Advertisement

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

09:18 AM Dec 19, 2024 | Team Udayavani |

ನವದೆಹಲಿ: ವಿಮಾನಯಾನ ಸಂಸ್ಥೆಗಳಿಗೆ ಬೆದರಿಕ ಕರೆಗಳು ಹೆಚ್ಚಾದ ಬೆನ್ನಲ್ಲೇ ವಿಮಾನಯಾನ ಭದ್ರತಾ ನಿಯಮಗಳಿಗೆ ಸರ್ಕಾರ ತಿದ್ದುಪಡಿಯನ್ನು ತಂದಿದೆ.

Advertisement

ಹೊಸ ನಿಯಮಗಳ ಪ್ರಕಾರ ವಿಮಾನಗಳಿಗೆ ಬಾಂಬ್‌ ಬೆದರಿಕೆ ಒಡ್ಡಿದವರಿಗೆ ವಿಮಾನ ಪ್ರಯಾಣಕ್ಕೆ ನಿರ್ಬಂಧ, ದಂಡ ವಿಧಿಸಲಾಗುತ್ತದೆ. ಅಲ್ಲದೇ ಈ ಅಧಿಕಾರವನ್ನು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋದ ನಿರ್ದೇಶಕರಿಗೆ ನೀಡಲಾಗಿದೆ. ಇದು ಹುಸಿಬಾಂಬ್‌ ಬೆದರಿಕೆ ತಡೆಗೆ ಸಂಬಂಧಿಸಿದಂತೆ ಜಾರಿ ಮಾಡಲಾದ ಮೊದಲ ನಿಯಮವಾಗಿದೆ.

ಹುಸಿಬಾಂಬ್‌ ಬೆದರಿಕೆಯನ್ನು 6 ವಿಭಾಗಗಳಾಗಿ ವಿಂಗಡಿಸಲಾಗಿದ್ದು, 6 ವಿಭಾಗಗಳಲ್ಲಿ ಕನಿಷ್ಠ 1 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೂ ದಂಡ ವಿಧಿಸಲು ಅವಕಾಶ ನೀಡಲಾಗಿದೆ. “ಸುಳ್ಳು ಮಾಹಿತಿ ತಡೆ’ ಎಂಬ ಹೆಸರಿನಲ್ಲಿ ಈ ಹೊಸ ನಿಯಮಗಳನ್ನು ಸೇರ್ಪಡೆ ಮಾಡಲಾಗಿದೆ. ಅಕ್ಟೋಬರ್‌ನಲ್ಲಿ ವಿಮಾನಯಾನ ಸಂಸ್ಥೆಗಳಿಗೆ 666 ಬೆದರಿಕೆ ಕರೆಗಳು ಬಂದಿದ್ದವು.

ಇದನ್ನೂ ಓದಿ: Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Advertisement

Udayavani is now on Telegram. Click here to join our channel and stay updated with the latest news.

Next