Advertisement
ಈತನ ಹೆಸರು ಟ್ರೆವರ್ ಹೂಟನ್ (30) ವೃತ್ತಿಪರ ಅಪ್ಪುಗೆ ಥೆರಫಿಯಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಈತನಿಗೆ ಗ್ರಾಹಕರನ್ನು ತಬ್ಬಿಕೊಂಡು ಮುದ್ದು ಮಾಡುವುಷ್ಟೇ ಕೆಲಸ. ಜನರು ಸುರಕ್ಷಿತವಾಗಿ ಮತ್ತು ಶಾಂತವಾಗಿರಲು ಸಹಾಯ ಮಾಡುವ ಒಂದು ಗಂಟೆ ಅವಧಿಯ ಅಪ್ಪುಗೆಗಾಗಿ 7,000 ರೂಪಾಯಿಗಳನ್ನು ಪಾವತಿಸಲು ಅವರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅವರು ತಮ್ಮ ವ್ಯಾಪಾರದ ಎಂಬ್ರೇಸ್ ಕನೆಕ್ಷನ್ ಮೂಲಕ “ಅಪ್ಪುಗೆ ಥೆರಪಿ” ಅನ್ನು ನೀಡುತ್ತಾರೆ.
Related Articles
Advertisement
“ಮಾನವ ಸಂಪರ್ಕಗಳನ್ನು ನಿರ್ಮಿಸುವ ನನ್ನ ಉತ್ಸಾಹದ ಆಧಾರದ ಮೇಲೆ ನಾನು ವ್ಯವಹಾರವನ್ನು ಮಾಡುತ್ತಿದ್ದೇನೆ. ಅನೇಕ ಜನರು ಆಪ್ತ ಸಂಪರ್ಕಕ್ಕಾಗಿ ಹಾತೊರೆಯುತ್ತಾರೆ. ಅಲ್ಲಿ ನಾನು ಹೆಜ್ಜೆ ಹಾಕುತ್ತೇನೆ. ಇದು ಕೇವಲ ಮುದ್ದಾಡುವುದಕ್ಕಿಂತ ಹೆಚ್ಚಿನ ಭಾವನೆಯಾಗಿದೆ. ಇದು ಜನರಿಗೆ ಅಗತ್ಯವಿರುವ ಭಾವನೆಗಳನ್ನು ನೀಡುವ ಭಾಗವಾಗಿದೆಎಂದು ಹೂಟನ್ ಹೇಳುತ್ತಾರೆ.