Advertisement

ಭಯೋತ್ಪಾದನೆ ಮಹಾ ಪಿಡುಗು ತೊಲಗಿಸಿ

11:48 AM May 22, 2018 | |

ಕಲಬುರಗಿ: ಭಾರತ ಸೇರಿದಂತೆ ವಿಶ್ವದಲ್ಲಿ ಪ್ರತಿದಿನ ನೂರಾರು ಅಮಾಯಕರ ಸಾವಿಗೆ ಕಾರಣವಾಗಿ ಜಗತ್ತನ್ನೇ ತಲ್ಲಣಗೊಳಿಸಿ ಅಶಾಂತಿ ಸೃಷ್ಟಿಗೆ ಕಾರಣೀಕರ್ತವಾದ ಭಯೋತ್ಪಾದನೆ ಒಂದು ದೊಡ್ಡ ಸಾಮಾಜಿಕ ಪಿಡುಗಾಗಿದೆ. ಇದನ್ನು ಬೇರು ಸಹಿತ ಸರ್ವನಾಶ ಮಾಡಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಉಪನ್ಯಾಸಕ ಎಚ್‌.ಬಿ. ಪಾಟೀಲ ಹೇಳಿದರು.

Advertisement

ಜಗಜ್ಯೋತಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ನಗರದ ನ್ಯೂ ರಾಘವೇಂದ್ರ ಕಾಲೋನಿ ಮುತ್ತಾ ಟ್ಯೂಟೋರಿಯಲ್ಸ್‌ನಲ್ಲಿ ಹಮ್ಮಿಕೊಂಡಿದ್ದ ಭಯೋತ್ಪಾದನಾ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ
ಬೋಧಿಸಿ ಅವರು ಮಾತನಾಡಿದರು. 

ಬಳಗದ ಗೌರವಾಧ್ಯಕ್ಷ ಶಾಂತಪ್ಪ ನರೋಣಾ ಮಾತನಾಡಿ, ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ದೇಶದಲ್ಲಿ ಕೆಲ ದುಷ್ಟ ಶಕ್ತಿಗಳು ಸಮಾಜದಲ್ಲಿ ಅರಾಜಕತೆ ವಾತಾವರಣ ಸೃಷ್ಟಿಸುವ ಕಾರ್ಯಮಾಡುತ್ತಿವೆ. ಅದನ್ನು ನಾವೆಲ್ಲರೂ
ಒಕ್ಕೋರಲಿನಿಂದ ಖಂಡಿಸುವ ಮೂಲಕ, ಇದರ ನಾಶಕ್ಕೆ ಶ್ರಮಿಸಬೇಕು ಎಂದು ಹೇಳಿದರು.

ಸಂಸ್ಥೆ ಮುಖ್ಯಸ್ಥ ಶಿವಕುಮಾರ ಮುತ್ತಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪ ಕಲಾವಿದ ಚಂದ್ರಶೇಖರ ವೈ. ಶಿಲ್ಪಿ,
ಶಿಕ್ಷಕರಾದ ಸಿದ್ದಾರೂಢ ನರಬೋಳಿ, ಜಗದೀಶ ರೆಡ್ಡಿ, ಆನಂದ ಮಾಳಾ, ನಾಗರಾಜ ಪಂಚಾಳ, ನಟರಾಜ ರಾಜಾಹುಲಿ, ಸಂತೋಷ ಮುತ್ತಾ, ಲಕ್ಷ್ಮೀಮುತ್ತಾ, ಅಂಬಿಕಾ ಮಡ್ಡಿ ಹಾಗೂ ಸಂಸ್ಥೆ ಸಿಬ್ಬಂದಿ, ವಿದ್ಯಾರ್ಥಿಗಳು, ಬಡಾವಣೆ ನಾಗರಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next