Advertisement

ಹೊನ್ನಾವರ: ಗೇರುಸೊಪ್ಪಾದ ಗ್ರಾಮೀಣ ಪ್ರತಿಭೆ ರಾಜ್ಯಕ್ಕೆ ಫಸ್ಟ್

01:32 PM Aug 10, 2021 | Team Udayavani |

ಹೊನ್ನಾವರ: ಗ್ರಾಮೀಣ ಪ್ರದೇಶವಾದ ಗೇರುಸೊಪ್ಪಾ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ ಎಲ್‌ಸಿ ವಿದ್ಯಾರ್ಥಿನಿ ಭೂಮಿಕ ಕೃಷ್ಣ ನಾಯ್ಕ ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.

Advertisement

ಈ ಬಾರಿ ಕೋವಿಡ್ ಮಹಾಮಾರಿಯಿಂದ ಗೊಂದಲದ ಗೂಡಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಳೆದ ತಿಂಗಳು ನಡೆದಿತ್ತು. ಇದೀಗ ಫಲಿತಾಂಶ ಬಂದಿದ್ದು, ತಾಲೂಕಿನ ನಿವಾಸಿ ರಾಜ್ಯಮಟ್ಟದಲ್ಲಿ ಗುರುತಿಸುವಂತಹ ಸಾಧನೆ ಮಾಡಿದ್ದಾಳೆ. ಸರ್ಕಾರಿ ಪ್ರಾಥಮಿಕ ಶಾಲೆ ಮುಗಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಯನ ನಡೆಸಿ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.

ಗೌರಿ ಹಾಗೂ ಕೃಷ್ಣ ನಾಯ್ಕ ದಂಪತಿ ಮಗಳಾಗಿರುವ ಭೂಮಿಕ ಮುಂದಿನ ದಿನದಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ. ಉದಯವಾಣಿ ಪತ್ರಿಕೆಯೊಂದಿಗೆ ಮಾತನಾಡಿದ ಭೂಮಿಕಾ ನಾಯ್ಕ, ಮೂರು ತಿಂಗಳಿನಲ್ಲಿ ಶಿಕ್ಷಕರು ಬಹು ಮುಖ್ಯವಾದ ಮಾಹಿತಿ ನೀಡಿದ್ದರು. ಕೊರೊನಾ ಕಾರಣದಿಂದ ಗೂಗಲ್‌ ಮೀಟ್‌ ಮೂಲಕ ಪರೀಕ್ಷೆಗೆ ಎದುರಿಸಲು ಅಗತ್ಯವಿರುವ ಮಾಹಿತಿ ನೀಡಿದ್ದರು. ಆರಂಭದಲ್ಲಿ ಕೊರೊನಾದಿಂದ ಪರೀಕ್ಷೆ ಎದುರಿಸಲು ಭಯವಿತ್ತು. ಶಿಕ್ಷಣ ಸಚಿವರ ಸಮಯಕ್ಕನುಗುಣವಾಗಿ ಮಾಹಿತಿ, ತಂದೆ ತಾಯಿಯ ಸಹಕಾರ, ಶಾಲೆ ಗುರುಗಳ ಪೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ ಪರೀಕ್ಷೆ ಎದುರಿಸಿದ್ದೆ. ನನ್ನ ಫಲಿತಾಂಶ ಸಂತಸ ಮೂಡಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next