ಓಲ್ಡನ್‌ಬರ್ಗ್, ಜರ್ಮನಿ : ದೇಶದ ಸಮರೋತ್ತರ ಇತಿಹಾಸಲ್ಲೇ ಅತ್ಯಂತ ವ್ಯವಸ್ಥಿತವಾಗಿ ಸರಣಿ ಹತ್ಯೆ ನಡೆಸಿರುವ 42 ವರ್ಷದ ಪುರುಷ ದಾದಿ, ನೀಲ್ಸ್ ಹೆಗೆಲ್ ಗೆ ಜರ್ಮನಿಯ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ನೀಡಿದೆ.
ಪೊಲೀಸರು ಶಂಕಿಸಿರುವ ಪ್ರಕಾರ ಹೆಗೆಲ್ 200ಕ್ಕೂ ಅಧಿಕ ರೋಗಿಗಳಿಗೆ ಮಾರಣಾಂತಿಕ ಚುಚ್ಚು ಮದ್ದು ನೀಡಿ ಕೊಂದಿದ್ದಾನೆ.
2000-2005 ರ ನಡುವಿನ ಅವಧಿಯಲ್ಲಿ ಹೆಗೆಲ್ ಬೇಕಾಬಿಟ್ಟಿ ರೋಗಿಗಳನ್ನು ಆಯ್ದುಕೊಂಡು ಅವರಿಗೆ ಮಾರಣಾಂತಿಕ ಇಂಜೆಕ್ಷನ್ ನೀಡುವ ಮೂಲಕ 85ಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದಾನೆ ಎಂದು ಪ್ರಾಸಿಕ್ಯೂಶನ್ ಹೇಳಿತು.
ಹೆಗೆಲ್ ಈ ಹಿಂದೆ ನಡೆಸಿದ ಆರು ಪ್ರತ್ಯೇಕ ಕೊಲೆಗಳಿಗೆ ಸಂಬಂಧಿಸಿ ಪಡೆದಿರುವ ಜೀವಾವಧಿ ಜೈಲು ಶಿಕ್ಷೆಯ ಭಾಗವಾಗಿ ಹತ್ತು ವರ್ಷಗಳ ಸೆರೆಮನೆ ವಾಸವನ್ನು ಈಗಾಗಲೇ ಕಳೆದಿದ್ದಾನೆ.
ಈ ಸರಣಿ ಹಂತಕನ ವಿರುದ್ಧ ಪ್ರಾಸಿಕ್ಯೂಶನ್ ಕೇಸ್‌ಗಾಗಿ 130ಕ್ಕೂ ಹೆಚ್ಚು ಶವಗಳನ್ನು ಗೋರಿಯಿಂದ ಹೊರ ತೆಗೆದು ಅಟಾಪ್ಸಿ ನಡೆಸುವುದು ಅನಿವಾರ್ಯವಾಗಿತ್ತು.