ಮುಂಬಯಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಏಕೈಕ ಸರಕಾರೇತರ ಸಂಸ್ಥೆಯಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಕೊಂಕಣಿ ರೈಲ್ವೆಯ ರೂವಾರಿ, ಮಾಜಿ ರಕ್ಷಣ ಸಚಿವ ‘ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣ ರಾಷ್ಟ್ರೀಯ ಪುರಸ್ಕಾರ-2019’ ಪ್ರಧಾನ ಸಮಾರಂಭವು ಜೂ. 3 ರಂದು ಸಂಜೆ 7 ರಿಂದ ಕುರ್ಲಾ ಪೂರ್ವದ ಬಂಟರ ಭವನ ಸಂಕುಲದ ಎನೆಕ್ಸ್ ಹಾಲ್‌ನಲ್ಲಿ ಅದ್ದೂರಿಯಾಗಿ ಜರಗಿತು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಮತ್ತು ಅಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹಣಕಾಸು ರಾಜ್ಯ ಸಚಿವ ದೀಪಕ್ ಕೇಸರ್ಕರ್ ಮತ್ತು ಗೌರವ ಅತಿಥಿಯಾಗಿ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಇವರು ಆಗಮಿಸಿ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭಹಾರೈಸಿದರು.
ಸಮಾರಂಭದಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರ 89 ನೇ ಹುಟ್ಟುಹಬ್ಬದ ನಿಮಿತ್ತ ಮಣಿಪಾಲ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಪದ್ಮಭೂಷಣ ಡಾ| ಬಿ. ಎಂ. ಹೆಗ್ಡೆ ಇವರಿಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಚೊಚ್ಚಲ ವಾರ್ಷಿಕ ‘ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣ ರಾಷ್ಟ್ರೀಯ ಪುರಸ್ಕಾರ-2019’ ವನ್ನು ಗಣ್ಯರ ಉಪಸ್ಥಿತಿಯಲ್ಲಿ ಪ್ರಧಾನಿಸಿ ಗೌರವಿಸಲಾಯಿತು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷರುಗಳಾದ ಎಲ್. ವಿ. ಅಮೀನ್, ಪಿ. ಧನಂಜಯ ಶೆಟ್ಟಿ, ನಿತ್ಯಾನಂದ ಡಿ. ಕೋಟ್ಯಾನ್, ಸಿಎ ಐ. ಆರ್. ಶೆಟ್ಟಿ, ಬಾಲಕೃಷ್ಣ ಭಂಡಾರಿ, ನ್ಯಾಯವಾದಿ ಮೊಹಿದ್ದೀನ್ ಮುಂಡ್ಕೂರು, ರಾಮಚಂದ್ರ ಗಾಣಿಗ, ಚಂದ್ರಶೇಖರ ಆರ್. ಬೆಳ್ಚಡ, ಜಿ. ಟಿ. ಆಚಾರ್ಯ, ಕೆ. ಎಲ್. ಬಂಗೇರ, ಆ್ಯಂಟೋನಿ ಸಿಕ್ವೇರಾ, ಜಗದೀಶ್ ಅಧಿಕಾರಿ, ರಾಮಚಂದ್ರ ಬೈಕಂಪಾಡಿ, ಫೆಲಿಕ್ಸ್ ಡಿಸೋಜಾ, ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್‌ದಾಸ್, ಗೌರವ ಕಾರ್ಯದರ್ಶಿಗಳಾದ ರವಿ ಎಸ್. ದೇವಾಡಿಗ, ಪ್ರೊ| ಶಂಕರ್, ಹ್ಯಾರಿ ಸಿಕ್ವೇರಾ, ಬಿ. ಮುನಿರಾಜ್ ಜೈನ್, ದೇವದಾಸ್ ಕುಲಾಲ್, ಗೌರವ ಪ್ರಧಾನ ಕೋಶಾಧಿಕಾರಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಗೌರವ ಜತೆ ಕೋಶಾಧಿಕಾರಿಗಳಾದ ತುಳಸಿದಾಸ್ ಅಮೀನ್, ತೋನ್ಸೆ ಸಂಜೀವ ಪೂಜಾರಿ, ವಕ್ತಾರ ದಯಾ ಸಾಗರ್ ಚೌಟ, ಮಾಜಿ ಅಧ್ಯಕ್ಷರುಗಳಾದ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ವಿಶ್ವನಾಥ್ ಮ್ಹಾಡಾ, ನ್ಯಾಯವಾದಿ ಸುಭಾಶ್ ಶೆಟ್ಟಿ, ಹರೀಶ್ ಕುಮಾರ್ ಶೆಟ್ಟಿ, ಧರ್ಮಪಾಲ್ ಯು. ದೇವಾಡಿಗ ಹಾಗೂ ಸಮಿತಿಯ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಸಮಾರಂಭವು ಜರಗಿತು.
ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹುಟ್ಟಿಕೊಂಡ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸರಕಾರೇತರ ಸಂಸ್ಥೆ ಸ್ಥಾಪನೆಯ ದಿನದಿಂದ ಸಂಸ್ಥೆಯ ಪ್ರಮುಖ ಸಲಹೆಗಾರರಾಗಿ ಸಮಿತಿಯ ಎಲ್ಲಾ ಅಭಿವೃದ್ಧಿಪರ ಯೋಜನೆಗಳಿಗೆ ಬೆನ್ನಲುಬಾಗಿ ಸಹಕರಿಸಿದ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರಿನಲ್ಲಿ ಪ್ರಸ್ತುತ ಸಮಿತಿಯ ಅಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರ ನೇತೃತ್ವದಲ್ಲಿ ಸಮಿತಿಯ ವತಿಯಿಂದ “ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣ ರಾಷ್ಟ್ರೀಯ ಪುರಸ್ಕಾರ-2019′ ನ್ನು ಸ್ಥಾಪಿಸಿರುವುದು ಹೆಮ್ಮೆಯ ವಿಷಯವಾಗಿದೆ. ಸಮಾರಂಭದಲ್ಲಿ ತುಳು-ಕನ್ನಡಿಗರು, ವಿವಿಧ ಜಾತೀಯ, ತುಳು-ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ ವರದಿ: ಸುಭಾಷ್ ಶಿರಿಯಾ