Advertisement

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

08:49 AM Dec 19, 2024 | Team Udayavani |

ನವದೆಹಲಿ: ಬಹುಸಂಖ್ಯಾತರು ಬಯಸಿದಂತೆ ದೇಶ ನಡೆಯಬೇಕು ಎಂದು ಹೇಳಿದ್ದ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಶೇಖರ್‌ ಕುಮಾರ್‌ ಯಾದವ್‌ ಅವರಿಗೆ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಛೀಮಾರಿ ಹಾಕಿದೆ.

Advertisement

ಆರ್‌ಎಸ್‌ಎಸ್‌ನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನ್ಯಾ|ಶೇಖರ್‌ ಕುಮಾರ್‌, ಬಹುಸಂಖ್ಯಾತರು ಬಯಸಿದಂತೆ ದೇಶ ನಡೆಯಬೇಕು. ಏಕರೂಪ ನಾಗರಿಕ ಸಂಹಿತೆಯು ಸಾಮಾಜಿಕ ಸೌಹಾರ್ದತೆ ತರುತ್ತದೆ ಮತ್ತು ಲಿಂಗ ಅಸಮಾನತೆಯನ್ನು ತೊಡೆಯುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಗಳಿಗೆ ದೇಶಾದ್ಯಂತ ಭಾರಿ ಆಕ್ಷೇಪ, ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಕೊಲಿಜಿಯಂ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದ ಸುಪ್ರೀಂಕೋರ್ಟ್‌, ಸಾರ್ವಜನಿಕ ಸಮಾರಂಭಗಳಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಒಂದಷ್ಟು ಗಾಂಭೀರ್ಯವನ್ನು ಉಳಿಸಿಕೊಳ್ಳಿ ಎಂದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next