Advertisement

Hamas ಉಗ್ರರಿಂದ ಜರ್ಮನ್‌ ಯುವತಿಯ ಬೆತ್ತಲೆ ಮೆರವಣಿಗೆ.. “ನನ್ನ ಮಗಳು ಇನ್ನೂ ಬದುಕಿದ್ದಾಳೆ”

10:08 AM Oct 11, 2023 | Team Udayavani |

ನವದೆಹಲಿ: ಇಸ್ರೇಲ್‌ ನಲ್ಲಿ ನಡೆಯುತ್ತಿದ್ದ ಮ್ಯೂಸಿಕ್‌ ಫೆಸ್ಟಿವೆಲ್‌ ನಿಂದ ಜರ್ಮನ್‌ ಮಹಿಳೆಯೊಬ್ಬರನ್ನು ಅಪಹರಿಸಿಕೊಂಡು ಬೆತ್ತಲೆ ಮಾಡಿ, ವಾಹನದಲ್ಲಿ ಮೆರವಣಿಗೆ ಮಾಡಿದ್ದ ವಿಡಿಯೋ ಕೆಲ ದಿನಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Advertisement

ಜರ್ಮನ್‌ ಮೂಲದ 22 ವರ್ಷದ ಶಾನಿ ಲೌಕ್ ಟ್ಯಾಟೂ ಕಲಾವಿದೆಯಾಗಿದ್ದು, ಇಸ್ರೇಲ್‌ ನಲ್ಲಿ ಮ್ಯೂಸಿಕ್‌ ಫೆಸ್ಟಿವೆಲ್‌ ನಲ್ಲಿ‌ ಭಾಗಿಯಾಗಿದ್ದರು. ಈ ವೇಳೆ ಹಮಾಸ್‌ ಉಗ್ರರು ಏಕಾಏಕಿ ದಾಳಿ ನಡೆಸಿ, ಅನೇಕರನ್ನು ಅಪಹರಿಸಿಕೊಂಡು ಹೋಗಿದ್ದರು. ಇದರಲ್ಲಿ ಶಾನಿ ಲೌಕ್ ಕೂಡ ಇದ್ದರು. ಶಾನಿ ಲೌಕ್ ಅವರ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಬೆತ್ತಲೆ ಮಾಡಿ, ಕೈಕಾಲು ಕಟ್ಟಿ ವಾಹನದಲ್ಲಿ ಮೆರವಣಿಗೆ ಮಾಡಿಕೊಂಡು ಹೋಗುತ್ತಿದ್ದ ಭೀಕರ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ವಿಡಿಯೋ ಕುರಿತು ಟ್ವಿಟರ್‌ ನಲ್ಲಿ ಶಾನಿ ಅವರ ತಾಯಿ ರಿಕಾರ್ಡಾ ಲೌಕ್ ಅವರು ತನ್ನ ಮಗಳ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ಅವರ ಇರುವಿಕೆ ಬಗ್ಗೆ ಹೇಳಲು ಮನವಿ ಮಾಡಿದ್ದರು. ಶಾನಿ ಮೃತಪಟ್ಟಿದ್ದಾರೆ ಎಂದು ಕೆಲ ವರದಿಗಳು ತಿಳಿಸಿತ್ತು.

ಇದೀಗ ತನ್ನ ಮಗಳು ಜೀವಂತವಾಗಿದ್ದಾಳೆ ಎಂದು ರಿಕಾರ್ಡಾ ಲೌಕ್ ಸಂದರ್ಶನವೊಂದರಲ್ಲಿ ಹೇಳಿರುವುದಾಗಿ ಜರ್ಮನ್‌ ನ್ಯೂಸ್‌ ಔಟ್ಲೆಟ್ ಡೆರ್ ಸ್ಪೀಗೆಲ್ ವರದಿ ಮಾಡಿದೆ.

ಗಾಜಾ ಪಟ್ಟಿಯಲ್ಲಿರುವ ಹಮಾಸ್ ಆಸ್ಪತ್ರೆಯಲ್ಲಿ ತನ್ನ ಮಗಳು ಜೀವಂತವಾಗಿದ್ದಾಳೆ ಎಂದು ಪ್ಯಾಲೆಸ್ತೀನ್‌ ಮೂಲಗಳಿಂದ ಮಾಹಿತಿ ಪಡೆದಿರುವುದಾಗಿ ಅವರು ಹೇಳಿದ್ದಾರೆ.

Advertisement

“ಶಾನಿ ಜೀವಂತವಾಗಿದ್ದಾಳೆ ಆದರೆ ಅವಳ ತಲೆಗೆ ಗಂಭೀರ ಗಾಯವಾಗಿದೆ. ಅವಳು ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಪ್ರತಿ ನಿಮಿಷ ಅವಳ ಆರೋಗ್ಯದ ವಿಚಾರದಲ್ಲಿ ಮುಖ್ಯ. ದಯವಿಟ್ಟು ಜರ್ಮನ್‌  ಸರ್ಕಾರ ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಮನವಿ ಮಾಡುತ್ತೇನೆ. ಶಾನಿಯನ್ನು ಶೀಘ್ರವಾಗಿ ಗಾಜಾಪಟ್ಟಿಯಿಂದ ಹೊರತರಬೇಕು. ದಯವಿಟ್ಟು ನನ್ನ ಮಗಳನ್ನು ಸುರಕ್ಷಿತವಾಗಿ ಮನೆಗೆ ಕರೆ ತನ್ನಿ”ಎಂದು ಅವರು ಹೇಳಿದ್ದಾರೆ.

ಶಾನಿ ಅವರನ್ನು ಅಪಹರಿಸಿ ಆಕೆಯ ಕ್ರೆಡಿಟ್‌ ಕಾರ್ಡ್‌ ನ್ನು ಬಳಸಲಾಗಿದೆ ಎಂದು ಇತ್ತೀಚೆಗೆ ಆಕೆಯ ಕುಟುಂಬ ಹೇಳಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next