Advertisement

800 ವಿಮಾನಗಳನ್ನು ರದ್ದುಗೊಳಿಸಿದ ಜರ್ಮನ್ ವಿಮಾನಯಾನ ಸಂಸ್ಥೆ ಲುಫ್ಥಾನ್ಸಾ

01:16 PM Sep 02, 2022 | Team Udayavani |

ಬರ್ಲಿನ್ : ಪೈಲಟ್‌ಗಳು ಮುಷ್ಕರ ನಡೆಸುತ್ತಿರುವ ಕಾರಣ ಜರ್ಮನ್ ವಿಮಾನಯಾನ ಸಂಸ್ಥೆ ಲುಫ್ಥಾನ್ಸಾ ಶುಕ್ರವಾರ 800 ವಿಮಾನಗಳನ್ನು ರದ್ದುಗೊಳಿಸಿದೆ.

Advertisement

ಪೈಲಟ್‌ಗಳ ಒಕ್ಕೂಟವು ಒಂದು ದಿನದ ಮುಷ್ಕರವನ್ನು ಘೋಷಿಸಿದ ನಂತರ 130,000 ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ

ಫ್ರಾಂಕ್‌ಫರ್ಟ್ ಮತ್ತು ಮ್ಯೂನಿಚ್‌ಗೆ ತೆರಳುವ 2 ಲುಫ್ಥಾನ್ಸಾ ವಿಮಾನಗಳನ್ನು ರದ್ದುಗೊಳಿಸಿದ್ದರಿಂದ  ದೆಹಲಿ ಐಜಿಐ ವಿಮಾನ ನಿಲ್ದಾಣದ ಮುಂಭಾಗದ ಮುಖ್ಯ ರಸ್ತೆಯಲ್ಲಿ150 ಜನರು ಬೆಳಗ್ಗೆ 12 ಗಂಟೆಯ ಸುಮಾರಿಗೆ ನಿರ್ಗಮನ ಗೇಟ್ ನಂ.1, ಟರ್ಮಿನಲ್ 3 ರಲ್ಲಿ ಜಮಾಯಿಸಿ, ಹಣವನ್ನು ಮರುಪಾವತಿಸಲು ಅಥವಾ ಅವರ ಸಂಬಂಧಿಕರಿಗೆ ಪರ್ಯಾಯ ವಿಮಾನಗಳನ್ನು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.

ಜನಜಂಗುಳಿಯಿಂದ ವಾಹನ ಸಂಚಾರ ನಿಧಾನವಾಗಿದ್ದು, ಸಿಐಎಸ್ಎಫ್ ಜೊತೆಗೆ ಐಜಿಐ ವಿಮಾನ ನಿಲ್ದಾಣದ ಸಿಬಂದಿ ಪರಿಸ್ಥಿತಿಯನ್ನು ನಿಭಾಯಿಸಿದರು ಮತ್ತು ಗುಂಪನ್ನು ಚದುರಿಸಿದರು. ವಿಮಾನಯಾನ ಸಂಸ್ಥೆಗಳಿಂದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಐಜಿಐ ವಿಮಾನ ನಿಲ್ದಾಣ ಡಿಸಿಪಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next