ಪಾಟ್ನಾ : ಬಿಹಾರದ ಸಿಎಂ ನಿತೀಶ್ ಕುಮಾರ್ ಅವರ ನಿವಾಸದಲ್ಲಿ ನಡೆದ ವಿಪಕ್ಷ ನಾಯಕರ ಸಭೆಯಲ್ಲಿ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮದುವೆಯಾಗಿ ಎಂದು ಹಿತನುಡಿಗಳನ್ನಾಡಿದ್ದಾರೆ.
“ಬಾತ್ ಮಾನಿಯೇ, ಶಾದಿ ಕರಿಯೇ”, ನೀವು ಮದುವೆಯಾಗಿ ಎಂಬ ನಮ್ಮ ಸಲಹೆಯನ್ನು ಕೇಳುವುದಿಲ್ಲ ಎಂದು ಸಭೆಯಲ್ಲಿದ್ದ 53ರ ರಾಹುಲ್ ಗಾಂಧಿಯವರನ್ನು ಹೊಗಳುತ್ತಾ, ನಿಮ್ಮ ತಾಯಿ ನೀವು ಮದುವೆಯಾಗಲು ನಿರಾಕರಿಸಿದ ಬಗ್ಗೆ ಚಿಂತಿತರಾಗಿದ್ದಾರೆ” ಎಂದು ಲಾಲು ಹೇಳಿದರು.
“ನಾವು ನಿಮ್ಮ ಮದುವೆಯ ಮೆರವಣಿಗೆಯ ಭಾಗವಾಗಲು ಬಯಸುತ್ತೇವೆ ಎಂದು ಪ್ರಸಾದ್ ಹೇಳಿದರು, ಈ ಸಂದರ್ಭದಲ್ಲಿ ಹಾಜರಿದ್ದ ನಾಯಕರು ನಗುವಿನ ಅಲೆಯಲ್ಲಿ ತೇಲಿದರು.
ಫಿಟ್ ಆಗಿದ್ದೇನೆ
“ಈಗ ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಮತ್ತು ನರೇಂದ್ರ ಮೋದಿಯವರನ್ನು ಫಿಟ್ ಮಾಡುತ್ತೇನೆ. ಸದ್ಯಕ್ಕೆ ದೇಶದ ಪರಿಸ್ಥಿತಿ ಕಠೋರವಾಗಿದೆ. ಜುಲೈನಲ್ಲಿ ಶಿಮ್ಲಾದಲ್ಲಿ ನಾವು ಮತ್ತೆ ಸಭೆ ಸೇರಿ 2024 ರಲ್ಲಿ ಬಿಜೆಪಿ ವಿರುದ್ಧ ಹೋರಾಡಲು ನಮ್ಮ ರಾಜ್ಯಗಳಲ್ಲಿ ಕೆಲಸ ಮಾಡುವಾಗ ಒಟ್ಟಾಗಿ ಮುನ್ನಡೆಯಲು ಮುಂದಿನ ಕಾರ್ಯಸೂಚಿಯನ್ನು ಸಿದ್ಧಪಡಿಸುತ್ತೇವೆ” ಎಂದರು.
“ಕರ್ನಾಟಕದಲ್ಲಿ ಹನುಮಂತನು ತನ್ನ ಗದೆಯಿಂದ ಬಿಜೆಪಿಯನ್ನು ಹೊಡೆದೋಡಿಸಿದನು, ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷವನ್ನು ಗೆಲ್ಲುವಂತೆ ಮಾಡಿದನು. ಹನುಮಂತ ಈಗ ವಿರೋಧ ಪಕ್ಷದಲ್ಲಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುವುದು ಖಚಿತ” ಎಂದು ಲಾಲು ಭವಿಷ್ಯ ನುಡಿದರು.