ಹೊಸದೆಹಲಿ: ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿ ನಿಧನರಾಗಿದ್ದಾರೆ. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಫರ್ನಾಂಡಿಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು.
ಮೂಲತಃ ಮಂಗಳೂರಿನವರಾದ ಜಾರ್ಜ್ ಫರ್ನಾಂಡಿಸ್, 1930 ಜೂನ್ 3 ರಂದು ಜನಿಸಿದ್ದರು. ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದರು.
ಜನತಾ ದಳದಲ್ಲಿದ್ದ ಜಾರ್ಜ್ ಫರ್ನಾಂಡಿಸರು ನಂತರ ತಮ್ಮದೇ ಸಮತಾ ಪಕ್ಷ ಆರಂಭಿಸಿದ್ದರು. ಬಿಹಾರದಿಂದ ರಾಜ್ಯಸಭೆಗೆ ಪ್ರತಿನಿಧಿಸುತ್ತಿದ್ದ ಜಾರ್ಜ್ ಫರ್ನಾಂಡಿಸರು ವಾಜಪೇಯಿ ಸರಕಾರದಲ್ಲಿ ರಕ್ಷಣಾ ಸಚಿವರಾಗಿದ್ದರು, ವಿ.ವಿ.ಸಿಂಗ್ ಸರಕಾರದಲ್ಲಿ ರೈಲ್ವೆ ಸಚಿವರಾಗಿದ್ದರು
ಕೊಂಕಣ ರೈಲ್ವೇ ಗರಿಮೆ: ಕೇಂದ್ರ ರೈಲ್ವೇ ಸಚಿವರಾಗಿದ್ದ ಸಮಯದಲ್ಲಿ ಜಾರ್ಜ್ ಫರ್ನಾಂಡಿಸ್ ಮಂಗಳೂರಿನ ತೊಕ್ಕೊಟ್ಟುವಿನಿಂದ ಮಹಾರಾಷ್ಟ್ರದ ರತ್ನಗಿರಿವರೆಗೆ ರೈಲ್ವೇ ಮಾರ್ಗ ನಿರ್ಮಾಣ ಮಾಡಿದ್ದರು. ಇದರಿಂದ ಮಂಗಳೂರು- ಮುಂಬೈ ನಡುವಿನ ಸಂಪರ್ಕ ಸುಲಭವಾಗಿತ್ತು.