Advertisement

Belthangady ಗೇರುಕಟ್ಟೆ: ಅಂಗನವಾಡಿ ಜಾಗ ಅತಿಕ್ರಮಣ

11:38 PM Oct 10, 2023 | Team Udayavani |

ಬೆಳ್ತಂಗಡಿ: ಕಳಿಯ ಗ್ರಾ. ಪಂ. ವ್ಯಾಪ್ತಿಯ ಕಳಿಯ ಗ್ರಾಮದ ಎರುಕಡಪ್ಪು ಅಂಗನವಾಡಿಗೆ ಸಂಬಂಧಿಸಿದಂತೆ ಮೀಸಲಾಗಿದ್ದ ಜಾಗವನ್ನು ಸ್ಥಳೀಯರೊಬ್ಬರು ಅತಿಕ್ರಮಣ ಮಾಡಿದ ಕುರಿತು ದೂರು ದಾಖಲಾಗಿದೆ.

Advertisement

ಎರುಕಡಪ್ಪು ಅಂಗನವಾಡಿಗೆ ಕಲ್ಕುರ್ಣಿ ಕಡೆಗೆ ಹೋಗುವ ಒಂದು ಬದಿಯಲ್ಲಿರುವ ಅಂಗನವಾಡಿಯ ಹೆಸರಿನಲ್ಲಿರುವ 0.30 ಸೆಂಟ್ಸ್‌ ಜಾಗದ ಒಂದು ಪಾರ್ಶ್ವದಲ್ಲಿ ಗಡಿ ಗುರುತು ಹಾಕಿದ್ದ ಜಾಗವನ್ನು ಜೆ.ಸಿ.ಬಿ.ಯಂತ್ರದ ಮೂಲಕ ಸ್ಥಳೀಯರೊಬ್ಬರು ಅತಿಕ್ರಮಿಸಿ ಸಮತಟ್ಟು ಮಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಮತ್ತು ಅಂಗನವಾಡಿ ಬಾಲ ವಿಕಾಸ ಸಮಿತಿ ವತಿಯಿಂದ ಆಕ್ಷೇಪ ವ್ಯಕ್ತಪಡಿಸಿ ಈ ಹಿಂದಿನಿಂದಲೂ ದಾಖಲೆ ಇದ್ದ ಈ ಜಾಗವನ್ನು ಅತಿಕ್ರಮಣಗೊಳಿಸಿದ ಬಗ್ಗೆ ವಿರೋಧ ವ್ಯಕ್ತಪಡಿಸಿ ತಹಶೀಲ್ದಾರರಿಗೆ ಮತ್ತು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ತಹಶೀಲ್ದಾರರು ದೂರನ್ನು ಪರಿಶೀಲಿಸಿ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next