ಬರ್ಲಿನ್: ಜರ್ಮನ್‌ನ ನೂತನ ಚಾನ್ಸೆಲರ್ ಆಗಿ ಸೋಶಿಯಲ್ ಡೆಮಾಕ್ರಾಟ್ಸ್ ಪಕ್ಷದ ಒಲಾಫ್ ಶೋಲ್ಜ್ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಂಸತ್ತಿನಲ್ಲಿ ನಡೆದ ಚಾನ್ಸೆಲರ್ ಆಯ್ಕೆ ಮತದಾನದಲ್ಲಿ ಒಲಾಫ್ ಅತೀ ಹೆಚ್ಚು ಮತ ಪಡೆದು, ಚಾನ್ಸೆಲರ್ ಆಗಿ ಆಯ್ಕೆಯಾದರು.
ಸೋಶಿಯಲ್ ಡೆಮಾಕ್ರಾಟ್ಸ್ ಪಕ್ಷದ ಜೊತೆ ಗ್ರೀನ್ಸ್ ಮತ್ತು ಬಿಸಿನೆಸ್ ಫ್ರೆಂಡ್ಲಿ ಫ್ರೀ ಡೆಮಾಕ್ರಾಟ್ಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಮೂರೂ ಪಕ್ಷಗಳ ಸಂಸದರು ಒಲಾಫ್ ಪರವಾಗಿ ಮತದಾನ ಮಾಡಿದ್ದಾರೆ.
ಇದನ್ನೂ ಓದಿ:ಪ್ರಧಾನಮಂತ್ರಿ ಆವಾಜ್ ಯೋಜನೆ : ಗ್ರಾಮೀಣ 3 ವರ್ಷಗಳಿಗೆ ವಿಸ್ತರಣೆ
ಒಲಾಫ್ ಅವರ ಸರಕಾರದ 16 ಸಚಿವರು ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೇ ಮೊದಲನೇ ಬಾರಿಗೆ ಜರ್ಮನ್ ಸರಕಾರದಲ್ಲಿ ಲಿಂಗ ಸಮಾನತೆ ನೀಡಲಾಗಿದೆ.