Advertisement

18 ದಾಟಿದ ಎಲ್ಲರೂ ಲಸಿಕೆ ಪಡೆಯಿರಿ

07:57 PM Jun 30, 2021 | Team Udayavani |

ಯಳಂದೂರು: 18 ವರ್ಷದ ದಾಟಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ತಪ್ಪದೆ ‌³ವ್ಯಾಕ್ಸಿನ್‌ ಪಡೆದುಕೊಳ್ಳಬೇಕು ಎಂದು ಶಾಸಕ ಎನ್‌. ಮಹೇಶ್‌ ಸಲಹೆ ನೀಡಿದರು.

Advertisement

ಪಟ್ಟಣದವೈ.ಎಂ.ಮಲ್ಲಿಕಾರ್ಜುನಸ್ವಾಮಿಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿಮಂಗಳವಾರ ನಡೆದ ಲಸಿಕಾ ಅಭಿಯಾನದಲ್ಲಿ ಮಾತನಾಡಿದ ಅವರು,ತಾಲೂಕಿನಲ್ಲಿ ಈವರೆಗೆ 221ವಿದ್ಯಾರ್ಥಿಗಳು ಸೇರಿದಂತೆ 23,226ಜನರಿಗೆ ಲಸಿಕೆ ನೀಡಲಾಗಿದೆ.

ವ್ಯಾಕ್ಸಿನ್‌ಪಡೆದವರಿಗೆ ರೋಗ ಬಂದರೂ ಸಾವಿನಅಪಾಯ ಕಡಿಮೆ ಇದೆ. ಆದರೆ ಇನ್ನೂಕೂಡ ಗ್ರಾಮೀಣ ಭಾಗದಲ್ಲಿ ಲಸಿಕೆ ಬಗ್ಗೆಹೆಚ್ಚು ಅನುಮಾನಗಳಿವೆ. ವಿದ್ಯಾರ್ಥಿಗಳುತಮ್ಮ ಸುತ್ತಮುತ್ತಲಿನ ಜನರಿಗೆ ಅರಿವುಮೂಡಿಸಬೇಕು ಎಂದರು.

ತಾಲೂಕುಆರೋಗ್ಯಾಧಿಕಾರಿ ಡಾ. ಮಂಜುನಾಥ್‌,ಕಾಲೇಜು ಮಟ್ಟದಲ್ಲಿ ಅಭಿಯಾನಆರಂಭವಾಗಿದ್ದು ಇದು ಆದಷ್ಟು ಬೇಗ ಶೇ.100 ರಷ್ಟು ಗುರಿ ಸಾಧನೆಯಾಗಲಿದೆಎಂದರು. ತಹಶೀಲ್ದಾರ್‌ ಜಯಪ್ರಕಾಶ್‌,ಪ್ರಾಂಶುಪಾಲ ಡಾ. ನೀಲಕಂಠಸ್ವಾಮಿ,ಉಪನ್ಯಾಸಕರಾದಥಿಯೋಡರ್‌ಲೂಥರ್‌,ಮಹಾಂತೇಶ್‌, ಸುರೇಂದ್ರ, ಲಿಖೀತಾ,ಶ್ವೇತಾ, ಚಂದ್ರಶೇಖರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next