Advertisement
ಇದು ಉತ್ತರ ಪ್ರದೇಶ ಮೂಲದ ಬುಡಕಟ್ಟು ಸಮುದಾಯದ “ಬವಾರಿಯಾ’ ಗ್ಯಾಂಗ್‌ನ ಕೈಚಳಕ. ಇತ್ತೀಚೆಗೆ ವಿಜಯನಗರ ಪೊಲೀಸರು ಐವರುಬವಾರಿಯಾ ಗ್ಯಾಂಗ್ ಸದಸ್ಯರನ್ನು ಬಂಧಿಸಿದ್ದರು.
ಗ್ಯಾಂಗ್‌ಗೆ ಶಕ್ತಿಸೇನಾ ಎಂಬಾತ ಮುಖ್ಯಸ್ಥನಾಗಿದ್ದ. ದೆಹಲಿ ಮೂಲದ ವ್ಯಕ್ತಿಯೊಬ್ಬನ ಸೂಚನೆ ಮೇರೆಗೆ ಈತ ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದಕ್ಷಿಣ ಭಾರತದ ರಾಜ್ಯಗಳ ಕ್ಯಾಪಿಟಲ್ ಸಿಟಿಗಳಿಗೆ ತನ್ನ ತಂಡವನ್ನು ಕಳುಹಿಸಿ ಸರಗಳ್ಳತನ ಮಾಡಿಸಿ ಅದನ್ನು ದೆಹಲಿಗೆ ತರಿಸಿಕೊಂಡು ವಿಲೇವಾರಿ ತಲಾ ಇಂತಿಷ್ಟು ಹಣ ಕೊಟ್ಟು ಕಳುಹಿಸಿದ್ದ. ಇದನ್ನೂ ಓದಿ:ಇಪ್ಪತ್ತು ದಿನದಲ್ಲಿ ಸಿಇಟಿ ಫಲಿತಾಂಶ ಪ್ರಕಟ : ಡಾ.ಸಿ.ಎನ್.ಅಶ್ವತ್ಥನಾರಾಯಣ
Related Articles
ಅಪರಾಧಕೃತ್ಯ ಎಸಗುತ್ತಿದ್ದಾರೆ ಎನ್ನುತ್ತಾರೆ ಪೊಲೀಸರು.
Advertisement
ಕೃತ್ಯ ಹೇಗೆ?: ಉತ್ತಮ ಬಟ್ಟೆ, ಶೂ, ಧರಿಸಿ ವಿಮಾನದಲ್ಲಿ ಒಂದು ಬಾರಿ ಬರುವ ಬವಾರಿಯಾ ತಂಡದ ಹತ್ತು ಮಂದಿ ಸದಸ್ಯರು, ಬೆಂಗಳೂರು ಗ್ರಾಮಾಂತರ ಪ್ರದೇಶಗಳಾದ ಆನೇಕಲ್, ಗುಬ್ಬಲಾ, ಕೆಂಗೇರಿ, ದೇವನಹಳ್ಳಿ ಸಮೀಪದಲ್ಲಿ ಮಾಲೀಕರ ನಿರೀಕ್ಷೆಗೂ ಹೆಚ್ಚು ಬಾಡಿಗೆಕೊಟ್ಟು ಸ್ಥಳೀಯ ಆರೋಪಿಗಳ ನೆರವಿನೊಂದಿಗೆ ವಾಸವಾಗುತ್ತಾರೆ. ಇಲ್ಲವಾದಲ್ಲಿ ಲಾಡ್ಜ್, ಸಣ್ಣ-ಪುಟ್ಟಕೊಠಡಿಗಳಲ್ಲಿ ವಾಸಿಸುತ್ತಾರೆ.
ಇದೇ ವೇಳೆ ಕಪ್ಪು ಬಣ್ಣದ ಪಲ್ಸರ್ ಬೈಕ್‌ಗಳನ್ನು ಕಳ್ಳತನ ಮಾಡುತ್ತಾರೆ. ಜತೆಗೆ ನಂಬರ್ ಪ್ಲೆಟ್ ಬದಲಾವಣೆ ಅಥವಾ ತೆಗೆಯುತ್ತಾರೆ. ಬಳಿಕ ಮುಂಜಾನೆ 5 ಗಂಟೆಯಿಂದ 8.30ರ ಅವಧಿಯಲ್ಲಿ ಫೀಲ್ಡ್‌ಗಿಳಿಯುವ ತಂಡಗಳು, ಬೇರೆ ಬೇರೆ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು,
ಮನೆ ಮುಂದೆ ರಂಗೋಲಿ ಹಾಕುವ, ವಾಯುವಿಹಾರಕ್ಕೆ ಹೋಗುವ, ಒಂಟಿಯಾಗಿ ಹೋಗುವ ಮಹಿಳೆಯರನ್ನು ಹಿಂಬಾಲಿಸಿ ಕ್ಷಣಾರ್ಧದಲ್ಲಿ ಚಿನ್ನದ ಸರಗಳ ಕಳವು ಮಾಡಿ ಪರಾರಿಯಾಗುತ್ತಾರೆ. ಇದರೊಂದಿಗೆ ಇತ್ತೀಚೆಗೆ ಬೀಗ ಹಾಕಿದ ಮನೆಗಳು, ಒಂಟಿ ಮಹಿಳೆಯರು ವಾಸವಾಗಿರುವ ಮಹಿಳೆಯರ ಮನೆಗಳಿಗೆ ನುಗ್ಗಿ ದರೋಡೆ, ಡಕಾಯಿತಿಯಲ್ಲೂ ತೊಡಗಿದ್ದಾರೆ. ಕೃತ್ಯ ಎಸಗಿದ ಬಳಿಕ ದೆಹಲಿಗೆ ವಿಮಾನ ಅಥವಾ ರೈಲಿನಲ್ಲಿ ವಾಪಸ್ ಹೋಗುತ್ತಿದ್ದರು. ಕದ್ದ ಸರಗಳನ್ನು ದೆಹಲಿಯಲ್ಲಿ ಒಬ್ಬನಿಗೆ ಕೊಟ್ಟು ಕಮಿಷನ್ ಪಡೆದು ತಮ್ಮ ಊರುಗಳಿಗೆ ತೆರಳುತ್ತಿದ್ದರು. ಸ್ವಲ್ಪದಿನದ ನಂತರ ಈ ಗ್ಯಾಂಗ್‌ನ ಮತ್ತೊಂದು ತಂಡ ಬೆಂಗಳೂರಿಗೆ ಬಂದು ಕೃತ್ಯದಲ್ಲಿ ಭಾಗಿಯಾಗುತ್ತದೆ. ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್‌ಗಳನ್ನು ಸುಮಾರು 10-15 ಕಿ.ಮೀ. ದೂರದ ಸ್ಲಂ ಅಥವಾ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಪರಾರಿಯಾಗುತ್ತಾರೆ. ಜಾಗ್ರತೆ ವಹಿಸಲು ಸಲಹೆ
ಮುಂಜಾನೆ ಮನೆ ಮುಂದೆ ರಂಗೋಲಿ ಹಾಕುವಾಗ, ವಾಯುವಿಹಾರಕ್ಕೆಹೋಗುವಾಗ ಸರಮುಚ್ಚಿಕೊಳ್ಳುವ ವೇಲ್‌ಅಥವಾ ವಸ್ತ್ರ ಧರಿಸುವುದು ಉತ್ತಮ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು. -ಮೋಹನ್ ಭದ್ರಾವತಿ