹೀಟ್‌ಸ್ಟ್ರೋಕ್‌
ವರದಿಯಾಗಿಲ್ಲ
ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಹೀಟ್‌ಸ್ಟ್ರೋಕ್‌ನ ಯಾವುದೇ ಪ್ರಕರಣ ವರದಿಯಾಗಿಲ್ಲ. ಬೆವರುಸಾಲೆ, ಕೈಗಳಲ್ಲಿ ಬಾವು, ಸುಸ್ತು ಮೊದಲಾದ ಸಮಸ್ಯೆಗಳಿಗೆ ಕೆಲವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೂರ್ವಾಹ್ನ 11.30ರಿಂದ ಅಪರಾಹ್ನ 3 ಗಂಟೆಯ ವರೆಗಿನ ಬಿಸಿಲಿನ ಓಡಾಟ ತಪ್ಪಿಸಬೇಕು. ಛತ್ರಿ, ಟೋಪಿ, ಕಣ್ಣಿಗೆ ಕಪ್ಪು ಕನ್ನಡಕ, ಹತ್ತಿಯ ಸಡಿಲವಾದ ಬಟ್ಟೆಯನ್ನು ಧರಿಸುವುದು ಉತ್ತಮ ಎಂದು ಡಿಎಚ್‌ಒ ಸಲಹೆ ನೀಡಿದರು. ಪಾನಕ, ಮಜ್ಜಿಗೆ, ಎಳನೀರು ಸೇವನೆ ಉತ್ತಮ ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್‌ ಮಾತನಾಡಿ, ಬಿಸಿಲಿನ ನೀರು ಕಡಿಮೆಯಾಗುವುದರಿಂದ ನೀರನ್ನು ಸಂಗ್ರಹಿಸಿ ಇಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಬಹುದು. ಆದ್ದರಿಂದ ನೀರು ಸಂಗ್ರಹಿಸಿ ಇಡುವವರು ಎಚ್ಚರಿಕೆ ವಹಿಸಬೇಕು. ಸದ್ಯ ಜಿಲ್ಲೆಯಲ್ಲಿ

Advertisement
Advertisement

Udayavani is now on Telegram. Click here to join our channel and stay updated with the latest news.

Next