Advertisement

ಜಾರ್ಜ್ ಫ್ಲಾಯ್ಡ್ ಸಾವು ಪ್ರಕರಣ: ಬಿಳಿಯ ಅಧಿಕಾರಿ ಡೆರಿಕ್ ಚೌವೀನ್ ತಪ್ಪಿತಸ್ಥ ಎಂದ ಕೋರ್ಟ್!

08:10 AM Apr 21, 2021 | Team Udayavani |

ವಾಷಿಂಗ್ಟನ್: ಪೊಲೀಸರ ವಶದಲ್ಲಿದ್ದಾಗಲೇ ಸಾವೀಗೀಡಾಗಿದ್ದ ಕಪ್ಪು ವರ್ಣೀಯ ಜಾರ್ಜ್ ಪ್ಲಾಯ್ಡ್ ಪ್ರಕರಣದಲ್ಲಿ ಬಿಳಿ ವರ್ಣೀಯ ಪೊಲೀಸ್ ಅಧಿಕಾರಿ ಡೆರಿಕ್ ಚೌವೀನ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ.

Advertisement

ಕಳೆದ  ವರ್ಷದ ಮೇ 25ರಂದು ಫ್ಲಾಯ್ಡ್ ಸಾವೀಗೀಡಾಗುವ ಮೊದಲು ಅವರ ಕತ್ತನ್ನು ಪೊಲೀಸ್ ಅಧಿಕಾರಿ ಡೆರಿಕ್ ಚೌವೀನ್ ಸುಮಾರು 9 ನಿಮಿಷ ಮೊಣಕಾಲಿನಿಂದ ಅದುಮಿದ್ದರು. ಈ ವಿಚಾರ ಹೊರ ಬೀಳುತ್ತಿದ್ದಂತೆ ವ್ಯಾಪಕ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿತ್ತು. ಜನಾಂಗೀಯ ಭೇದದ ಕುರಿತು ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಫ್ಲಾಯ್ಡ್ ಸಾವಿಗೆ ಕಾರಣರಾದ ಡೆರಿಕ್ ಮತ್ತು ಇತರ ಮೂವರು ಪೊಲೀಸರ ವಿರುದ್ಧ ಫ್ಲಾಯ್ಡ್ ಕುಟುಂಬ ದಾವೆ ಹೂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next