Advertisement

ರಾಷ್ಟ್ರಪತಿಗಳಿಂದ ಜ|ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆ

12:36 AM Feb 07, 2021 | Team Udayavani |

ಮಡಿಕೇರಿ: ಅಪ್ರತಿಮ ಸೇನಾನಿ ಮತ್ತು ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದ ಜ|ತಿಮ್ಮಯ್ಯ ಅವರ ಸ್ಮಾರಕ ವಸ್ತು ಸಂಗ್ರಹಾಲಯವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಶನಿವಾರ ಲೋಕಾರ್ಪಣೆಗೊಳಿಸಿದರು.

Advertisement

ಜ| ತಿಮ್ಮಯ್ಯ ಅವರು ಹುಟ್ಟಿ ಬೆಳೆದ ನಿವಾಸವಾದ ಜ|ತಿಮ್ಮಯ್ಯ ರಸ್ತೆಯ “ಸನ್ನಿಸೈಡ್‌’ ನಲ್ಲಿ ಮ್ಯೂಸಿಯಮ್ಮನ್ನು ರಾಷ್ಟ್ರಪತಿಗಳು ಉದ್ಘಾಟಿಸಿದರು. ಕೋವಿಂದ್‌ ಅವರು ಕೊಡಗಿಗೆ ಆಗಮಿಸಿದ ತೃತೀಯ ರಾಷ್ಟ್ರಪತಿ. ಶನಿವಾರ ಮಧ್ಯಾಹ್ನ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ನಗರದ ಹೆಲಿಪ್ಯಾಡ್‌ಗೆ ಬಂದಿಳಿದ ರಾಷ್ಟ್ರಪತಿಯವರನ್ನು ಸಚಿವರಾದ ಅರವಿಂದ ಲಿಂಬಾವಳಿ, ವಿ. ಸೋಮಣ್ಣ ಬರ ಮಾಡಿ ಕೊಂಡರು.

ಬಳಿಕ ನಗರದ ಹೊರವಲಯದ ರೆಸಾರ್ಟ್‌ಗೆ ತೆರಳಿದ ರಾಷ್ಟ್ರಪತಿಯವರು ಅಪರಾಹ್ನ 3 ಗಂಟೆಗೆ ಜನರಲ್‌ ತಿಮ್ಮಯ್ಯ ವಸ್ತುಸಂಗ್ರಹಾಲಯಕ್ಕೆ ಆಗಮಿಸಿದರು. ಯುದ್ಧ ಟ್ಯಾಂಕ್‌, ಯುದ್ಧ ವಿಮಾನ ವೀಕ್ಷಿಸಿ ಅನಂತರ ಯುದ್ಧ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಪ್ರಥಮ ಮಹಿಳೆ ಸವಿತಾ ಕೋವಿಂದ್‌, ಮೂರು ಪಡೆಗಳ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಉಪಸ್ಥಿತರಿದ್ದರು.

ಪ್ರೇರಕ ಶಕ್ತಿ
ಮ್ಯೂಸಿಯಂ ಜ| ತಿಮ್ಮಯ್ಯ ಅವರಂತಹ ವೀರ ಪರಂಪರೆಯನ್ನು ಮುನ್ನಡೆಸಲು ಯುವ ಸಮೂಹಕ್ಕೆ ಪ್ರೇರಕ ಶಕ್ತಿಯಾಗಿದೆ. ಜ| ಕೆ.ಎಸ್‌. ತಿಮ್ಮಯ್ಯ ಮತ್ತು ಫೀ|ಮಾ| ಕೆ.ಎಂ. ಕಾರ್ಯಪ್ಪ ಅವರಂತಹ ವೀರ ಸೇನಾನಿಗಳನ್ನು ನೀಡಿರುವ ಹೆಮ್ಮಯ ನಾಡು ಕೊಡಗು.
ಸಂದರ್ಶಕರ ಪುಸ್ತಕದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಬರಹ.

Advertisement

Udayavani is now on Telegram. Click here to join our channel and stay updated with the latest news.

Next