ಸಂಗಪ್ಪ ಉಪಾಸೆ ಹೇಳಿದರು.
Advertisement
ನಗರದ ವಾರ್ಡ್ ನಂ. 14ರ ಅಸರ್ ಮೋಹಲ್ಲಾದ ಮಿಲನ್ ಫಂಕ್ಷನ್ ಹಾಲ್‌ನಲ್ಲಿ ಕರ್ನಾಟಕ ನಗರ ಮೂಲಸೌಕರ್ಯಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ, ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕೆ ಕಾರ್ಯಕ್ರಮ, ಯಾದಗಿರಿ ನಗರಸಭೆ ಹಾಗೂ ಕಲಬುರಗಿ ಗ್ರಾಮೀಣ ಮಹಿಳಾ ಅಭಿವೃದ್ಧಿ ಶಿಕ್ಷಣ ಸಂಸ್ಥೆ (ಗ್ರಾಮ್ಸ್), ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಮನೆ ನಳ ಸಂಪರ್ಕಗಳ ಪ್ರೇರಣೆ ಮಾಹಿತಿ, ಸಂವಹನ ಹಾಗೂ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ನಗರಸಭೆ ಕಾರ್ಯಗಳು ನಮ್ಮ ಮನೆ ಕಾರ್ಯದಂತೆ
ಪ್ರೀತಿಯಿಂದ ಕಾಳಜಿ ಮಾಡಿದಾಗ ಮಾತ್ರ ನಗರ ಅಭಿವೃದ್ಧಿಯಾಗುತ್ತದೆ. ಅದರ ಜತೆಗೆ ನಗರಕ್ಕೂ ಕೂಡ
ಒಳ್ಳೆ ಹೆಸರು ಬರುತ್ತದೆ. ಇನ್ನೂ 6 ತಿಂಗಳಲ್ಲಿ ನಳ ಸಂಪರ್ಕ ಹೊಂದಿದ ಮನೆಗಳಿಗೆ ಶುದ್ಧವಾದ ಕುಡಿಯುವ ನೀರು
ಸರಬರಾಜು ಆಗುತ್ತದೆ ಎಂದು ಹೇಳಿದರು. ಕೆಯುಐಡಿಎಫ್‌ಸಿ ಯೋಜನಾಧಿಕಾರಿ ಮಹೇಶಕುಮಾರ ಮಾತನಾಡಿ, ಕೆಯುಐಡಿಎಫ್‌ಸಿ- ಎನ್‌ಕೆಯುಎಸ್‌ಐಪಿ
ಯೋಜನೆ ಯಾದಗಿರಿ ನಗರಕ್ಕೆ ಬಂದಿರುವುದು ಸಂತೋಷದ ವಿಷಯ. ಕರ್ನಾಟಕದ 20,460 ಗ್ರಾಮಗಳಿಗೆ ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆಯಾಗುತ್ತಿದೆ. ಇದರಿಂದ ಹಲವಾರು ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
Related Articles
ಕ್ಷೇತ್ರ ಮಟ್ಟದ ಸಿಬ್ಬಂದಿಗಳು ನಿಮ್ಮ ಮನೆಗೆ ಬಂದು ಅರ್ಜಿ ತುಂಬುವ ವಿಧಾನದ ಮಾಹಿತಿ ಸಹ ನೀಡುತ್ತಾರೆ ಎಂದು
ಹೇಳಿದರು.
Advertisement
ಯೋಜನಾ ಸಂಯೋಜಕರಾದ ದೇವೆಂದ್ರಪ್ಪ ಚಿಂತಕುಂಟಾ ಮಾತನಾಡಿ, ಯೋಜನೆ ಕುರಿತು ಸಮಗ್ರವಾದ ಮಾಹಿತಿನೀಡುವುದರ ಜತೆಗೆ ಯೋಜನೆಗೆ ಸಂಬಂಧಿ ಸಿದ ಕೆಲವು ಕಿರು ಚಿತ್ರ ಸಹ ಪ್ರದರ್ಶಿಸಿದರು. ನಗರಸಭೆ ಸದಸ್ಯರಾದ ತಸ್ಲಿಮ್ ಬಾನು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಾರ್ಯಪಾಲಕ ಅಭಿಯಂತರ
ಅಶೋಕ ಚಟ್ಟರ್ಕಿ, ಸಮುದಾಯ ಸಂಘಟನಾಧಿಕಾರಿ ಬಸಪ್ಪ ತಳವಡಿ, ವಕೀಲರಾದ ಶಫಿ ಅಹ್ಮದ್, ಎಂ.ಡಿ.ಇಸ್ಮಾಯಿಲ್, ಮಹಿಳಾ ಸಂಘದ ಮುಖಂಡರಾದ ಸಂಗೀತಾ ಇದ್ದರು. ಸಾಬಮ್ಮ ಪ್ರಾರ್ಥಿಸಿದರು. ದೇವಮ್ಮ ಅಬ್ಬೇತುಮಕೂರು ನಿರೂಪಿಸಿದರು. ಸಮುದಾಯ ಸಂಘಟಿಕರಾದ ಅವ್ವಮ್ಮ ವಂದಿಸಿದರು.