Advertisement

Citizenship: ವಲಸಿಗರಿಗೆ ಪೌರತ್ವ ನೀಡುವ ಮಾನ್ಯತೆ ಎತ್ತಿಹಿಡಿದ ಸುಪ್ರೀಂಕೋರ್ಟ್‌

01:40 AM Oct 18, 2024 | Team Udayavani |

ಹೊಸದಿಲ್ಲಿ: 1966ರ ಜ.1ರಿಂದ 1971ರ ಮಾ.25ರೊಳಗೆ ಅಸ್ಸಾಂಗೆ ಬಂದಿರುವ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಪೌರತ್ವ ಕಾಯ್ದೆಯ ಸೆಕ್ಷನ್‌ 6ಎಯ ಸಾಂವಿಧಾನಿಕ ಮಾನ್ಯತೆಯನ್ನು ಗುರುವಾರ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. 4:1 ಅನುಪಾತದಲ್ಲಿ ಈ ತೀರ್ಪು ಹೊರಬಿದ್ದಿದೆ.

Advertisement

ಅಕ್ರಮ ವಲಸೆ ಸಮಸ್ಯೆಗೆ ಮುಕ್ತಿ ಹಾಡಲು ಅಸ್ಸಾಂ ಒಪ್ಪಂದವು ಒಂದು ರಾಜಕೀಯ ಪರಿಹಾರವಾಗಿದೆ ಎಂದು ಸಿಜೆಐ ಡಿ.ವೈ.ಚಂದ್ರಚೂಡ್‌ ನೇತೃತ್ವದ 5 ನ್ಯಾಯಮೂರ್ತಿಗಳ ಪೀಠ ಹೇಳಿದೆ. ರಾಜ್ಯದಲ್ಲಿ ಬೇರೆ ಬೇರೆ ಜನಾಂಗೀಯ ಗುಂಪುಗಳು ವಾಸವಿದೆ ಎಂದ ಮಾತ್ರಕ್ಕೆ ಅದು ಸಂವಿಧಾನದ 29(1)ನೇ ವಿಧಿ ಉಲ್ಲಂಘನೆಯಾಗುವುದಿಲ್ಲ. ನಾವೂ ಬದು ಕ ಬೇಕು, ಇತರರನ್ನೂ ಬದುಕಲು ಬಿಡಬೇಕು ಎಂಬ ತಣ್ತೀದ ಪಾಲನೆ ಮುಖ್ಯ ಎಂದು ಪೀಠ ಹೇಳಿದೆ.

ಇದೇ ವೇಳೆ, ನ್ಯಾ| ಜೆ.ಬಿ.ಪರ್ದಿವಾಲಾ ವಿರುದ್ಧ ತೀರ್ಪು ನೀಡಿದ್ದು, ಸಂವಿಧಾನದ 6ಎ ವಿಧಿಯು ಅಸಾಂವಿಧಾನಿಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಸೆಕ್ಷನ್‌ 6ಎ ಅಕ್ರಮ ವಲಸಿಗರಿಗೆ ವಿಶೇ ಷ ವಾಗಿ ಬಾಂಗ್ಲಾ ದೇಶಿಯರಿಗೆ ಭಾರತದ ಪೌರತ್ವ ನೀಡುವ ನಿಬಂಧನೆ. 1985ರ ರಾಜೀವ್‌ ಗಾಂಧಿ ಸರಕಾರದಲ್ಲಿ ಇದು  ಸೇರ್ಪಡೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next