Advertisement

Assam 19 ಉತ್ಪನ್ನಗಳಿಗೆ ಭೌಗೋಳಿಕ ಮಾನ್ಯತೆ

12:06 AM Apr 01, 2024 | Team Udayavani |

ಗುವಾಹಾಟಿ: ಪ್ರಸಿದ್ಧ ಬಿಹೂ ನೃತ್ಯಗಳಲ್ಲಿ ಬಳಸಲಾಗುವ “ಬಿಹೂ’ ಢೋಲು, ಬಿದಿರಿನಿಂದ ತಯಾರಿಸಲಾದ ಸಾಂಪ್ರದಾಯಿಕ “ಜಾಪೀ’ ಟೋಪಿ ಸೇರಿ ಅಸ್ಸಾಂನ 19 ಸಾಂಪ್ರದಾಯಿಕ ಉತ್ಪನ್ನಗಳಿಗೆ ಭೌಗೋಳಿಕ ಮಾನ್ಯತೆ(ಜಿ.ಐ. ಟ್ಯಾಗ್‌) ದೊರೆತಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರವಿವಾರ ಹೇಳಿದ್ದಾರೆ.

Advertisement

ಇವುಗಳಲ್ಲಿ ಬಹುತೇಕ 13 ಉತ್ಪನ್ನಗಳು ಬೋಡೊ ಬುಡಕಟ್ಟು ಸಮುದಾಯಕ್ಕೆ ಸೇರಿದವು. “ಬೋಡೊ ಸಮುದಾಯದ ನಾಯಕ “ಬೋಡೊಫಾ ಉಪೇಂದ್ರನಾಥ ಬ್ರಹ್ಮ’ ಅವರ ಜನ್ಮ ಮಹೋತ್ಸವಕ್ಕೆ ಇದಕ್ಕಿಂತಲೂ ಸಿಹಿ ವಿಚಾರ ಬೇಕೇ? ಸಾಂಪ್ರದಾಯಿಕ ಉತ್ಪನ್ನಗಳಿಗೆ ಭೌಗೋಳಿಕ ಮಾನ್ಯತೆ ದೊರೆತಿದ್ದು, ಕನಿಷ್ಠ 1 ಲಕ್ಷ ಸ್ಥಳೀಯರಿಗೆ ನೇರ ಲಾಭವಾಗಲಿದೆ’ ಎಂದು ಶರ್ಮಾ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next