ಚನ್ನಪಟ್ಟಣ: ತಾಲೂಕು ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಸಂಘದ 2022ರ ದಿನದರ್ಶಿಕೆಗಳನ್ನು ಮಂಗಳವಾರ ಬಿಡುಗಡೆ ಮಾಡಿದರು. ಸರಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಲ್. ನಾಗೇಶ್ ಮಾತ ನಾಡಿ, ಕೊರೊನಾ 3ನೇ ಅಲೆ ಹಿನ್ನೆಲೆ ಎಲ್ಲರೂ ಜಾಗೃತರಾಗ ಬೇಕಾ ಗಿದೆ.
ಕೊರೊನಾ ವಾರಿ ಯರ್ಸ್ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರು ಬೂಸ್ಟರ್ ಡೋಸ್ ತೆಗೆದು ಕೊಳ್ಳಬೇಕು ಎಂದು ಸಲಹೆ ನೀಡಿದರು. ಮತ್ತಷ್ಟು ಕಾರ್ಯೋನ್ಮುಖರಾಗಿ: ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸತೀಶ್ ಮಾತನಾಡಿ, ಸಂಘಟನೆ ವಿಚಾರದಲ್ಲಿ ಪ್ರತಿಯೊಂದು ಹಂತದಲ್ಲೂ ಜಾಗೃತರಾಗಿರಬೇಕಾಗುತ್ತದೆ. ರಾಜ್ಯದ ಆರು ಲಕ್ಷ ಸರ್ಕಾರಿ ನೌಕರರ ಅಭಿವೃದ್ಧಿ, ಜೊತೆಗೆ ಆರೋಗ್ಯ ಶಿಬಿರ, ಪತ್ರಿಭಾ ಪುರಸ್ಕಾರ ಸೇರಿದಂತೆ ಇನ್ನಿತರೆ ಸಮಾಜ ಮುಖೀ ಕಾರ್ಯ ಹಮ್ಮಿಕೊಳ್ಳಲು ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯೋನ್ಮುಖರಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ಸಂಘ ಕ್ರಿಯಾಶೀಲವಾಗಿದೆ: ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ರಾಜಶೇಖರ್ ಮಾತನಾಡಿ, ಉತ್ತಮ ಕಾರ್ಯಚಟುವಟಿಕೆ ಹಮ್ಮಿ ಕೊಳ್ಳುವ ಮೂಲಕ ತಾಲೂಕು ಸರ್ಕಾರಿ ನೌಕರರ ಸಂಘವು ಕ್ರಿಯಾಶೀಲವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ. 2022ರ ಕ್ಯಾಲೆಂಡರ್ ವರ್ಷವು ಎಲ್ಲರಿಗೂ ಆರೋಗ್ಯಯುತ, ನೆಮ್ಮದಿಯುತ ಜೀವನ ನೀಡಲಿ ಎಂದು ಹಾರೈಸಿದರು.
ಚನ್ನಪಟ್ಟಣ ತಾಲೂಕು ಸರ್ಕಾರಿ ನೌಕರರ ಸಂಘದ ಎಚ್.ಎಸ್. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ನೌಕರರ ಸಮಗ್ರ ಹಿತದೃಷ್ಟಿಯಿಂದ ತಾಲೂಕು ಸಂಘವು ಕಂಕಣ ಬದ್ಧವಾಗಿದೆ ಎಂದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೃಷ್ಣಾಪುರ ಶಿವಕುಮಾರ್ (ಅಕ್ಷರ ಬೆಳಕು) ಕಾರ್ಯಕ್ರಮ ನಿರ್ವಹಣೆ ಮಾಡಿದರು.
ರಾಜ್ಯ ಪರಿಷತ್ ಸದಸ್ಯ ಶಂಭುಗೌಡ, ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಂಬರೀಶ್ ಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಡಿ.ಪಿ.ಪುಟ್ಟಸ್ವಾಮಿಗೌಡ, ಆರೋಗ್ಯ ಇಲಾಖೆ ತಾಲೂಕು ಅಧ್ಯಕ್ಷ ಎಂ.ಪಿ.ಗುಂಡಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎನ್.ನಾಗೇಶ್, ಉಪತಹಶೀಲ್ದಾರ್ ಸೋಮೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಮೋಹನ್, ಉಪಾಧ್ಯಕ್ಷರಾದ ಗಿರೀಶ್, ಬೆಟ್ಟಯ್ಯ, ಅನಂತರಾಮು, ಖಜಾಂಚಿ ಚಿಕ್ಕಚನ್ನೇ ಗೌಡ, ನಿರ್ದೇಶಕರಾದ ಎಸ್.ಕೆ. ರಮೇಶ್, ಯತೀಶ್, ಲಕ್ಷ್ಮಮ್ಮ ಸೇರಿದಂತೆ ಎಲ್ಲ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಸಂಘದ 2022ರ ದಿನದರ್ಶಿಕೆಗಳನ್ನು ಮಂಗಳವಾರ ಬಿಡುಗಡೆ ಮಾಡಿದರು.