ಹೊಸದಿಲ್ಲಿ: ಈ ವರ್ಷವೂ ಅಕ್ಟೋಬರ್ ತಿಂಗಳಲ್ಲಿ ಸಂಭವಿಸುವ ಒರಿ ಯೊನಿಡ್ ಉಲ್ಕಾಪಾತವನ್ನು ಸೋಮವಾರ ರಾತ್ರಿ ಕಣ್ತುಂಬಿಕೊಳ್ಳಬಹುದು. ಹ್ಯಾಲೆ ಧೂಮಕೇತು ಭೂಮಿಯ ಪರಿಭ್ರಮಣೆ ಪಥ ದಲ್ಲಿ ಬಿಟ್ಟುಹೋದ ತ್ಯಾಜ್ಯವು ತೀವ್ರ ವೇಗ ದಲ್ಲಿ ಸಾಗುತ್ತವೆ. ಆಗ ಇವು ಭೂಮಿಯ ಸಮೀಪ ಕಾಣಿಸಿಕೊಳ್ಳಲಿದ್ದು, ಹೊಳಪಿ ನಿಂದಾಗಿ ಉಲ್ಕಾಪಾತ ಉಂಟಾಗಲಿದೆ. ಈ ಬಾರಿ ಅ.22 ರ ಮಧ್ಯರಾತ್ರಿ ಪ್ರಕ್ರಿಯೆ ತೀವ್ರ ಗತಿಯಲ್ಲಿ ನಡೆಯುತ್ತದೆ. ಅಂದು ಮಧ್ಯ ರಾತ್ರಿಯಿಂದ ಬೆಳಗಿನ ಜಾವದವರೆಗೂ ಈ ಸಂಭ್ರಮವನ್ನು ನೋಡಿ ಕಣ್ತುಂಬಿ ಕೊಳ್ಳ ಬಹುದು ಎಂದು ನಾಸಾ ತಿಳಿಸಿದೆ. ಸಾಮಾನ್ಯ ವಾಗಿ ಪ್ರತಿ ವರ್ಷ ಅ.1ರಿಂದ ನ.7 ರವರೆಗೂ ಈ ಪ್ರಕ್ರಿಯೆ ನಡೆಯುತ್ತದೆ. ಆದರೆ, ಒರಿಯಾ ನಿಡ್ ಉಲ್ಕೆಯು ಮಂದ ವಾಗಿದ್ದು, ನಗರ ಪ್ರದೇಶಗಳ ಬೆಳಕಿನಲ್ಲಿ ಕಾಣಿಸದು. ಸಂಪೂರ್ಣ ಕತ್ತಲಿರುವ ಪ್ರದೇಶ ದಲ್ಲಿ ಮಾತ್ರ ಕಾಣಿಸುತ್ತದೆ. ಅಲ್ಲದೆ, ಈ ಬಾರಿ ಚಂದ್ರನ ಬೆಳಕೂ ಕೂಡ ಇರಲಿದ್ದು, ಅಷ್ಟೇನೂ ಪ್ರಖರ ವಾಗಿ ಕಾಣಿಸದು ಎಂದು ಊಹಿಸಲಾಗಿದೆ.