Advertisement
ಉತ್ತಮ ಆದಾಯಜೆರಾಲ್ಡ್ ಅವರು ಒಟ್ಟು 4 ಎಕರೆ ಪ್ರದೇಶದಲ್ಲಿ ಅಡಿಕೆ, ತೆಂಗು, ಬಾಳೆ ಬೆಳೆದಿದ್ದಾರೆ. ಮನೆಯ ಮುಂಭಾಗದ 40 ಸೆಂಟ್ಸ್ ಪ್ರದೇಶದಲ್ಲಿ ಹೀರೆಕಾಯಿ, ಸೌತೆಕಾಯಿ, ಮುಳ್ಳು ಸೌತೆ ಹೀಗೆ ವರ್ಷಪೂರ್ತಿ ತರಕಾರಿ ಬೆಳೆಸುತ್ತಾರೆ. ಸ್ವತಃ ದುಡಿಯುವುದರಿಂದ ಕೂಲಿ ಖರ್ಚು ಕಡಿಮೆಯಾಗುತ್ತದೆ. ತರಕಾರಿ ಕೃಷಿಯಲ್ಲಿ ವಾರ್ಷಿಕ ಸರಾಸರಿ 1ರಿಂದ 1.50 ಲಕ್ಷ ರೂ. ನಿವ್ವಳ ಆದಾಯ ಪಡೆದಿದ್ದಾರೆ.
ಸಾವಯವ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡುವುದರಿಂದ ಆರೋಗ್ಯಯುತ ತರಕಾರಿ ಲಭಿಸುತ್ತಿದ್ದು, ತರಕಾರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಜೆರಾಲ್ಡ್ ಲೋಬೋ ಅವರ ಪತ್ನಿ ಲೀಡಿಯಾ ಡಿ’ಸೋಜಾ ಅವರು ತರಕಾರಿ ಬೆಳೆಗಳಿಗೆ ನೀರು ನಿರ್ವಹಣೆ, ಗೊಬ್ಬರ ನೀಡುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಾರೆ. 17 ವರ್ಷಗಳಿಂದ ಕೃಷಿ
ಜೆರಾಲ್ಡ್ ಲೋಬೋ ಅವರು 17 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡವರು. ಪ್ರಾರಂಭದಲ್ಲಿ 20 ಸೆಂಟ್ಸ್ ಪ್ರದೇಶದಲ್ಲಿ ಮಲ್ಲಿಗೆ ಕೃಷಿ ಆರಂಭಿಸಿ ಯಶಸ್ಸು ಗಳಿಸಿದರು. ಕೃಷಿ ಇಲಾಖೆಯ ಕೃಷಿಕರ ತರಬೇತಿಗಳಲ್ಲಿ ಭಾಗವಹಿಸಿ ಮಾಹಿತಿ ಪಡೆದು ವೈವಿಧ್ಯಮಯ ಕೃಷಿ ಆರಂಭಿಸಿದರು. ಕೃಷಿ ಕ್ಷೇತ್ರದ ಮಾಹಿತಿಯನ್ನು ಕೃಷಿ ಸಂಬಂಧಿತ ಪತ್ರಿಕೆ, ಪುಸ್ತಕ ಓದಿ, ಟೀವಿ ಕಾರ್ಯಕ್ರಮಗಳನ್ನು ನೋಡಿ ತಿಳಿದುಕೊಂಡು, ಅಳವಡಿಸುತ್ತೇನೆ ಎನ್ನುತ್ತಾರೆ ಕೃಷಿಕ ಜೆರಾಲ್ಡ್ ಲೋಬೋ.
Related Articles
ತ್ತಾರೆ. ಕೀಟ ಬಾಧೆ ನಿರ್ವಹಣೆಗೆ ಟ್ಯಾಪ್ ಅಳವಡಿಸುತ್ತಾರೆ. ಎರೆಹುಳು ಗೊಬ್ಬರ ತಯಾರಿಕೆ ಘಟಕವೂ ಇದೆ. ಅದರಿಂದ ತಯಾರಾದ ಗೊಬ್ಬರವನ್ನೇ ಕೃಷಿಗೆ ಬಳಸುತ್ತಾರೆ. ನೀರಿಗೆ ಕೊಳವೆ ಬಾವಿಯ ವ್ಯವಸ್ಥೆಯಿದೆ. ಕೆಲವೊಂದು ಕಡೆಗಳಲ್ಲಿ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿಯಿದೆ.
Advertisement
ವಾರದಲ್ಲಿ ಮೂರು ಬಾರಿ ಮಾರಾಟಪ್ರತೀ ವಾರದಲ್ಲಿ ಮೂರು ಬಾರಿ ವಾಹನದಲ್ಲಿ ಸಾಗಿಸಿ ಬಿ.ಸಿ. ರೋಡ್ ಮಾರುಕಟ್ಟೆಗೆ ಪೂರೈಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಮಾರುಕಟ್ಟೆಯಲ್ಲಿ ತರಕಾರಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಶುಭ ಸಮಾರಂಭಕ್ಕೂ ಇವರು ಬೆಳೆದ ತರಕಾರಿಯೇ ಬೇಕು. ಸಾವಯವ ಕೃಷಿ ಪದ್ಧತಿಯಲ್ಲಿನ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ, ಬೆಲೆಯಿದೆ. ಸ್ಥಳೀಯವಾಗಿಯೇ ಸಿಗುವ ಹೀರೆಕಾಯಿ, ಸೌತೆಕಾಯಿ, ಮುಳ್ಳು ಸೌತೆ ಇತ್ಯಾದಿ ತರಕಾರಿ ಖರೀದಿಸಲು ಹೆಚ್ಚಿನ ಗ್ರಾಹಕರು ಬರುತ್ತಾರೆ.
– ಜೆರಾಲ್ಡ್ ಲೋಬೋ, ಕೃಷಿಕರು