Advertisement

ಲಾಕ್ ಡೌನ್ ಸಂಕಷ್ಟ: 55 ದಿನ ಏರ್‌ಪೋರ್ಟ್‌ನಲ್ಲಿದ್ದ ಜರ್ಮನ್‌ ಪ್ರಜೆ ಕೊನೆಗೂ ಊರಿಗೆ ಹೊರಟ!

08:53 PM May 14, 2020 | Hari Prasad |

ಬರೋಬ್ಬರಿ 55 ದಿನಗಳ ಕಾಲ ದೆಹಲಿ ಏರ್‌ಪೋರ್ಟ್‌ನಲ್ಲೇ ಲಾಕ್‌ಡೌನ್‌ ಆಗಿದ್ದ ಜರ್ಮನ್‌ ಪ್ರಜೆಯನ್ನು ಕೇಂದ್ರ ಸರ್ಕಾರ ಕೊನೆಗೂ ಆ್ಯಮ್‌ಸ್ಟರ್‌ಡ್ಯಾಂಗೆ  ಕಳುಹಿಸಿಕೊಟ್ಟಿದೆ.

Advertisement

ಎಡ್ಗರ್ಡ್‌ ಝೀಬ್ಯಾಟ್‌ ಎಂಬಾತ ಮಾರ್ಚ್‌ 18ರಂದು ವಿಯೇಟ್ನಾಂನಿಂದ ಸಂಪರ್ಕಿತ ಏರ್‌ಟಿಕೆಟ್‌ ಪಡೆದು, ನವದೆಹಲಿ- ಇಸ್ತಾಂಬುಲ್‌ ಮಾರ್ಗವಾಗಿ ಜರ್ಮನಿ ತಲುಪಬೇಕಿತ್ತು. ಆದರೆ, ಅಷ್ಟರಲ್ಲಾಗಲೇ ಭಾರತ ಎಲ್ಲ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ ಹೇರಿತ್ತು.

ದೆಹಲಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಝೀಬ್ಯಾಟ್‌, ಇಲ್ಲಿನ ಜರ್ಮನಿ ರಾಯಭಾರ ಕಚೇರಿಗೆ ಹೋದರಾರೂ, ವಿಮಾನಯಾನಕ್ಕೆ ಅನುಮತಿ ಸಿಗಲಿಲ್ಲ. ಇತ್ತೀಚೆಗೆ ಇಸ್ತಾಂಬುಲ್‌ ಕಡೆಗೆ ಹೊರಟಿದ್ದ ವಿಶೇಷ ವಿಮಾನವು, ಈತನ ಬಳಿ ಟರ್ಕಿ ಪಾಸ್‌ಪೋರ್ಟ್‌ ಇಲ್ಲದ ಕಾರಣ ಹತ್ತಿಸಿಕೊಳ್ಳಲು ನಿರಾಕರಿಸಿತ್ತು.

ಇಷ್ಟು ದಿನ ದೆಹಲಿಯ ಏರ್‌ಪೋರ್ಟ್‌ನಲ್ಲೇ ಆಹಾರ, ಬಟ್ಟೆ, ಆಶ್ರಯ ಪಡೆದಿದ್ದ ಝೀಬ್ಯಾಟ್‌, ಮಂಗಳವಾರ ಕೆಎಲ್‌ಎಂ ವಿಮಾನ ಏರಿ ಜರ್ಮನಿ ತಲುಪಿದ್ದಾರೆ.

ಮುತ್ತಿನ ನಗರಿಗೆ 331 ಭಾರತೀಯರು

Advertisement

ಬೋಯಿಂಗ್‌- 773 ವಿಮಾನವು ಇಂಗ್ಲೆಂಡಿನಲ್ಲಿ ಅತಂತ್ರರಾಗಿದ್ದ 331 ಭಾರತೀಯ ಪ್ರಜೆಗಳನ್ನು ಮಂಗಳವಾರ ಹೈದರಾಬಾದ್‌ಗೆ ಸುರಕ್ಷಿತವಾಗಿ ಮುಟ್ಟಿಸಿದೆ.

ಮುತ್ತಿನ ನಗರಿಯ ವಿಮಾನ ನಿಲ್ದಾಣದಲ್ಲಿ ಪ್ರತಿ ಪ್ರಯಾಣಿಕರನ್ನೂ ಥರ್ಮಲ್‌ ಕ್ಯಾಮೆರಾಗಳ ಮೂಲಕ ಸ್ಕ್ರೀನಿಂಗ್‌ ನಡೆಸಲಾಗಿದೆ.

20-25 ಮಂದಿಯ ತಂಡ ರಚಿಸಿ, ನಿಗದಿತ ಕ್ವಾರಂಟೈನ್‌ ಸ್ಥಳಕ್ಕೆ ತಲುಪಿಸಲಾಗಿದೆ. ಬಳಿಕ, ಇದೇ ಬೋಯಿಂಗ್‌ ವಿಮಾನ 87 ಪ್ರಯಾಣಿಕರನ್ನು ಹೊತ್ತು ದೆಹಲಿ ಮೂಲಕ, ಅಮೆರಿಕಕ್ಕೆ ಹಾರಿದೆ.

Advertisement

Udayavani is now on Telegram. Click here to join our channel and stay updated with the latest news.

Next