ಕುಷ್ಟಗಿ: ಈ ಡಿವೈಸ್ ಅಳವಡಿಸಿಕೊಂಡರೆ 160 ಡಿಗ್ರಿ ಅ್ಯಂಗಲ್ ನಲ್ಲಿ ಹಾಗೂ 8 ಮೀಟರ್ ದೂರದಿಂದ ಸೆನ್ಸಾರ್ ಮೂಲಕ ಗುರುತಿಸಿ ಅನ್ಯ ವ್ಯಕ್ತಿ ಬಂದಿರುವ ಮಾಹಿತಿ ನೀಡುವ GSM ಮೋಷನ್ ಸೆನ್ಸಾರ್ ನ ಜೀನಿಯಸ್ ಡಿವೈಸ್ ನ್ನು ಕುಷ್ಟಗಿ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಕಛೇರಿ ಪರಿಚಯಿಸಿದೆ.
ತಾಲೂಕಿನಲ್ಲಿ ಕಳ್ಳತನ ಹಾವಳಿಗೆ ಬ್ರೇಕ್ ಹಾಕಲು ಜಿಎಸ್ ಎಂ ಸಿಸ್ಟಮ್ ಹಾಗೂ ಕನೆಕ್ಟೆಟೆಡ್ ಅಲಾರಾಂ ಈ ತಾಂತ್ರಿಕ ಸಾಧನದ ಮಹತ್ವ, ಕಾರ್ಯ ವಿಧಾನ ಮಾಹಿತಿಯನ್ನು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿಯನ್ನು ಸುದ್ದಿಗಾರರಿಗೆ ವಿವರಿಸಿದರು.
ಕುಷ್ಟಗಿ ತಾಲೂಕಿನ ವಿವಿಧ ಶಾಲೆ ಹಾಗೂ ಕಚೇರಿ, ವಾಣಿಜ್ಯ ಮಳಿಗೆಯಲ್ಲಿ ಪದೇ ಪದೇ ಕಳ್ಳತನ ತಡೆಗಟ್ಟಲು, ಕಳ್ಳತನದ ಮೊದಲೇ ಜೀನಿಯಸ್ ಟೆಕ್ನಾಲಜಿ ರೂಪಿಸಿರುವ ಅತ್ಯಾಧುನಿಕ ಹಾಗೂ ಈಗಾಗಲೇ ಚಾಲ್ತಿಯನ್ನು ಡಿವೈಸ್ ಬಳಸಿಕೊಳ್ಳಲು ನಿರ್ಧರಿಸಿದೆ. ಈ ಡಿವೈಸ್ 6ಸಾವಿರ ರೂ ಮೊತ್ತವಿದ್ದು ಯಾರೂ ಬೇಕಾದರೂ ಡಿವೈಸ್ ಅಳವಡಿಸಿಕೊಳ್ಳಬಹುದು.
ಇದಕ್ಕೆ ಒತ್ತಾಯವಿಲ್ಲ ಈ ಸಾಧನೆ ಬೇಕಿದ್ದರೆ ಸಹಾಯ ಹಾಗೂ ಮಾಹಿತಿ ನೀಡುವುದಷ್ಟೇ ಎಂದರು. ಇದರಿಂದ ಚಾಲಾಕಿ ಕಳ್ಳರ ಹಾವಳಿ ತಗ್ಗಿಸಲು, ನಿಖರ ಮಾಹಿತಿ ಕಳ್ಳರನ್ನು ಹಿಡಿಯಲು ಸಾದ್ಯವಾಗುತ್ತದೆ. ಇದರಿಂದ ಪೊಲೀಸರಿಗೂ ಕಾರ್ಯಾಚರಣೆ ಸಲೀಸು ಆಗಲಿದೆ. ಈ ಡಿವೈಸ್ ಅಳವಡಿಸಿಕೊಂಡ ಪ್ರದೇಶದಿಂದ 8 ಮೀಟರ್ ಅಂತರ ಹಾಗೂ 160 ಡಿಗ್ರಿ ದಿಕ್ಕಿನ ವ್ಯಾಪ್ತಿಯಲ್ಲಿ ಯಾರೇ ವ್ಯಕ್ತಿ ಕಳ್ಳತನಕ್ಕೆ ಯತ್ನಿಸಿದರೆ ಅಂದರೆ ಕಿಟಕಿ ಹಾಗೂ ಬಾಗಿಲು ಮುರಿಯುವ ಯತ್ನ ಮಾಡಿದರೆ ಡಿವೈಸ್ ಜಾಗೃತ ಗೊಂಡು ಏಕಕಾಲಕ್ಕೆ ಡಿವೈಸ್ ನಲ್ಲಿ ಎಂಟ್ರೀ ಮಾಡಿದ 5 ಜನರಿಗೆ ಅಲಾರಂ ಸೈರನ್ ಮಾಹಿತಿ ಮೊಬೈಲ್ ಗೆ ರವಾನೆಯಾಗುತ್ತಿದೆ. ತತಕ್ಷಣವೇ ಕಾರ್ಯಾಚರಣೆ ಗೆ ಇಳಿದು ಕಳ್ಳತನ ತಡೆಯಬಹುದು ಹಾಗೂ ಕಳ್ಳರನ್ನು ಬಂಧಿಸಲು ಸಾದ್ಯವಿದೆ ಎಂದರು.
ಹೊರ ವಲಯದ ಒಂಟಿ ಮನೆ, ಉದ್ಯಮ, ಮನೆಗಳಿಗೆ ಈ ಡಿವೈಸ್ ಸಾದನ ಸಲಕರಣೆ ಅಳವಡಿಸಿಕೊಂಡು ಕಳ್ಳತನ ಹಾವಳಿ ಮಟ್ಟಹಾಕಬಹುದಾಗಿದೆ. ಕಳ್ಳತನಕ್ಕೆ ಯತ್ನಿಸುವ ಕಳ್ಳರಿಗೆ ಗಮನಕ್ಕೆ ಬಾರದೇ ಈ ನಿಖರ ಹಾಗೂ ಕರಾರುವಾಕ್ಕಾದ ತಂತ್ರಗಾರಿಕೆ ಇದಾಗಿದೆ. ಈಗಾಗಲೇ ಹಲವೆಡೆ ಈ ಡಿವೈಸ್ ಅಳವಡಿಸಲಾಗುವುದು ಎಂದರು. ಕಾರ್ಯನಿರ್ವಣೆಯ ವಿಧಾನವನ್ನು ಗಂಗಾಧರ ಬೆಳವಿನಹಾಳ ಪ್ರಾತ್ಯೇಕ್ಷತೆಯ ಮೂಲಕ ಮಾಹಿತಿ ನೀಡಿದರು. ಇದೇ ವೇಳೆ ಕುಷ್ಟಗಿ ಪಿಎಸೈ ತಿಮ್ಮಣ್ಣ ನಾಯಕ, ಕ್ರೈಂ ಪಿಎಸೈ ಮಾನಪ್ಪ ವಾಲ್ಮೀಕಿ ಇದ್ದರು.