Advertisement

ಇತಿಹಾಸ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಿ

12:11 PM Mar 27, 2022 | Team Udayavani |

ಧಾರವಾಡ: ಇತಿಹಾಸ ಸಂಶೋಧನೆಯಲ್ಲಿ ಯುವ ಜನತೆ ತೊಡಗಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ವಿದ್ಯಾಗಿರಿಯಲ್ಲಿ ಜೆಎಸ್ಸೆಸ್‌ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯು ಕರ್ನಾಟಕ ಇತಿಹಾಸ ಪರಿಷತ್ತು ಮತ್ತು ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕರ್ನಾಟಕ ಇತಿಹಾಸ ಪರಿಷತ್ತಿನ 31ನೇ ಮಹಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ವಿಷಯಕ್ಕೆ ಒತ್ತು ಕೊಡುವ ಮನಸ್ಥಿತಿ ಇಂದು ಪಾಲಕರಲ್ಲಿದೆ. ಇತಿಹಾಸದ ಪುನರ್‌ ಸ್ಮರಣೆ ಆಗಬೇಕು. ಅಂದಾಗ ಮಾತ್ರ ದೇಶದ, ರಾಜ್ಯದ ಸಂಸ್ಕೃತಿ ಪರಂಪರೆ ಬಗ್ಗೆ ತಿಳಿಯಲು ಮತ್ತು ಅವುಗಳನ್ನು ಉಳಿಸಿ ಬೆಳೆಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ| ಎಂ. ಜಮುನಾ ಮಾತನಾಡಿ, ತಳ ಸಮುದಾಯ ಹಾಗೂ ದೇವದಾಸಿ ಪದ್ಧತಿ ಸಮಸ್ಯೆಗಳ ಕುರಿತಾದ ಅಧ್ಯಯನ ಆಗಬೇಕು. ಮಹಿಳೆಯರ ಸಾಧನೆ ಹಾಗೂ ಈ ದೇಶಕ್ಕೆ ನೀಡಿದ ಕೊಡುಗೆ ಬಗ್ಗೆ ರಾಜಮಹಾರಾಜರ ಕಾಲದಿಂದ ಇಂದಿನವರೆಗೆ ಅಧ್ಯಯನ ನಡೆಯಬೇಕು ಎಂದು ಹೇಳಿದರು.

ಪ್ರೊಸಿಡಿಂಗ್ಸ್‌ ಸಂಪುಟ ಸಂಪಾದಕ ಡಾ|ಆರ್‌. ಎಂ. ಷಡಕ್ಷರಯ್ಯ ಮಾತನಾಡಿ, ನೂರ ಐವತ್ತಕ್ಕೂ ಹೆಚ್ಚು ಲೇಖನಗಳನ್ನು ಒಳಗೊಂಡ ಪುಸ್ತಕ ಇದಾಗಿದೆ. ಯುವ ಬರಹಗಾರರ ಲೇಖನಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗಿದೆ ಎಂದರು.

Advertisement

ಇದೇ ಸಂದರ್ಭದಲ್ಲಿ ಡಾ| ಶ. ಶೆಟ್ಟರ ಅವರು ಸಂಪಾದಿಸಿದ ಮೊದಲನೇ ಸಹಸ್ರಮಾನದ ಕನ್ನಡ ಶಾಸನಗಳು 8 ಸಂಪುಟ ಬಿಡುಗಡೆ ಮಾಡಿದರು. ಡಾ|ಎನ್‌. ರಾಜಶೇಖರ್‌ ಕರ್ನಾಟಕ ಇತಿಹಾಸ ಪರಿಷತ್ತಿನ ಲಾಂಛನ ಬಿಡುಗಡೆಗೊಳಿಸಿದರು. ಇತಿಹಾಸ ಸಂಶೋಧಕ ಡಾ| ಆರ್‌. ರಾಜಣ್ಣ ಪ್ರಾಸ್ತಾವಿಕ ಮಾತನಾಡಿದರು. ಡಾ|ಐ.ಕೆ. ಪತ್ತಾರ ಕರ್ನಾಟಕ ಇತಿಹಾಸ ಪರಿಷತ್ತಿನ ವರದಿ ವಾಚಿಸಿದರು. ಡಾ|ಎಂ.ಕೊಟ್ರೇಶ್‌, ಮಂಜುಳಾ ಎಲಿಗಾರ ಮಾತನಾಡಿದರು.

ಬೆಳಗಾವಿ ಜಿಲ್ಲೆಯ ಜೈನ ಧರ್ಮದ ಇತಿಹಾಸ ಮತ್ತು ಪುರಾತತ್ವ ಗ್ರಂಥವನ್ನು ಮಹಾವೀರ ಪಡ್ನಾಡ ಬಿಡುಗಡೆಗೊಳಿಸಿದರು. ಜೆಎಸ್ಸೆಸ್‌ ವಿತ್ತಾಧಿಕಾರಿ ಡಾ|ಅಜಿತ ಪ್ರಸಾದ ಅವರು ಆದಿತ್ಯ. ಆರ್‌. ಹೆಗಡೆ ಅವರಿಗೆ ಕುಂದಣ ಪ್ರಶಸ್ತಿ ಪ್ರದಾನ ಮಾಡಿದರು.

ಡಾ| ವಾಸುದೇವ ಬಡಿಗೇರ, ಡಾ| ಎನ್‌.ವಿ. ಅಸ್ಕಿ, ಡಾ| ವಿರೂಪಾಕ್ಷಿ ಪೂಜಾರಹಳ್ಳಿ, ಡಾ| ಎಸ್‌. ನಾಗರತ್ನ, ಡಾ| ದೇಸಾಯಿ ಎಚ್‌.ಆರ್‌, ಡಾ| ಆರ್‌.ವಿ. ಚಿಟಗುಪ್ಪಿ, ಡಾ| ಅಶೋಕ ಶೆಟ್ಟರ, ಡಾ| ಜೆ.ಎಂ ನಾಗಯ್ಯ, ಮಹಾವೀರ ಉಪಾದ್ಯೆ, ಡಾ| ಸಂಗಯ್ಯ ಶಿವಪ್ಪಯ್ಯನಮಠ, ಜಿನೇಂದ್ರ ಕುಂದಗೋಳ ಇದ್ದರು.

ದೀಪಾ ಪ್ರಾರ್ಥಿಸಿದರು. ಡಾ| ವಿಷ್ಣುವರ್ಧನ್‌ ಸ್ವಾಗತಿಸಿದರು. ಡಾ|ಜಿನದತ್ತ ಹಡಗಲಿ ನಿರೂಪಿಸಿದರು. ಡಾ| ಭರಮಪ್ಪ ಬಾವಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next