Advertisement

ಚೀನ ತೊರೆದು ಆಗ್ರಾಕ್ಕೆ ಕಾಲಿಟ್ಟ ಶೂ ಕಂಪೆ‌ನಿ!

07:48 PM May 21, 2020 | Hari Prasad |

ಲಕ್ನೋ (ಉತ್ತರಪ್ರದೇಶ): ಕೋವಿಡ್ ಸೋಂಕು ಚೀನದಲ್ಲಿ ಹುಟ್ಟಿಕೊಂಡು, ವಿಶ್ವವನ್ನೇ ಕಾಡಲು ಆರಂಭಿಸಿದ ಅನಂತರ ಅಲ್ಲಿಂದ ಹಲವು ಬೃಹತ್‌ ಉದ್ಯಮಗಳು ಹೊರ ನಡೆಯಲು ಚಿಂತನೆ ನಡೆಸಿವೆ.

Advertisement

ಈ ರೀತಿಯಾಗಿ ಡ್ರ್ಯಾಗನ್ ನಾಡನ್ನು ತೊರೆದು ಬೇರೆ ಕಡೆಗೆ ವಲಸೆ ಹೋಗುತ್ತಿರುವ ಕಂಪೆನಿಗಳನ್ನು ಸೆಳೆಯಲು ಭಾರತ ದೊಡ್ಡ ಮಟ್ಟದಲ್ಲೇ ಯತ್ನ ನಡೆಸುತ್ತಿದೆ.

ಆ ಯತ್ನಕ್ಕೆ ಮೊದಲ ಯಶಸ್ಸು ಸಿಕ್ಕಿದೆ. ಚೀನದಲ್ಲಿ ಇದುವರೆಗೆ ವರ್ಷಕ್ಕೆ 30 ಲಕ್ಷ ಶೂ ಮಾರಾಟ ನಡೆಸುತ್ತಿದ್ದ ವಾನ್‌ ವೆಲ್ಸ್‌ ಕಂಪೆನಿಯ ಸಂಪೂರ್ಣ ಯೂನಿಟ್ ಉತ್ತರಪ್ರದೇಶದ ಆಗ್ರಾಕ್ಕೆ ಸ್ಥಳಾಂತರಗೊಳ್ಳಲಿದೆ.

ಅಷ್ಟು ಮಾತ್ರವಲ್ಲದೇ, ಮೂಲಗಳ ಪ್ರಕಾರ ಇನ್ನೆರಡು ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಿದೆ. ಪ್ರಾರಂಭದಲ್ಲಿ ಈ ಕಂಪೆನಿ ಭಾರತದಲ್ಲಿ 110 ಕೋಟಿ ರೂ. ಆರಂಭಿಕ ಹೂಡಿಕೆ ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next