Advertisement

ಉಕ ಅಭಿವ್ಡ ರಾಂಗೋಪಾಲೃದ್ಧಿಗೆ ಜೆಡಿಎಸ್‌ ಗೆಲ್ಲಿಸಿ

03:07 PM Feb 03, 2018 | |

ನಾಲತವಾಡ: ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಜೆಡಿಎಸ್‌ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡಲು
ಮತದಾರರು ಮನಸ್ಸು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

Advertisement

ಪಟ್ಟಣದಲ್ಲಿ ಶುಕ್ರವಾರ ನಡೆದ ಕುಮಾರಪರ್ವ ಭಾಗ-2 ಕಾರ್ಯಕ್ರಮದ ಕೊನೆಯ ಸಾರ್ವಜನಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ನನಗೋಸ್ಕರ ತಮ್ಮ ಕ್ಷೇತ್ರ ತ್ಯಾಗ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಈ ಭಾಗದ ಜನತೆ ಅವರ ಕೈ ಬಲಪಡಿಸಲು ಮುಂದಾಗಬೇಕು ಎಂದರು.

ನಾನು ಮುಖ್ಯಮಂತ್ರಿಯಾದರೆ ಶಾಸಕ ನಡಹಳ್ಳಿ ಸಚಿವರಾಗುತ್ತಾರೆ. ಅವರು  ಸಚಿವರಾದರೆ ಮುದ್ದೇಬಿಹಾಳ ಮತಕ್ಷೇತ್ರ, ವಿಜಯಪುರ ಜಿಲ್ಲೆ ಸೇರಿದಂತೆ ಇಡಿ ಉತ್ತರಕರ್ನಾಟಕ ಹಿಂದೆಂದೂ ಕಾಣದ ಅಭಿವೃದ್ಧಿ ಕಾಣುತ್ತದೆ. ಅವರು ನನಗೋಸ್ಕರ ತಾವು ಪ್ರತಿನಿಧಿ ಸುವ ದೇವರಹಿಪ್ಪರಗಿ ಮತಕ್ಷೇತ್ರ ಬಿಟ್ಟು ಕೊಟ್ಟು ತ್ಯಾಗ ಮಾಡುತ್ತಿದ್ದಾರೆ. ಅವರ ತ್ಯಾಗ ವ್ಯರ್ಥಗೊಳ್ಳದಂತೆ ಇಲ್ಲಿನ
ಮತದಾರರು ಬೆಂಬಲ ನೀಡಬೇಕು ಎಂದರು ಕೋರಿದರು.

ದೇವರಹಿಪ್ಪರಗಿ ಮತದಾರರು ನಡಹಳ್ಳಿಯನ್ನು ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಮೊದಲ ಬಾರಿ ಬಿಜೆಪಿ ಸರ್ಕಾರ,
ಎರಡನೇ ಬಾರಿ ಕಾಂಗ್ರೆಸ್‌ ಸರ್ಕಾರದ ಅಸಹಕಾರದಿಂದ ಮತ ಹಾಕಿ ಗೆಲ್ಲಿಸಿದ ಜನರ ಋಣ ತೀರಿಸೋದು ಸಾಧ್ಯವಾಗಿಲ್ಲ ಅನ್ನೋ ನೋವು ಅವರ ಮನಸ್ಸಲ್ಲಿರುವುದನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ. ನನ್ನನ್ನು ದೇವರಹಿಪ್ಪರಗಿಯಿಂದ ಆಯ್ಕೆ ಮಾಡಿ ಕಳುಹಿಸಿದಲ್ಲಿ ನಾನು ಸಿಎಂ ಆದರೆ ವಿಜಯಪುರ ಜಿಲ್ಲೆ ಸಹಿತ ಉಕ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ನಂಬಿ ನನ್ನ ಮೇಲೆ ವಿಶ್ವಾಸವಿಟ್ಟು ಆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಅವರ ತ್ಯಾಗಕ್ಕೆ ಮುದ್ದೇಬಿಹಾಳ ಮತಕ್ಷೇತ್ರದ ಜನತೆ ಫಲ ದೊರಕಿಸಿಕೊಡಲು ಅವರನ್ನು ಆಯ್ಕೆ ಮಾಡಬೇಕು ಎಂದರು.

ಮುದ್ದೇಬಿಹಾಳದ ಹಾಲಿ ಶಾಸಕ ಕಾಂಗ್ರೆಸ್‌ನ ಸಿ.ಎಸ್‌. ನಾಡಗೌಡ 25 ವರ್ಷಗಳ ಆಡಳಿತ ಅಭಿವೃದ್ಧಿ ನಿರೀಕ್ಷೆ ಹುಸಿ ಮಾಡಿದೆ. ಅದನ್ನು ಸರಿಪಡಿಸಲು ಸಾಧ್ಯ ಎನ್ನುವ ವಿಶ್ವಾಸದಿಂದ ಎಲ್ಲೆಡೆ ಜೆಡಿಎಸ್‌ ಅಲೆ ನಿರ್ಮಿಸಿದ್ದಾರೆ ಎಂದರು.  ಜೆಡಿಎಸ್‌ ಮುಖಂಡ ಶಾಂತಗೌಡ ಪಾಟೀಲ ಮಾತನಾಡಿ, ಈ ಭಾಗದಲ್ಲಿ ಏತ ನೀರಾವರಿ ಆದಲ್ಲಿ 40 ಹಳ್ಳಿಗೆ ನೀರು ಕೊಡಲು ಸಾಧ್ಯ. ಜೆಡಿಎಸ್‌ ಸರ್ಕಾರ ರಚನೆಯಾದ ಕೂಡಲೇ ಈ ಭಾಗದ ಏತ ನೀರಾವರಿ ಸಹಿತ ಎಲ್ಲ ನೀರಾವರಿ ಯೋಜನೆಗಳಿಗೆ ತ್ವರಿತ ಚಾಲನೆ ನೀಡಿ ನಮ್ಮ ಹಳ್ಳಿಗೆ ನೀರು ಕೊಟ್ಟು ಜನರ ಕಷ್ಟ ಪರಿಹರಿಸಿ ಎಂದು ಕುಮಾರಸ್ವಾಮಿಗೆ ಮನವಿ ಮಾಡಿದರು. ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮಾತನಾಡಿ ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

Advertisement

ಪ್ರಮುಖರಾದ ಬಸನಗೌಡ ವಣಿಕ್ಯಾಳ, ರವಿ ಕಟ್ಟಿಮನಿ, ಸನಾ ಕೆಂಭಾವಿ, ಭೀಮಣ್ಣ ಗುರಿಕಾರ, ಸುಮಾ ಗಂಗನಗೌಡರ, ಲತಾ ಕಟ್ಟಿಮನಿ, ಸಿದ್ದಲಿಂಗಯ್ಯ ಕಪ್ಪರದ, ಸುಭಾಷ್‌ ಗಡ್ಡಿ, ಎಂ.ಎ. ಗಂಗನಗೌಡರ ವಕೀಲರು, ಅಮಜೇಸಾಬ ಮುಲ್ಲಾ, ಸೈಯ್ಯದ್‌ ಖಾಜಿ, ವಿಶ್ವನಾಥ ಡಿಗ್ಗಿ, ಕಾಂತಯ್ಯ ಹಿರೇಮಠ, ಖಾಜಾಅಮೀನ್‌ ಕಿತ್ತೂರ, ಹುಸೇನಬಾಸ ತೆಗ್ಗಿನಮನಿ, ದುರ್ಗಪ್ಪ ಲೊಟಗೇರಿ, ರಸೂಲ್‌ ದೇಸಾಯಿ, ಅರ್ಷದ್‌ ಮೋಮಿನ್‌, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಸಂಗಮ್ಮ ದೇವರಳ್ಳಿ, ಮನೋಹರ ತುಪ್ಪದ,
ಚನ್ನಪ್ಪ ಕಂಠಿ, ಸಂಗಪ್ಪ ಲಕ್ಷಟ್ಟಿ, ನಾನಾಗೌಡ ಬಿರಾದಾರ, ವೀರೇಶ ರಕ್ಕಸಗಿ, ರಫಿಕ ಕೊಡಗಲಿ, ಜಗದೀಶ ಕೆಂಭಾವಿ, ರಮೇಶ ಆಲಕೊಪ್ಪರ, ಹನುಮಂತ ಚಲವಾದಿ, ಬಸವಂತಪ್ಪ ವಾಲಿ, ಹನುಮಂತ ಹಟ್ಟಿ, ಅಲ್ಲಾಭಕ್ಷ ಕುಳಗೇರಿ ವೇದಿಕೆಯಲ್ಲಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಕುಮಾರಸ್ವಾಮಿ, ಶಾಸಕ ನಡಹಳ್ಳಿ ಅವರು ವೀರೇಶ್ವರ ಕಾಲೇಜು ಆವರಣದಲ್ಲಿರುವ ದಿ| ಜೆ.ಎಸ್‌.
ದೇಶಮುಖರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಶರಣ ವೀರೇಶ್ವರ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಾರ್ಗಮಧ್ಯೆ ಬರುವ ವಿವಿಧ ವೃತ್ತಗಳಿಗೆ ಮಾಲಾರ್ಪಣೆ ಮಡಿದರು. ಕಾರ್ಯಕ್ರಮ ಸ್ಥಳದವರೆಗೆ ಡೊಳ್ಳು, ಪೂರ್ಣಕುಂಭ ಸಹಿತ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next