ಬಂಗಾರಪೇಟೆ: ಕೊರೊನಾ 3ನೇ ಅಲೆಬರುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.ಹೀಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿಲಸಿಕೆ ಪಡೆಯಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಮಾವಳ್ಳಿ, ಕಾರಹಳ್ಳಿ,ಚಿಕ್ಕಅಂಕಂಡಹಳ್ಳಿ ಮತ್ತು ಸೂಲಿಕುಂಟೆಗ್ರಾಪಂ ಕೇಂದ್ರಗಳಲ್ಲಿ ಹಮ್ಮಿಕೊಂಡಿದ್ದಕೋವಿಡ್ ನಿಯಂತ್ರಣ, ಕುಂದುಕೊರತೆಸಭೆ ಉದ್ಘಾಟಿಸಿ ಮಾತನಾಡಿ, ಗ್ರಾಮೀಣಪ್ರದೇಶದಲ್ಲಿ ಕೊರೊನಾ ನಿಯಂತ್ರಿಸಲುಆಶಾ, ಅಂಗನವಾಡಿ ಕಾರ್ಯಕರ್ತೆಯರುಮತ್ತು ಕಾರ್ಯಪಡೆಯ ಕಾರ್ಯ ಶ್ಲಾಘನೀಯ. ಅವರ ಜೊತೆಗೆ ಪಂಚಾಯ್ತಿ ಸದಸ್ಯರು, ಸಿಬ್ಬಂದಿ ಪರಿಶ್ರಮದಿಂದ ಗ್ರಾಮಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆಎಂದು ಹೇಳಿದರು.
ಕೊರೊನಾ ಮೊದಲ ಅಲೆಯಲ್ಲಿಕೆಲವೇ ಕೆಲವು ಮಂದಿ ಮೃತರಾಗಿದ್ದರು.ಆದರೆ, 2ನೇ ಅಲೆಯಲ್ಲಿ ಮನೆಯ ದುಡಿಯುವ ಕೈಯನ್ನೇ ನಾವು ಕಳೆದುಕೊಂಡಿದ್ದೇವೆ. ಜೀವ ಇದ್ದರೆ ಜೀವನ. ಕೊರೊನಾದಿಂದ ಪ್ರಾಣವನ್ನು ಕಾಪಾಡಿಕೊಳ್ಳ ಬೇಕಾದರೆ ಪ್ರತಿಯೊಬ್ಬರೂ ಕಡ್ಡಾಯವಾಗಿಲಸಿಕೆ ಯನ್ನು ಪಡೆಯಬೇಕು. ಕೆಲವರಲ್ಲಿಲಸಿಕೆ ಹಾಕಿಸಿಕೊಂಡರೆ ಅಡ್ಡಪರಿಣಾಮಬೀರುತ್ತದೆ ಎಂದು ತಪ್ಪು ಕಲ್ಪನೆ ಇದೆ. ಆದರೆ,ಲಸಿಕೆಯಿಂದ ಯಾವುದೇ ತೊಂದರೆಇರುವುದಿಲ್ಲ. ಅದನ್ನು ಪಡೆದರೆ ಮಾತ್ರಪಾರಾಗಬಹುದು ಎಂದು ಎಚ್ಚರಿಸಿದರು.
ಲಕ್ಷಣ ಕಂಡು ಬಂದರೆ ವೈದ್ಯರಸಂಪರ್ಕಿಸಿ: ಮುಂಬರುವ ದಿನಗಳಲ್ಲಿಲಾಕ್‌ಡೌನ್ ಸಡಿಲವಾದರೂ ಜನರುಕಡ್ಡಾಯವಾಗಿ ಕೋವಿಡ್ ನಿಯಮಪಾಲಿಸಬೇಕು. ಒಂದು ವೇಳೆ ಸೋಂಕಿನಲಕ್ಷಣಗಳು ಕಂಡು ಬಂದರೆ ಕೂಡಲೇವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಪಡೆಯಬೇಕು ಎಂದರು.
ಬೇರೆ ವೈದ್ಯರ ನಿಯೋಜಿಸಿ: ಮಾವಳ್ಳಿಆರೋಗ್ಯ ಕೇಂದ್ರದ ವೈದ್ಯರು ಸರಿಯಾಗಿಸೇವೆ ಸಲ್ಲಿಸುತ್ತಿಲ್ಲ, ಮಧ್ಯಾಹ್ನಕ್ಕೆ ಕೇಂದ್ರವನ್ನು ಬಂದ್ ಮಾಡುತ್ತಾರೆ ಎಂದುಗ್ರಾಮಸ್ಥರು ದೂರು ಸಲ್ಲಿಸಿ, ಬೇರೆ ವೈದ್ಯರನ್ನು ನಿಯೋಜನೆ ಮಾಡುವಂತೆ ಶಾಸಕರಿಗೆಮನವಿ ಮಾಡಿದರು. ತಾಪಂ ಇಒ ವೆಂಕಟೇಶಪ್ಪ, ತಹಶೀ ಲ್ದಾರ್ ದಯಾ ನಂದ್,ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಕೆ. ನಾರಾಯಣಸ್ವಾಮಿ, ಮಾವಳ್ಳಿ ಗ್ರಾಪಂ ಅಧ್ಯಕ್ಷೆಶಶಿಕಲಮ್ಮ, ಉಪಾಧ್ಯಕ್ಷೆ ರಾಧಮ್ಮ ಮುನಿರಾಜು, ಚಿಕ್ಕಅಂಕಂಡಹಳ್ಳಿ ಅಧ್ಯಕ್ಷ ಹರೀಶ್‌ಕುಮಾರ್, ಉಪಾಧ್ಯಕ್ಷೆ ನಗೀನಾ ತಾಜ್,ಕಾರಹಳ್ಳಿ ಅಧ್ಯಕ್ಷೆ ವೆಂಕಟರಾಜಮ್ಮ, ಉಪಾಧ್ಯಕ್ಷ ಶ್ರೀನಿವಾಸ, ನೋಡಲ್ ಅಧಿ ಕಾರಿ ಗಳಾದಶಿವಾರೆಡ್ಡಿ, ಅಸೀಫ್ವುಲ್ಲಾ, ಪಿಡಿಒ ಗಳಾದಚಿತ್ರಾ, ಸುರೇಶ್ ಬಾಬು ಉಪಸ್ಥಿತರಿದ್ದರು.