Advertisement
ಬುಧವಾರ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಪುನಶ್ಚೇತನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಅತಿ ಹೆಚ್ಚಾಗಿ ಮೊಬೈಲ್ ಹೆಚ್ಚು ಬಳಸುತ್ತಾ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರಿಂದ ಹೊರ ಬಂದು ಉತ್ತಮ ಜೀವನ ಪಿಸಿಕೊಳ್ಳುವಂತಾಗಬೇಕು ಎಂದು ಆಶಿಸಿದರು. ನಿರಂತರ ಅಭ್ಯಾಸ ಸಾಧನೆಯ ಕೀಲಿ ಕೈ. ವಿದ್ಯಾರ್ಥಿ ಜೀವನದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ತಿಳಿಸುವ ಉದ್ದೇಶಕ್ಕಾಗಿ ಏರ್ಪಡಿಸಿರುವ ಈ ಕಾರ್ಯಕ್ರಮ ಅರ್ಥಪೂರ್ಣ. ಈ ಕಾಲೇಜಿನಲ್ಲಿ ದೊರೆಯುವ ಉತ್ತಮ ಸೌಲಭ್ಯ ಸದುಪಯೋಗಪಡಿಸಿಕೊಂಡು ಜ್ಞಾನವಂತರು, ಸಾಧಕರಾಗಬೇಕು ಎಂದು ತಿಳಿಸಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎಚ್.ಎಸ್. ಮಂಜುನಾಥ್ ಕುರ್ಕಿ ಮಾತನಾಡಿ, ಶಿಕ್ಷಣ ಎಂದರೆ ಜೀವನ ಪ್ರಜ್ಞೆ ಮೂಡಿಸುವುದು. ವಿದ್ಯೆ ಜ್ಞಾನಕ್ಕಾಗಿಯೇ ಹೊರತು ಉದ್ಯೋಗಕ್ಕಾಗಿಯೇ ಅಲ್ಲ ಎಂದರು. ಮೇ| ಆರ್. ಗೌರಮ್ಮ ಮಾತನಾಡಿ, ಎವಿಕೆ ಕಾಲೇಜು ತನ್ನದೇ ಆದ ಭವ್ಯ ಇತಿಹಾಸ ಒಳಗೊಂಡಿದ್ದು ಇಲ್ಲಿ ಅಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿನಿಯರು ರಾಜ್ಯ, ರಾಷ್ಟ್ರ ಮಟ್ಟದ ಹುದ್ದೆಯಲ್ಲಿದ್ದಾರೆ ಎಂದು ಹೇಳಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ| ಬಿ.ಪಿ. ಕುಮಾರ್ ಪ್ರಾಸ್ತಾವಿಕ ನುಡಿಗಳಾನ್ನಾಡಿದರು. ಕಾರ್ಯಕ್ರಮದ ಸಂಘಟಕ ಜಿ.ಓ. ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು. ಭಾವನಾ ಪ್ರಾರ್ಥಿಸಿದರು. ಸಿಂಧು ಸ್ವಾಗತಿಸಿದರು. ಧನ್ಯತಾ, ಸಂಜನಾ ನಿರೂಪಿಸಿದರು. ಅರ್ಪಿತ ವಂದಿಸಿದರು.