Advertisement

“ರಕ್ಷಕರ’ವಿರುದ್ಧ ಹೋರಾಟಕ್ಕೆ ಸಿದ್ಧರಾಗಿ

08:35 AM Aug 09, 2017 | Harsha Rao |

ಹೊಸದಿಲ್ಲಿ: ಸ್ವಯಂ ಘೋಷಿತ “ರಕ್ಷಕ’ರ ಹಾವಳಿ ತೀವ್ರಗೊಂಡಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿ ಹಾಗೂ ಸಂಸ್ಥೆಗಳ ಸ್ವಾತಂತ್ರ್ಯ ರಕ್ಷಣೆಗೆ ಕಾಂಗ್ರೆಸ್‌ ಹಾಗೂ ಪಕ್ಷದ ಮುಖಂಡರು ಸದಾ ಬದ್ಧರಾಗಿರಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

Advertisement

ಗುಜರಾತ್‌ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾಂಗ್ರೆಸ್‌ನ ಇಬ್ಬರು ಶಾಸಕರ ಮತಗಳನ್ನು ಅನರ್ಹಗೊಳಿಸಲು ಕೋರಿ ಕಾಂಗ್ರೆಸ್‌ ಪಕ್ಷ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ ದಿನವೇ ನಡೆದ ಕಾಂಗ್ರೆಸ್‌ ವಿಶೇಷ ಕಾರ್ಯ ಕಾರಿಣಿಯಲ್ಲಿ ಸೋನಿಯಾ ಹೀಗೆ ಹೇಳಿದ್ದಾರೆ. “ಕ್ವಿಟ್‌ ಇಂಡಿಯಾ ಚಳವಳಿ’ಗೆ 75 ವರ್ಷಗಳು ಸಂದ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಪಕ್ಷದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಸ್ವಯಂ ಘೋಷಿತ ರಕ್ಷಕರು ಸ್ವಾತಂತ್ರ್ಯಕ್ಕೆ ಮಾರಕವಾಗಿರುವ ಜೊತೆಗೆ, ದೇಶದ ಬಹುತ್ವ ಹಾಗೂ ವೈವಿಧ್ಯತೆಗೂ ಕಂಟಕಪ್ರಾಯರಾಗಿದ್ದಾರೆ. ಇಂಥವರಿಂದ ವ್ಯಕ್ತಿ ಹಾಗೂ ಸಂಸ್ಥೆಗಳ ಸ್ವಾತಂತ್ರ್ಯವನ್ನು ರಕ್ಷಿಸುವ ಕಾರ್ಯದಲ್ಲಿ ಕಾಂಗ್ರೆಸ್‌ ತೊಡಗಿಕೊಳ್ಳಬೇಕು,’ ಎಂದಿದ್ದಾರೆ.

ರಾಹುಲ್‌ ಗೈರು: “ಕ್ವಿಟ್‌ ಇಂಡಿಯಾ ಚಳ ವಳಿ’ಗೆ 75 ವರ್ಷಗಳು ಸಂದ ಹಿನ್ನೆಲೆಯಲ್ಲಿ ನಡೆದ ವಿಶೇಷ ಕಾರ್ಯಕಾರಿಣಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಗೈರುಹಾಜರಿ ಎದ್ದು ಕಾಣುತ್ತಿತ್ತು. ಗುಜರಾತ್‌ನಲ್ಲಿ ರಾಜ್ಯಸಭೆ ಚುನಾವಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ರಾಹುಲ್‌ ಸಭೆಗೆ ಹಾಜರಾಗಿಲ್ಲ ಎನ್ನಲಾಗಿತ್ತಾದರೂ, ತೀವ್ರ ಜ್ವರದಿಂದ ಬಳಲು ತ್ತಿದ್ದ ಕಾರಣ ಅವರು ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next