Advertisement

ಸರ್ಕಾರದ ಸವಲತ್ತು ಕೇಳಿ ಪಡೆಯಿರಿ: ಎಸ್ಪಿ

09:59 PM Oct 04, 2019 | Lakshmi GovindaRaju |

ನೆಲಮಂಗಲ: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೋರಾಟದ ಮೂಲಕ ಪಡೆಯುವ ಹಕ್ಕುಗಳೆ ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರು ಸರ್ಕಾರದಿಂದ ದೊರೆಯವ ಸವಲತ್ತುಗಳನ್ನು ಕೇಳಿ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣವರ್‌ ತಿಳಿಸಿದರು. ಪಟ್ಟಣದ ಶ್ರೀ ಜಯದೇವ ವೀರಶೈವ ಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್‌, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ 150ನೇ ಗಾಂಧೀ ಜಯಂತಿ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.

Advertisement

ಜನ ಜಾಗೃತಿ ಸಂಸ್ಥೆ ದುಶ್ಚಟಗಳನ್ನು ಮುಕ್ತಗೊಳಿಸಲು ಸಾಕಷ್ಟು ಶ್ರಮಪಡುತ್ತಿರುವುದು ಸ್ವಾಗತಾರ್ಹ. ಸಂಸ್ಥೆಯಲ್ಲಿ ಫ‌ಲಾನುಭವಿಗಳಾದವರು ಶಿಬಿರದ ನಂತರ ವ್ಯಸನದತ್ತ ಮುಖ ಮಾಡದೆ ಶಿಬಿರವನ್ನು ಸದುಪಯೋಗ ಪಡೆದುಕೊಳ್ಳಬೇಕು, ಜಿಲ್ಲೆಯಲ್ಲಿ ಪ್ರತೀ ವರ್ಷ 7 ಸಾವಿರ ಅಪರಾಧ ಪ್ರಕರಣಗಳು ದಾಖಲಾಗುತಿದ್ದು, ಶೇ.80 ರಷ್ಟು ಮಂದಿ ವ್ಯಸನಗಳ ದಾಸರಾಗಿ ಅಪರಾಧ ಚಟಿವಟಿಕೆಯಲ್ಲಿ ಪಾಲ್ಗೊಂಳ್ಳುತ್ತಿದ್ದಾರೆ. 1947ರಲ್ಲಿ ದೇಶಕ್ಕೆ ಕೇವಲ ರಾಜಕೀಯವಾಗಿ ಸ್ವಾತಂತ್ರ್ಯ ಬಂದಿದೆ. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಪ್ರಸ್ತುತ ಸನ್ನಿವೇಶದಲ್ಲಿ ಪರಿಪೂರ್ಣವಾಗಿಲ್ಲ ಎಂದರು.

ನಡೆ ಶುದ್ಧವಾಗಿರಲಿ: ಪ್ರತಿಯೊಬ್ಬರು ತಮ್ಮ ಹಕ್ಕು ಬಾಧ್ಯತೆಗಳನ್ನು ಅರಿತುಕೊಳ್ಳಬೇಕು. ಪೋಷಕರ ನಡೆ ಮತ್ತು ನುಡಿ ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ನಮ್ಮನ್ನೇ ಅನುಕರಣೆ ಮಾಡುವುದರಿಂದ ಅತ್ಯುತ್ತಮ ರೂಢಿಗಳನ್ನು ಬೆಳಸಿಕೊಳ್ಳಲು ಮೊದಲು ನಾವು ಬದಲಾಗಬೇಕು. ವ್ಯಸನಗಳಿಗೆ ದಾಸರಾಗಿರುವ ಯಾರೊಬ್ಬರು ಒಂದೆ ದಿನಕ್ಕೆ ಬದಲಾಗುವುದಿಲ್ಲ ಪ್ರತಿನಿತ್ಯ ದೇಹ ಸುಚಿಗೊಳಿಸಿಕೊಳ್ಳುವಂತೆ ಮನಸ್ಸನ್ನು ಶುಚಿಗೊಳಿಸಿಕೊಳ್ಳಬೇಕು ಎಂದರು.

ಎಚ್ಚರಿಕೆ : ಜಿಲ್ಲಾದ್ಯಂತ ಸಾಕಷ್ಟು ಗ್ರಾಮಗಳ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಕಂಡುಬಂದಿದ್ದು, ಶೀಘ್ರದಲ್ಲೇ ದಾಳಿನಡೆಸಿ ಮದ್ಯ ಸರಬರಾಜು ಮತ್ತು ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ತಲೆ ಎತ್ತುವ ಜೂಜು ಅಡ್ಡೆ, ಮೀಡರ್‌ ಬಡ್ಡಿ ದಂದೆ ಮತ್ತಿತರನ್ನು ಬಂಧಿಸಲಾಗುವುದು. ಅಕ್ರಮ ಮತ್ತು ಕಾನೂನು ಬಾಹೀರ ಚಟುವಟಿಕೆಗಳನ್ನು ಸ್ವಯಂ ಪ್ರೇರಣೆಯಿಂದ ನಿಲ್ಲಿಸದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಕ್ಕೋತ್ತಾಯ : ರಾಜ್ಯಾದ್ಯಂತ ಶಾಪವಾಗಿ ಪರಿಣಮಿಸಿರುವ ಅಬಕಾರಿ ಟಾಗೇಟ್‌ ಪದ್ದತಿಯನ್ನು ರದ್ದುಗೊಳಿಸಬೇಕು. ಶಾಲಾಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮದ್ಯಪಾನ ಮತ್ತಿತರ ದುಶ್ಚಟಗಳ ವಿರುದ್ದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೇದಿಕೆಯು ಪ್ರತಿ ವರ್ಷ ಕಾರ್ಯಕ್ರಮ ರೂಪಿಸುತಿದ್ದು, ಈ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಮೂಲಕ ಆಯೋಜಿಸಲು ಆದೇಶಿಸಬೇಕು.

Advertisement

ಮದ್ಯಪಾನ‌ದಿಂದ ಉಂಟಾಗುವ ಸಾಮಾಜಿಕ ಕಷ್ಟನಷ್ಟಗಳು ಮತ್ತು ಸರಕಾರದ ಬೊಕ್ಕಸಕ್ಕೆ ಆಗುವ ನಷ್ಟದ ಕುರಿತಂತೆ ವೈಜ್ಞಾನಿಕ ಅಧ್ಯನವನ್ನು ಮಾಡಲು ಸಮಿತಿ ರಚಿಸಿ ವರದಿ ಹೊರತಂದು ರಾಜ್ಯದಲ್ಲಿ ಸಂಪೂರ್ಣ ಮದ್ಯಮಾರಾಟ ನಿಷೇಧ ಮಾಡಿ ಪಾನನಿಷೇಧವನ್ನು ಜಾರಿಗೊಳಿಸಬೇಕೆಂದು ವೇದಿಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೂಲಕ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಲಾಯಿತು.

ಅಭಿನಂದನೆ : ಜಿಲ್ಲಾದ್ಯಂತ ಮಧ್ಯವ್ಯರ್ಜನ ಶಿಬಿರದಲ್ಲಿ ಭಾಗವಹಿಸಿ ವ್ಯಸನಗಳಿಂದ ವ್ಯಸನಮುಕ್ತರಾದವರನ್ನು ಅಖಿಲ ಕರ್ನಾಟಕ ಜನಜಾಗೃತಿ ವೇಧಿಕೆ ರಾಜ್ಯಾಧ್ಯಕ್ಷ ವಿ.ರಾಮಸ್ವಾಮಿ ಸನ್ಮಾನಿಸಿದರು. ಈ ವೇಳೆ ಡಿವೈಎಸ್‌ಪಿ ಪಾಂಡುರಂಗ, ಕರ್ನಾಟಕ ರಾಜ್ಯ ಮದ್ಯಪಾನ‌ ಸಂಯಮ ಮಂಡಳಿ ಕಾರ್ಯದರ್ಶಿ ರೋಹಿಣಿ, ತಹಶೀಲ್ದಾರ್‌ ಶ್ರೀನಿವಾಸಯ್ಯ,

ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಆನಂದಸುವರ್ಣ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಜಯಪ್ರಸಾದ್‌, ಜಿಲ್ಲಾ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಸ್ಥಳಿಯ ಅಧಿಕಾರಿ ಉಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next