Advertisement

ಮುಂಬರುವ ಚುನಾವಣೆ ಎದುರಿಸಲು ಸಜ್ಜಾಗಿ

02:35 PM Apr 07, 2022 | Team Udayavani |

ಚಿಕ್ಕಮಗಳೂರು: ರಾಜ್ಯದಲ್ಲಿ ಚುನಾವಣೆ ಎದುರಾಗುತ್ತಿದ್ದು ಬಿಜೆಪಿಯನ್ನು ಸಂಘಟಿಸಿ ಬಲ ವರ್ಧನೆಗೊಳಿಸಲು ಜಿಲ್ಲೆಯ ಬೂತ್‌ ಅಧ್ಯಕ್ಷರು ಸಜ್ಜಾಗುವಂತೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಮಧುಕುಮಾರ್‌ ರಾಜ್‌ ಅರಸ್‌ ಕರೆ ನೀಡಿದರು.

Advertisement

ಬುಧವಾರ ನಗರದ ಕೋಟೆ ಬಡಾವಣೆ ಬಿಜೆಪಿ ಬೂತ್‌ ಅಧ್ಯಕ್ಷರ ಮನೆಯಲ್ಲಿ ಬಿಜೆಪಿ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಮನೆ ಮೇಲೆ ಬಿಜೆಪಿ ಬಾವುಟ ಹಾರಿಸುವ ಮೂಲಕ ಅವರು ಮಾತನಾಡಿದರು. ಪಕ್ಷದ ಸೂಚನೆಯಂತೆ ನಗರದ 109 ಶಕ್ತಿ ಕೇಂದ್ರದ ಅಧ್ಯಕ್ಷರ ಮನೆ ಮೇಲೆ ಬಿಜೆಪಿ ಬಾವುಟವನ್ನು ಹಾರಿಸುವ ಮೂಲಕ ಸಂಸ್ಥಾಪನಾ ದಿನವನ್ನು ಅರ್ಥಪೂರ್ಣವಾಗಿ ಆಚರಿ ಸಲಾಗಿದೆ ಎಂದರು.

ಬಿಜೆಪಿ ಬೆಳೆದು ಬಂದ ಹಾದಿ ಕಷ್ಟಕರವಾಗಿದ್ದು, ಪಕ್ಷದ ಬೆಳವಣಿಗೆ, ದಿಕ್ಸೂಚಿ, ಹಾಗೂ ಕಾರ್ಯಚಟುವಟಿಕೆಗಳ ಕುರಿತು ಶಾಸಕರು ವರ್ಚುಯಲ್‌ ಮೂಲಕ ಮಾತನಾಡಲಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಆ ಹಿನ್ನೆಲೆಯಲ್ಲಿ ಪಕ್ಷವನ್ನು ಸಂಘಟಿಸಿ ಬಲವರ್ಧನೆಗೊಳಿಸಬೇಕಿದೆ. ಆದರ ಜವಾಬ್ದಾರಿಯನ್ನು ಬೂತ್‌ ಅಧ್ಯಕ್ಷರು ಹಾಗೂ ಕಾರ್ಯಕರ್ತರು ವಹಿಸಿಕೊಂಡು ಚಟುವಟಿಕೆ ಕೈಗೊಳ್ಳುವಂತೆ ಸಲಹೆ ನೀಡಿದರು.

ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗಣ್ಣ ಮಾತನಾಡಿ, ಏ.6 ಬಿಜೆಪಿ ಸಂಸ್ಥಾಪನೆಗೊಂಡ ದಿನ, ಆರಂಭದಲ್ಲಿ 2 ಸ್ಥಾನಗಳನ್ನು ಹೊಂದಿದ್ದ ಪಕ್ಷ ಇಂದು ದೇಶಾದ್ಯಂತ ವಿಸ್ತಾರವಾಗಿ ಬೆಳೆದಿದೆ. ಅನೇಕ ಹಿರಿಯ ನಾಯಕರು, ಮುಖಂಡರ ಪರಿಶ್ರಮವಿದೆ. ಆ ನಿಟ್ಟಿನಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಟರಾಜ್‌, ಕೃಷ್ಣಮೂರ್ತಿ, ನಗರಸಭೆ ಮಾಜಿ ಉಪಾಧ್ಯಕ್ಷೆ ಲಕ್ಷ್ಮಮ್ಮ, ಮಹೇಶ್‌, ನಿಶಾಂತ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.